- Friday
- April 4th, 2025

ಸುಳ್ಯ:ಉಪನಿರೀಕ್ಷಕ ಈರಯ್ಯ ದೂಂತೂರು ಸೇರಿದಂತೆ ಠಾಣಾ ಸಿಬ್ಬಂದಿಗಳು ಅಜ್ಜಾವರ ಗ್ರಾಮದ ಮೇನಾಲದ ಕೆಸರುಗದ್ದೆಯಲ್ಲಿ ಸುಳ್ಯ ಪೊಲೀಸ್ ಠಾಣಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ವಿವಿಧ ಕ್ರೀಡೆಗಳನ್ನು ಆಡಿ ಸಂಭ್ರಮಿಸಿದರು. ಕೆಲಸದ ಒತ್ತಡಗಳ ನಡುವೆ ಪೊಲೀಸ್ ಅಧಿಕಾರಿಗಳಾದ ಈರಯ್ಯ ದೂಂತೂರು ನೇತೃತ್ವದಲ್ಲಿ ಸಿಬ್ಬಂದಿಗಳು ಪರಸ್ಪರ ಒಬ್ಬರನ್ನೊಬ್ಬರು ಕೆಸರಿಗೆ ತಳ್ಳಿ ಹಾಕಿ ಜೈಕಾರಗಳನ್ನು ಹಾಕಿಕೊಂಡು ಸಂತೋಷಪಟ್ಟರು.

ಕ್ರೀಡೆಗೆ ಎಲ್ಲರೂ ಪ್ರೋತ್ಸಾಹ ನೀಡಬೇಕು. ಕ್ರೀಡೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಉನ್ನತ ಸಾಧನೆಗೈಯುವಂತಾಗಲಿ ಅವರು ಶ್ರೀ ಪಿ ಎಸ್ ಗಂಗಾಧರ್ ಹೇಳಿದರು. ಅವರು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ಸಹಯೋಗದಲ್ಲಿ ಗೌಡ ಸಮುದಾಯ ಭವನ ಕೊಡಿಯಾಲಬೈಲ್ ಸುಳ್ಯ ಇಲ್ಲಿ ನಡೆದ ತಾಲೂಕು ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ...

ಸುಳ್ಯ: ಕಳೆದ ಹದಿನೈದಕ್ಕು ಹೆಚ್ಚು ತಿಂಗಳುಗಳಿಂದ ಸುಳ್ಯ ನಗರ ಪಂಚಾಯತ್‌ನ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ ತಹಶೀಲ್ದಾರ್ ಜಿ.ಮಂಜುನಾಥ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ನಗರ ಪಂಚಾಯತ್‌ಗೆ ನೂತನ ಅಧ್ಯಕ್ಷ, ಹಾಗೂ ಉಪಾಧ್ಯಕ್ಷ ಆಯ್ಕೆ ನಡೆದ ಹಿನ್ನಲೆಯಲ್ಲಿ ಆಡಳಿತಾಧಿಕಾರಿ ಅವರ ಅಧಿಕಾರ ಕೊನೆಗೊಂಡಿದೆ. ಈ ಹಿನ್ನಲೆಯಲ್ಲಿ ನಗರ ಪಂಚಾಯತ್‌ನಲ್ಲಿ ಸೆ.2ರಂದು ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ನ.ಪಂ. ಅಧ್ಯಕ್ಷೆ ಎ.ಶಶಿಕಲಾ...

ಅಜ್ಜಾವರ ಗ್ರಾಮದ ಕಾಂತಮಂಗಲ ಸೇತುವೆಯಿಂದ ನಿನ್ನೆ ನದಿಗೆ ಹಾರಿದ ಯುವಕನ ಮೃತದೇಹ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಅಡ್ಕ ನಿವಾಸಿ ಸುಮಾರು 23 ವರ್ಷದ ಸಿನಾನ್ ನಿನ್ನೆ ಹೊಳೆಗೆ ಹಾರಿದ್ದರು. ಇಂದು ಬೆಳಗ್ಗೆ ಉಪ್ಪಿನಂಗಡಿ ಮುಳುಗು ತಜ್ಞರ ತಂಡ ಮತ್ತು ಆರೋಗ್ಯ ರಕ್ಷಾ ಸಮಿತಿ ಸದಸ್ಯ ಅಚ್ಚು ಪ್ರಗತಿ ಸಹಿತ ಮತ್ತಿತರರ ಸಹಾಯದಿಂದ ಮೃತದೇಹವನ್ನು ಪತ್ತೆ ಮಾಡಿರುವುದಾಗಿ ತಿಳಿದುಬಂದಿದೆ.

ಮಳೆಹನಿಗಳು ನಾ ಮೇಲು-ತಾ ಮೇಲು ಎನ್ನುತ್ತಾ ಪುಟಿದುಒಂದಾಗಿ ಹರಿಯುವುದು ನೀ ಕಂಡಿಯಾ?ಇನ್ನೇಕೆ ನಮ್ಮೊಳಗಿನ ಜಗಳನಾವೆಲ್ಲರೂ ಒಂದೇ ಎಂದು ನೀ ಮರೆತೆಯಾ? ಮಳೆಗೆ ಬಾಗಿದ ಗಿಡಗಳು ಖುಷಿಯಾಗಿ ನಿಲ್ಲುವುದುತಾ ಬಾಗಿದರೂ, ಬಾಯಾರಿದ ಬೇರು ತನಿಯಿತೆಂದು..ಬಂದ ಕಷ್ಟವ ಎದುರಿಸಿ ನೀ ಧೈರ್ಯದಿ ನಿಲ್ಲು..ಅನುಭವಗಳಿಂದ ಗಟ್ಟಿಯಾದೆನೆಂದು.. ಗಾಳಿಯಾಡಲು ಖುಷಿಯಾದ ಮರಗಳುಭೂಮಿಯ ಮುಟ್ಟುವ ಯತ್ನದಲ್ಲಿ..ತಾನು ನಿಲ್ಲಲು ಭೂಮಿಯೇ ಕಾರಣವೆಂಬಹೆಮ್ಮೆ ಅವುಗಳಲ್ಲಿ.. ಖುಷಿಯಾಡೊಡನೆ...

ಸೆ.01 ಆದಿತ್ಯವಾರದಂದು ಕ್ರೈಸ್ತ ಅಲ್ಪಸಂಖ್ಯಾತರ ವಿವಿದೋದ್ದೇಶ ಸಹಕಾರಿ ಸಂಘದ 2023-24ನೇ ಸಾಲಿನ 15ನೇ ವಾರ್ಷಿಕ ಮಹಾಸಭೆಯು ದೇವಮ್ಮ ಕಾಂಪ್ಲೆಕ್ಸ್ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಬಿಟ್ಟಿ ಬಿ ನೆಡುನಿಲಂ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. 2023-24ನೇ ಸಾಲಿನಲ್ಲಿ ಸಂಘವು ಉತ್ತಮ ವ್ಯವಹಾರ ನಡೆಸಿರುತ್ತದೆ. ಮತ್ತು ಸಂಘದ ಸದಸ್ಯರಿಗೆ 12% ಡಿವಿಡೆಂಡ್ ನೀಡುವುದೆಂದು ತೀರ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಕೆ.ಪಾ...

ಭಾರತೀಯ ಜನತಾ ಪಾರ್ಟಿಯ ಮುಂದಿನ ಆರು ವರ್ಷಗಳ ಅವಧಿಯ ಸದಸ್ಯತ್ವ ಅಭಿಯಾನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ದೆಹಲಿಯಲ್ಲಿ ಚಾಲನೆ ನೀಡಿದ್ದು ಈ ಸಂದರ್ಭದಲ್ಲಿ ಸುಳ್ಯದಲ್ಲೂ ಸದಸ್ಯತ್ವ ಅಭಿಯಾನವನ್ನು ಆರಂಭಿಸಲಾಯಿತು. ಸುಳ್ಯದ ಬಿಜೆಪಿಯ ಹಿರಿಯರಾದಂತಹ ಸೀತ ಅಶೋಕ್ ಪ್ರಭುಗಳ ಮನೆಯಲ್ಲಿ ಅಶೋಕ್ ಪ್ರಭುಗಳು 8800002024 ಸಂಖ್ಯೆಗೆ ಮಿಸ್ ಕಾಲ್ ನೀಡುವ ಮೂಲಕ ಬಿಜೆಪಿಯ ಸದಸ್ಯತ್ವವನ್ನು ಪಡೆದುಕೊಂಡರು....

ಅಜ್ಜಾವರ ಗ್ರಾಮದ ಕಾಂತಮಂಗಲ ಸೇತುವೆಯಿಂದ ಹೊಳೆಗೆ ಯುವಕನೊಬ್ಬ ಬಿದ್ದಿದ್ದಾನೆಂದು ಜನರು ಸೇತುವೆಯ ಮೇಲೆ ಜಮಾಯಿಸಿರುವುದಾಗಿ ತಿಳಿದುಬಂದಿದೆ. ನೀರಿಗೆ ಬಿದ್ದವನು ಅಡ್ಪಂಗಾಯದ ಯುವಕ ಎನ್ನಲಾಗುತ್ತಿದೆ. ಹಾರಿದ್ದಾನೆಯೇ ಇಲ್ಲವೋ ಎಂಬುವುದು ಇನ್ನು ಖಚಿತವಾಗದೇ ಇದ್ದು ಸದ್ಯ ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳು ಆಗಮಿಸಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಾಗಿದೆ.

✍️ಉಲ್ಲಾಸ್ ಕಜ್ಜೋಡಿಮಳೆಗಾಲದ ಸಮಯದಲ್ಲಿ ನೀರಿನ ಹರಿವು ಹೆಚ್ಚಾಗಿ ನದಿಗಳು ತುಂಬಿ ಹರಿಯುವುದು ಸರ್ವೇಸಾಮಾನ್ಯ. ಕೆಲವೊಮ್ಮೆ ನೀರಿನ ಹರಿವು ಹೆಚ್ಚಾದಾಗ ನದಿಯ ನೀರು ರಸ್ತೆ, ಸೇತುವೆಗಳ ಮೇಲೆ ಹರಿದು ಕೆಲಹೊತ್ತು ಸಂಚಾರಕ್ಕೆ ತೊಡಕುಂಟಾಗುತ್ತದೆ. ಆದರೆ ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದ ಕೊಲ್ಲಮೊಗ್ರು ಪೇಟೆ ಸಮೀಪದಲ್ಲಿರುವ ಕೊಲ್ಲಮೊಗ್ರು ಮತ್ತು ಕಲ್ಮಕಾರು ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಮುಳುಗು ಸೇತುವೆಯೊಂದಿದ್ದು, ಪ್ರತೀ...

All posts loaded
No more posts