Ad Widget

ಸೆ.21 : ಮನೆಯಿಂದಲೇ ನಿರ್ವಹಿಸಬಹುದಾದ ಉದ್ಯೋಗ ಅವಕಾಶಗಳ ಮಾಹಿತಿ ಮತ್ತು ಸಂದರ್ಶನ

ಸುಳ್ಯದ ಸಂಧ್ಯಾ ರಶ್ಮಿ ಸಭಾಭವನ { ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು } ಕುರುಂಜಿಭಾಗ್ ನಲ್ಲಿ ಮೈಲ್ಯಾಂಪ್ ನೇಚರ್ ಕನೆಕ್ಟ್ ಸಂಸ್ಥೆಯ ವತಿಯಿಂದ ಮನೆಯಿಂದಲೇ ನಿರ್ವಹಿಸಬಹುದಾದ ಉದ್ಯೋಗ ಮಾಹಿತಿ ಮತ್ತು ಸಂದರ್ಶನ ಕಾರ್ಯಕ್ರಮ ಸೆಪ್ಟೆಂಬರ್ 21 ಶನಿವಾರದಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1:30ರ ತನಕ ಆಯೋಜನೆಗೊಂಡಿದೆ. ಕಾರ್ಯಕ್ರಮದಲ್ಲಿ 50 ಜನರಿಗೆ ಮಾತ್ರ ಅವಕಾಶವಿದ್ದು ಆಸಕ್ತರು...

ಪೆರುವಾಜೆಯಲ್ಲಿ ಬೃಹತ್ ಸ್ವಚ್ಛತಾ ಆಂದೋಲನ

ಜೇಸಿಐ ಬೆಳ್ಳಾರೆಯ ಜೇಸೀ ಸಪ್ತಾಹದ ಅಂಗವಾಗಿ ಬೃಹತ್ ಸ್ವಚ್ಛತಾ ಆಂದೋಲನ ಪೆರುವಾಜೆಯಲ್ಲಿ ನಡೆಯಿತು. ಪೆರುವಾಜೆ ಶ್ರೀ ಜಾಲದುರ್ಗಾ ದೇವಿ ದೇವಸ್ಥಾನದ ಮುಂಭಾಗದಲ್ಲಿ ಸ್ವಚ್ಛತಾ ಆಂದೋಲನಕ್ಕೆ ದೇವಸ್ಥಾನದ ಆಡಳಿತಧಿಕಾರಿ ಮತ್ತು ಪೆರುವಾಜೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ ಚಾಲನೆ ನೀಡಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಪೆರುವಾಜೆ ಡಾ. ಕೆ ಶಿವರಮ...
Ad Widget

ನಡುಗಲ್ಲು : ಅನಾರೋಗ್ಯದಿಂದ ಯುವಕ ಮೃತ್ಯು

ಮಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಕಲ್ಲಾಜೆ ಯುವಕನೋರ್ವ ಅಸೌಖ್ಯದಿಂದ ಸಾವನ್ನಪ್ಪಿದ ಘಟನೆ ಸೆ.16ರ ತಡರಾತ್ರಿ ಸಂಭವಿಸಿದೆ. ಕಲ್ಲಾಜೆ ನಿವಾಸಿ ಲಕ್ಷ್ಮಣಗೌಡರವರ ಪುತ್ರ ಲಿಖಿತ್ ಕಲ್ಲಾಜೆ(26) ಮೃತ ದುರ್ದೈವಿ.ಕಳೆದ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಲಿಖಿತ್ ಚಿಕಿತ್ಸೆ ಫಲಿಸದೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಮೃತರು ತಂದೆ, ತಾಯಿ, ಸಹೋದರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ 74 ನೇ ಹುಟ್ಟುಹಬ್ಬದ ಅಂಗವಾಗಿ ವಳಲಂಬೆ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ 74 ನೇ ಹುಟ್ಟುಹಬ್ಬದ ಅಂಗವಾಗಿ ವಳಲಂಬೆ ದೇವಸ್ಥಾನದಲ್ಲಿ ಬಿಜೆಪಿ ಮಂಡಲ ಸಮಿತಿ ಹಾಗೂ ಕಾರ್ಯಕರ್ತರಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ , ಜಿ.ಪಂ.ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕೃಷ್ಣಯ್ಯ ಮೂಲೆತೋಟ, ಯುವಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಶಕ್ತಿ ಕೇಂದ್ರದ ಅಧ್ಯಕ್ಷ...

ಜೇಸಿಐ ಸುಳ್ಯ ಪಯಸ್ವಿನಿ ಸುಳ್ಯ ವತಿಯಿಂದ ನಡೆದ ಜೇಸಿ ಸಪ್ತಾಹ ಸಮಾರೋಪ ಸಮಾರಂಭ, ಕಲಾಶ್ರೀ, ಪಯಸ್ವಿನಿಶ್ರೀ, ಕಮಲಪತ್ರ ಪ್ರಶಸ್ತಿ ಪ್ರದಾನ ಹಾಗೂ ಜೇಸಿ ಕುಟುಂಬ ಸಮ್ಮಿಲನ

ಜೆಸಿಐ ಸಪ್ತಾಹ 2024ನ್ನು ಈ ವರ್ಷ ಡೈಮಂಡ್ jc ವೀಕ್ ಆಗಿ ಒಂದು ವಾರಗಳ ಕಾಲ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಾಕಿಕೊಂಡು ಜೇಸಿಐ ಸುಳ್ಯ ಪಯಸ್ವಿನಿ(ರಿ) ಆಚರಿಸಿದ್ದು, ಸೆಪ್ಟೆಂಬರ್ 15ರಂದು ಸುಳ್ಯದ ಜ್ಯೋತಿ ವೃತ್ತದ ಬಳಿ ಇರುವ ಅಮೃತ ಭವನ ಸಭಾಂಗಣದಲ್ಲಿ ಜೇಸಿ ಸಪ್ತಾಹ ಸಮಾರೋಪ ಸಮಾರಂಭ, ಕಲಾಶ್ರೀ, ಪಯಸ್ವಿನಿಶ್ರೀ, ಕಮಲಪತ್ರ ಪ್ರಶಸ್ತಿ ಪ್ರದಾನ ಹಾಗೂ...

ಸುಳ್ಯ ನಗರ ಮಹಿಳಾ ಗೌಡ ಘಟಕದಿಂದ ಕೋಲ್ಚಾರು ಶಾಲಾ ಸಹ ಶಿಕ್ಷಕಿ ಜಲಜಾಕ್ಷಿಯವರಿಗೆ ಸನ್ಮಾನ

ಆಲೆಟ್ಟಿ ಗ್ರಾಮದ ಕೋಲ್ಚಾರು ಸ. ಉ. ಹಿ. ಪ್ರಾ. ಶಾಲೆಗೆ ಹೆಚ್.ಜಿ. ಗೋವಿಂದೇಗೌಡ ರವರ ಹೆಸರಿನಲ್ಲಿ ಕೊಡ ಮಾಡಲ್ಪಡುವ ರಾಜ್ಯಮಟ್ಟದ ಅತ್ಯುತ್ತಮ ಕನ್ನಡ ಶಾಲೆ ಎಂಬ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ನಗರ ಮಹಿಳಾ ಘಟಕದ ಸದಸ್ಯೆಯಾಗಿರುವ ಶಾಲಾ ಸಹ ಶಿಕ್ಷಕಿ ಜಲಜಾಕ್ಷಿ ರವರಿಗೆ ಸುಳ್ಯ ನಗರ ಮಹಿಳಾ ಗೌಡ ಘಟಕದಿಂದ ಅವರ ನಿವಾಸಕ್ಕೆ ಸೆ. 16...

ಜೇಸಿಐ ಸಪ್ತಾಹ – ಪೂಜಾ ಬೋರ್ಕರ್ ಗೆ ಒಲಿದ ಪ್ರತಿಷ್ಠಿತ ಕಲಾಶ್ರೀ ಪ್ರಶಸ್ತಿ

ಜೆಸಿಐ ಸಪ್ತಾಹ 2024ನ್ನು ಈ ವರ್ಷ ಡೈಮಂಡ್ ಜೇಸೀ ವೀಕ್ ಆಗಿ ಆಚರಿಸುತ್ತಿದ್ದು ಸೆಪ್ಟೆಂಬರ್ 15ರಂದು ಸುಳ್ಯದ ಜ್ಯೋತಿ ವೃತ್ತದ ಬಳಿ ಇರುವ ಅಮೃತ ಭವನ ಸಭಾಂಗಣದಲ್ಲಿ ಜೇಸಿ ಸಪ್ತಾಹ ಸಮಾರೋಪ ಸಮಾರಂಭ ನಡೆಯಿತು. ಈ ಸಂದರ್ಭ ದಲ್ಲಿ ಜೇಸಿಐ ಸುಳ್ಯ ಪಯಸ್ವಿನಿಯ 2024ರ ಪ್ರತಿಷ್ಠಿತ ಕಲಾಶ್ರೀ ಪ್ರಶಸ್ತಿಯನ್ನು ಖ್ಯಾತ ಪೆನ್ಸಿಲ್ ಆರ್ಟ್ ಕಲಾ ಪ್ರತಿಭೆ...

ಆಲ್‌ ಇಂಡಿಯಾ ತಲ್‌ ಸೈನಿಕ್‌ ಕ್ಯಾಂಪ್‌ನಲ್ಲಿ ಸಾಧನೆಗೈದ ಪೆರಾಜೆಯ ಶ್ರಾವ್ಯ ಅಡ್ಕ

ಮಡಿಕೇರಿ : ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಆಲ್‌ ಇಂಡಿಯಾ ತಲ್‌ ಸೈನಿಕ್‌ ಕ್ಯಾಂಪ್‌ನಲ್ಲಿ ಪೆರಾಜೆಯ ಶ್ರಾವ್ಯ ಎನ್ ಅಡ್ಕ ಸಾಧನೆಗೈದಿದ್ದಾರೆ. ಆ. ೩ರಿಂದ ೧೩ ರವರೆಗೆ ನಡೆದ ಕ್ಯಾಂಪ್‌ನಲ್ಲಿ ಕರ್ನಾಟಕ ಗೋವಾ ಡೈರೆಕ್ಟರೇಟ್‌ನಿಂದ ಆಯ್ಕೆಯಾಗಿದ್ದು, ಟೀಮ್ ಕ್ಯಾಪ್ಟನ್‌ ಆಗಿ ಇಡೀ ತಂಡವನ್ನು ಮುನ್ನಡೆಸಿದ ಕೀರ್ತಿಗೆ ಭಾಜನರಾಗಿದ್ದಾರೆ.ಈಕೆ ಸುಳ್ಯ ಸಂತ ಜೋಸೆಫರ ಶಾಲೆಯ ಹಳೆ ವಿದ್ಯಾರ್ಥಿನಿಯಾಗಿದ್ದು, ಪ್ರಸ್ತುತ...

ಗುತ್ತಿಗಾರು : ಅರಿವು ಕೇಂದ್ರದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯ ಅರಿವು ಕೇಂದ್ರದಲ್ಲಿ ಸೆ.15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಸಂವಿಧಾನ ಪ್ರಸ್ತಾವನೆಯನ್ನು ಕಂಠಪಾಠದೊಂದಿಗೆ ಪ್ರತಿಜ್ಞೆ ಸ್ವೀಕರಿಸಿ ಮಾನವ ಸರಪಳಿ ಮಾಡಿ ಸರಕಾರದ ಪ್ರಜಾಪ್ರಭುತ್ವ ಮಾನವ ಸರಪಳಿ ಎಂಬ ವಿಶಿಷ್ಟವಾದ ಕಾರ್ಯಕ್ರಮವನ್ನು ಆಚರಿಸಿ ಕೈಜೋಡಿಸಿದರು.ಈ ಸಂದರ್ಭದಲ್ಲಿ ಗ್ರಂಥಾಲಯ ಮೇಲ್ವಿಚಾರಕರಾದ ಶ್ರೀಮತಿ ಅಭಿಲಾಷಾ ಮೋಟ್ನೂರು ಮಾರ್ಗದರ್ಶನ ನೀಡಿ ಪ್ರಜಾಪ್ರಭುತ್ವ ದಿನದ...

ಕೊಲ್ಲಮೊಗ್ರು : ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಹಣ್ಣಿನ ಗಿಡ ನಾಟಿ

ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸುಬ್ರಹ್ಮಣ್ಯ ವಲಯ ಇದರ ವತಿಯಿಂದ ಸೆ.15 ರಂದು ಕೊಲ್ಲಮೊಗ್ರು ದಲ್ಲಿ ಸಾಮಾಜಿಕ ಅರಣ್ಯೀಕರಣ ಯೋಜನೆ ಕಾರ್ಯಕ್ರಮದ ಅಂಗವಾಗಿ 500 ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಯಿತು.ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷರಾದ ಮಾಧವ ಚಾಂತಾಳ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ...
Loading posts...

All posts loaded

No more posts

error: Content is protected !!