ಭೂ ಸೇನೆಯಲ್ಲಿ ಸೇವೆ ಸಲ್ಲಿಸಿದ ತಿರುಮಲೇಶ್ವರ ಕಡ್ತಲ್‌ಕಜೆ (ಅಬೀರ)ರವರು 24 ವರ್ಷಗಳ ಸೇವೆ ಸಲ್ಲಿಸಿ ಸೆ.30ರಂದು ಸೇವೆಯಿಂದ ನಿವೃತ್ತಿಗೊಂಡಿದ್ದಾರೆ.
ಇವರು ತಮ್ಮ ವಿದ್ಯಾಭ್ಯಾಸವನ್ನು 1 ರಿಂದ 7ನೇ ತರಗತಿಯವರೆಗೆ ಪ್ರಾಥಮಿಕ ಶಾಲೆ ವಳಲಂಬೆಯಲ್ಲಿ, 8 ರಿಂದ ಪ್ರಥಮ ಪಿಯುಸಿಯನ್ನು ಗುತ್ತಿಗಾರು ಪದವಿ ಪೂರ್ವ ಕಾಲೇಜಿನಲ್ಲಿ ಪೂರೈಸಿದರು. ಇವರು ಸೆ.2000ರಲ್ಲಿ ಪಿಯುಸಿ ಓದುತ್ತಿದ್ದಾಗಲೇ ಸೇನೆಗೆ ಆಯ್ಕೆಗೊಂಡರು. ಒಟ್ಟು 24 ವರ್ಷಗಳ ಕಾಲ ದೇಶಸೇವೆ ಸಲ್ಲಿಸಿದ್ದಾರೆ.
ಇವರು Mechanised Infantry Regiment Centre(MIRC) ಮಹಾರಾಷ್ಟ್ರದ ಅಹ್ಮದನಗರದಲ್ಲಿ 2001ರವೆಗೆ ತರಬೇತಿಯನ್ನು ಪಡೆದರು.
ಇವರು 2001 ರಿಂದ 2004 ರಾಜಸ್ಥಾನ್‌ದ ಬಿಕನೇರ್ (Bikaner), ), 2004 ರಿಂದ 2006 ರಾಜಸ್ತಾನದ ಬಾರ್ಮೆರ್ (Barmer), 2006 ರಿಂದ 2008 ವರೆಗೆ (ಟ್ರೈನಿಂಗ್ ಸೆಂಟರ್)ಯಲ್ಲಿ ಹೊಸ ಹುಡುಗರಿಗೆ ತರಬೇತುದಾರರಾಗಿ (Traning Master), 2008ರಿಂದ 2010 ಮಧ್ಯಪ್ರದೇಶದ ಭೋಪಾಲ್ (Bhopal), 2011 ರಿಂದ 2013 ದೆಹರಡೂನ್ (Dehradun ), 2013 ರಿಂದ 2014 ಬಿಕನೇರ್(Bikaner) 2014 ರಿಂದ 2016 ರಾಷ್ಟೀಯ ರೈಫಲ್ (Rashtriya Rifle )(RR) ಜಮ್ಮು ಕಾಶ್ಮೀರ, 2017ರಲ್ಲಿ 6 ತಿಂಗಳು
UNO (United Nation Operation) ದಕ್ಷಿಣ ಆಫ್ರಿಕಾ ದ ಕಾಂಗೋ (congo), 2018 ರಿಂದ 2019 Barmer Rajastana , 2020 ರಿಂದ 2023 Jaisalmer ರಾಜಸ್ಥಾನ್, 2024 ಕೊನೆಯದಾಗಿ (Leh Ladakh)ಲಡಾಕ್ ನ ಚೀನಾ ಬಾರ್ಡರ್ ಗೆ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸಿದ್ದಾರೆ.
ಇವರು ಗುತ್ತಿಗಾರು ಕಡ್ತಲ್ ಕಜೆ (ಅಬೀರ) ದಿ||ಪುಟ್ಟಣ್ಣ ಗೌಡ ಮತ್ತು ಶ್ರೀಮತಿ ಕಮಲ ದಂಪತಿಗಳ ಪುತ್ರ. ಇವರ ಪತ್ನಿ ಯಶೋದ ಪಿ.ರವರು ಪ್ರಯೋಗಶಾಲಾ ತಾಂತ್ರಿಕಾಧಿಕಾರಿಯಾಗಿ ವಾಮದಪದವು ಸಮುದಾಯ ಆರೋಗ್ಯ ಕೇಂದ್ರದಲ್ಲಿ 13 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ರ ಗುರುಕಿರಣ ಕೆ.ಟಿ. Sacred Heart English Medium School ಮಡಂತ್ಯಾರು ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದಾನೆ.