ತೊಡಿಕಾನ ದೇವಸ್ಥಾನದ ನೂತನ ಆಡಳಿತ ಸಮಿತಿಯ ವಿಚಾರವಾಗಿ ತೀರ್ಥರಾಮ ಪರ್ನೋಜಿ ಎಂಬವರು ಸೆ.25 ರಂದು ಪತ್ರಿಕಾಗೋಷ್ಠಿ ನಡೆಸಿದ್ದರು. ಈ ವೇಳೆ ಮಾತನಾಡಿದ ಅವರು ಆಲೆಟ್ಟಿ ಗ್ರಾಮದ ಸತ್ಯಪ್ರಸಾದ್ ಗಬಲ್ಕಜೆ ಅವರನ್ನು ಉಲ್ಲೇಖಿಸಿ ಜಾತಿ ನಿಂದನೆಯಾಗುವಂತೆ ಮಾತನಾಡಿದ್ದರು. ಮಾಧ್ಯಮಗಳಲ್ಲಿ ವಿಡಿಯೋ ಸಹಿತ ವರದಿ ಪ್ರಸಾರಗೊಂಡಾಗ ತೀರ್ಥರಾಮರವರು ಜಾತಿ ನಿಂದನೆ ಮಾಡಿರುವ ವಿಚಾರ ಹಾಗೂ ಈ ಹಿಂದೆ ದೇವಸ್ಥಾನಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿರುವ ವಿಚಾರ ಸತ್ಯಪ್ರಸಾದ್ ಗಬಲ್ಕಜೆ ಯವರಿಗೆ ತಿಳಿದು ಈ ಬಗ್ಗೆ ಕೇಸು ದಾಖಲಿಸುವ ನಿರ್ಧಾರಕ್ಕೆ ಬಂದಿದ್ದರು.
ಈ ವಿಷಯವನ್ನು ತಾನು ತೀರ್ಥರಾಮರೊಡನೆ ಹೇಳಿದ ಮರುದಿನವೇ ತಮ್ಮ ಮನೆಗೆ ರಾಮಕೃಷ್ಣ ಕುಂಟುಕಾಡು ಜತೆಗೆ ಬಂದು ನನ್ನಿಂದ ತಪ್ಪಾಯಿತು. ಇನ್ನೂ ಮುಂದೆ ದೇವಸ್ಥಾನ ವಿಚಾರದಲ್ಲಿ ಮುಂದುವರೆಯುವುದಿಲ್ಲ ಎಂದು ಹೇಳಿದ್ದರಿಂದ ಕೇಸು ದಾಖಲಿಸುವ ಬಗ್ಗೆ ನಿರ್ಧಾರ ಹಿಂತೆಗೆದುಕೊಂಡಿದ್ದೇನೆ ಎಂದು ಸತ್ಯ ಪ್ರಸಾದ್ ಗಬಲ್ಕಜೆ ಅಮರ ಸುದ್ದಿಗೆ ತಿಳಿಸಿದ್ದಾರೆ.