Ad Widget

ಬೆಳ್ಳಾರೆ : ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ವತಿಯಿಂದ ಶಿಕ್ಷಕರ ದಿನಾಚರಣೆ, ಸನ್ಮಾನ ; ಗುರುವಿನ ಸಹಾಯದಿಂದ ಗುರಿ ತಲುಪಲು ಸಾಧ್ಯ – ಸುಬ್ರಹ್ಮಣ್ಯ ಜೋಶಿ

ಪ್ರತಿಯೊಬ್ಬ ಸಾಧಕನ ಜೀವನದ ಗುರಿ ಗುರು ಹಾಕಿಕೊಟ್ಟ ಮಾರ್ಗದ ಮೇಲೆಯೇ ನಡೆಯುತ್ತದೆ. ಗುರುವಿನ ಸಹಾಯವಿಲ್ಲದೆ ಗುರಿ ತಲುಪಲು ಸಾಧ್ಯವಿಲ್ಲ ಎಂದು ಬೆಳ್ಳಾರೆ ಅಜಪಿಲ ಶ್ರೀ ಸದಾಶಿವ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ಬಿ ಸುಬ್ರಹ್ಮಣ್ಯ ಜೋಶಿ ಹೇಳಿದರು. ಅವರು ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ವತಿಯಿಂದ ಅಜಪಿಲ ಶ್ರೀ ಸದಾಶಿವ ಚಾರಿಟೇಬಲ್ ಸೊಸೈಟಿ ಆಡಳಿತದಲ್ಲಿ ನಡೆಸಲ್ಪಡುತ್ತಿರುವ...

ಬಾರ್ಪಣೆ : ಸೆ.07 ರಂದು ವಿಕ್ರಮ ಯುವಕ ಮಂಡಲದ ಆಶ್ರಯದಲ್ಲಿ 20ನೇ ವರ್ಷದ ಶ್ರೀ ಗಣೇಶ ಚತುರ್ಥಿ

ವಿಕ್ರಮ ಯುವಕ ಮಂಡಲ(ರಿ.) ಬಾರ್ಪಣೆ ಇದರ ಆಶ್ರಯದಲ್ಲಿ ಮಿತ್ರ ಭಜನಾ ಮಂಡಳಿ(ರಿ.) ಬಾರ್ಪಣೆ, ಮಿತ್ರ ಕಲಾ ವೇದಿಕೆ ಬಾರ್ಪಣೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ‘ಎ’ ಒಕ್ಕೂಟ ಆಲೆಟ್ಟಿ ಇವುಗಳ ಸಹಕಾರದೊಂದಿಗೆ ಸೆ.07 ರಂದು 20ನೇ ವರ್ಷದ ಶ್ರೀ ಗಣೇಶ ಚತುರ್ಥಿಯು ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ವಿವಿಧ ಕ್ರೀಡಾ ಸ್ಪರ್ಧೆ,...
Ad Widget

ಗುರುವಂದನಾ ಕಾರ್ಯಕ್ರಮ – ನಿವೃತ್ತ ಶಿಕ್ಷಕ ದೇವಪ್ಪ ಮಾಸ್ತರ್ ಗೆ ಗೌರವಾರ್ಪಣೆ

ಎಲಿಮಲೆ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಮರ್ಕಂಜದ ಬಳ್ಳಕ್ಕ ದೇವಪ್ಪ ಮಾಸ್ಟರ್ ಗೆ ಶಿಕ್ಷಕರ ದಿನಾಚರಣೆಯಂದು ಗೌರವ ಸಲ್ಲಿಸಲಾಯಿತು.‌ ಶಿಕ್ಷಕರ ಮನೆಗೆ ತೆರಳಿದ ದೇವಚಳ್ಳ ಗ್ರಾ.ಪಂ. ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ರಾಮಕೃಷ್ಣ ಅಂಬೆಕಲ್ಲು, ಕೇಶವ ಕಾಯರ, ಶೀಲಾವತಿ ರಾಮಕೃಷ್ಣ, ಧರ್ಮಪಾಲ ಮೆದು ಅವರು ದಂಪತಿಗಳಿಗೆ ಸನ್ಮಾನಿಸಿದರು.

ಸುಳ್ಯ ಪೊಲೀಸ್‌ ಠಾಣೆಗೆ ನೂತನ ಉಪ ನಿರೀಕ್ಷಕರಾಗಿ ಸಂತೋಷ್ ಅಧಿಕಾರ ಸ್ವೀಕಾರ

ಸುಳ್ಯ ಪೊಲೀಸ್‌ ಠಾಣೆಗೆ ನೂತನ ಉಪನಿರೀಕ್ಷಕರಾಗಿ ಸಂತೋಷ್ ರವರು ಸೆ. 5ರಂದು ಅಧಿಕಾರ ಸ್ವೀಕರಿಸಿದರು. ಸುಳ್ಯ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಈರಯ್ಯ ದೂಂತುರು ರವರು ಬೆಳ್ಳಾರೆ ಠಾಣೆಗೆ ವರ್ಗಾವಣೆಗೊಂಡಿದ್ದು ಬೆಳ್ಳಾರೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂತೋಷ್ ರವರು ಸುಳ್ಯಕ್ಕೆ ವರ್ಗಾವಣೆಗೊಂಡಿದ್ದರು.

ಶಿಕ್ಷಣ ಸೊರಗದಿರಲಿ, ಶಿಕ್ಷಕ ಬಲಿಷ್ಠನಾಗಲಿ

ಕಲ್ಲು ಕಲ್ಲೆಂದರೆ ಕಲ್ಲಲ್ಲಿಹುದೇ ದೈವ|ಕಲ್ಲಲ್ಲಿ ಕಲೆಯ ನಿಲ್ಲಿಸಿದ ಗುರುವಿನಸೊಲ್ಲಲ್ಲೇ ದೈವ ಸರ್ವಜ್ಞ || ಮಗದೊಮ್ಮೆ ಶಿಕ್ಷಕರ ದಿನಾಚರಣೆ ಬಂದಿದೆ. ಮತ್ತದೇ ಹಾರ, ತುರಾಯಿ, ಬಿರುದು ಬಾವಲಿಗಳು ಒಂದಷ್ಟು ಶಿಕ್ಷಕರನ್ನು ವೇದಿಕೆಗೆ ಕರೆತಂದು ಹೊಗಳಿ ಹೊನ್ನಶೂಲಕ್ಕೆ ಏರಿಸಿ ಸನ್ಮಾನ ಮಾಡುವುದು ಸಂಪ್ರದಾಯವಾಗಿ ಬಿಟ್ಟಿದೆ. ಮರುದಿನದಿಂದ ಮತ್ತದೇ ರಾಗ, ಮತ್ತದೇ ಹಾಡು. ಶಿಕ್ಷಕರನ್ನು ಕೈ ಕಾಲು ಬಾಯಿ ಕಟ್ಟಿ...

ಸುಳ್ಯ ಶಾಸಕರ ಆಪ್ತ ಸಹಾಯಕ ಅವಿನಾಶ್ ಕರ್ತವ್ಯದಿಂದ ಬಿಡುಗಡೆ.

ಸುಳ್ಯ : ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯರವರ ಸರಕಾರಿ ಆಪ್ತ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಈ ಹಿಂದೆ ಆಪ್ತ ಸಹಾಯಕರಾಗುವ ಮೊದಲು ಒಳಮೊಗ್ರ ಪಂಚಾಯತ್ ನಲ್ಲಿ ಅಭಿವೃದ್ಧಿ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ್ದು ಇದೀಗ ಅವರು ತಮ್ಮ ಜವಬ್ದಾರಿಯಿಂದ ಸ್ವಾ ಇಚ್ಚೇಯಿಂದ ಬಿಡುಗಡೆ ‌ ಹೊಂದಿದ್ದು ನೂತನ ಸರಕಾರಿ ಆಪ್ತ ಸಹಾಯಕರ ನೇಮಕವಾಗಬೇಕಿದೆ.

ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನದಂದು 35 ಸಾವಿರ ಜನರಿಂದ ಮಾನವ ಸರಪಳಿ

ಕನಕಮಜಲಿನಿಂದ ಸಂಪಾಜೆ ವರೆಗೆ ಏಕ ಕಾಲದಲ್ಲಿ ಮಾನವ ಸರಪಳಿ ರಚನೆ . ಸುಳ್ಯ: ದೇಶದ ನಾಗರೀಕರಿಗೆ ವಿಶೇಷವಾಗಿ ಕರ್ನಾಟಕದ ನಾಗರೀಕರಿಗೆ ಅರಿವು ಮೂಡಿಸುವ ಸಲುವಾಗಿ 2024-25ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ದಿನಾಂಕ: 15.09.2024ರಂದು ಮಾನವ ಸರಪಳಿ ರಚನೆಯ ಕುರಿತ ಪೂರ್ವಭಾವಿ ಸಭೆಯು...

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರಿಗೆ ಶಿಕ್ಷಕರ ದಿನಾಚರಣೆ ಸಲುವಾಗಿ ನುಡಿನಮನ

ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ:5-09-2024ರಂದು ಡಾ. ಸರ್ವಪಲ್ಲಿರಾಧಾಕೃಷ್ಣನ್‌ಅವರ ಹುಟ್ಟು ಹಬ್ಬದ ಪ್ರಯುಕ್ತ ಆಚರಿಸಲಾಗುವ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕಾಲೇಜಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್&ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್‌ಯು.ಜೆ.ಯವರುಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರಿಗೆ ನುಡಿನಮನ ಸಲ್ಲಿಸಿದರು ಹಾಗೂ ಶಿಕ್ಷಕರ ದಿನಾಚರಣೆಯ ಮಹತ್ವವನ್ನು ತಿಳಿಸಿ ಸಂಸ್ಥೆಯ ಎಲ್ಲಾ ಶಿಕ್ಷಕರಿಗೆ...

ಮೇನಾಲ : ವರಮಹಾಲಕ್ಷ್ಮೀ ಪೂಜಾ ಸಮಿತಿ ರಚನೆ ;ಅಧ್ಯಕ್ಷರಾಗಿ ಬೇಬಿ ಸುಕುಮಾರ್ – ಕಾರ್ಯದರ್ಶಿಯಾಗಿ ಅನಿತಾ ಸತೀಶ್ – ಖಜಾಂಜಿಯಾಗಿ ದಿವ್ಯಾಚೇತನ್

ವರಮಹಾಲಕ್ಷ್ಮೀ ಪೂಜಾ ಸಮಿತಿ ಮೇನಾಲ ಇದರ ನೂತನ ಸಮಿತಿ ರಚನೆ ಯಾಗಿದ್ದು ಅಧ್ಯಕ್ಷರಾಗಿ ಬೇಬಿ ಸುಕುಮಾರ್ ಕಲ್ಲಗುಡ್ಡೆ ಆಯ್ಕೆಯಾಗಿದ್ದಾರೆ. ಸಮಿತಿಯ ಕಾರ್ಯದರ್ಶಿಯಾಗಿ ಅನೀತಾ ಸತೀಶ್ ಪೂಜಾರಿ ಹಾಗೂ ಖಜಾಂಜಿಯಾಗಿ ದಿವ್ಯ ಚೇತನ್ ಆಮೇಮನೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ರಾಗಿ ನಳಿನಿ ಸತ್ಯನಾರಾಯಣ ಹಾಗು ಶೋಭಾ ರಾಮಚಂದ್ರ ಜತೆ ಕಾರ್ಯದರ್ಶಿಯಾಗಿ ಗೀತಾ ಸೀತಾರಾಮ ಬೀನಡ್ಕ ಹಾಗೂ ದೇವಕಿ ಗುರುವಪ್ಪ...

ಗೂನಡ್ಕ : ಖಾಸಗಿ ಬಸ್ ಹಾಗೂ ಓಮಿನಿ ಅಪಘಾತ – ಅಪಾಯದಿಂದ ಪಾರಾದ ಪ್ರಯಾಣಿಕರು

ಗೂನಡ್ಕದ ಶಾಲಾ ಬಳಿ ಖಾಸಗಿ ಬಸ್ ಹಾಗೂ ಓಮಿನಿ ಮುಖಾಮುಖಿ ಢಿಕ್ಕಿಯಾದ ಘಟನೆ ಕಳೆದ ರಾತ್ರಿ ನಡೆದಿದೆ. ಕಾಸರಗೋಡಿನಿಂದ ಬೆಂಗಳೂರಿಗೆ ಹೊರಟ ಕೊಹಿನೂರ್ ಖಾಸಗಿ ಬಸ್ ಗೆ ಓಮಿನಿ ಢಿಕ್ಕಿಯಾಗಿದೆ. ಓಮಿನಿಯಲ್ಲಿದ್ದ ಬೆಳ್ಳಾರೆಯ ಮೂವರಿಗೆ ಗಾಯಗಳಾಗಿವೆ. ಅಪಘಾತದ ಸ್ಥಳಕ್ಕೆ ಧಾವಿಸಿದ ಆಪತ್ಬಾಂಧವ ತಾಜುದ್ದೀನ್ ಟರ್ಲಿ ಗಾಯಾಳುಗಳನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
Loading posts...

All posts loaded

No more posts

error: Content is protected !!