- Friday
- November 1st, 2024
ಬಿಜೆಪಿ ದೇವ ಬೂತ್ ಸಮಿತಿ ವತಿಯಿಂದ ಅಡ್ಡನಪಾರೆ ನಿವಾಸಿ ವಸಂತ ಬೊಳ್ಳಾಜೆ ಅವರ ಮನೆಯಲ್ಲಿ ಪ್ರಧಾನ ಮಂತ್ರಿಯವರ ಮನ್ ಕೀ ಬಾತ್ ವೀಕ್ಷಣೆ ಹಾಗೂ ಸದಸ್ಯತ್ವ ಅಭಿಯಾನ, ಗಿಡ ನೆಡುವ ಕಾರ್ಯಕ್ರಮ ಸೆ.29 ರಂದು ನಡೆಯಿತು.ಈ ಸಂದರ್ಭದಲ್ಲಿ ಬೂತ್ ಅಧ್ಯಕ್ಷ ಲಕ್ಷ್ಮೀಶ ಅಡ್ಡನಪಾರೆ, ಕಾರ್ಯದರ್ಶಿ ಮುಕುಂದ ಹಿರಿಯಡ್ಕ, ಗ್ರಾ.ಪಂ.ಮಾಜಿ ಅಧ್ಯಕ್ಷ ದಿವಾಕರ ಮುಂಡೋಡಿ, ಗ್ರಾ.ಪಂ.ಸದಸ್ಯ ರಮೇಶ್...
ಅಜ್ಜಾವರ ಗ್ರಾಮದ ಮೇನಾಲ ಕೆದ್ಕಾರ್ ದಿ.ಪದ್ಮಾವತಿ ಮತ್ತು ದಿ.ಲಿಂಗಪ್ಪ ಗೌಡ ಇವರ ಪುತ್ರ ಹರಿಪ್ರಸಾದ್ ಕೆದ್ಕಾರ್ ಇವರು ಸೆಪ್ಟೆಂಬರ್ 30ರಂದು ಉದ್ಯೋಗ ನಿಮಿತ್ತ ಜಪಾನ್ ಗೆ ವಿದೇಶ ಪ್ರಯಾಣ ಕೈಗೊಳ್ಳಲಿದ್ದಾರೆ. ಇವರ ಪತ್ನಿ ಶ್ರೀಮತಿ ವಿದ್ಯಾ ಗೃಹಿಣಿ ಯಾಗಿದ್ದು ಪುತ್ರ ಮಾ|ಅಥರ್ವ 1ನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ.
ಚೈತ್ರ ಯುವತಿ ಮಂಡಲ ಅಜ್ಜಾವರ ಇದರ 2024-25ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಶ್ರೀಮತಿ ಶಶ್ಮಿ ಭಟ್ ಹಂಚಿನ ಮನೆ ಮುಂದಿನ 2 ವರ್ಷ ಗಳ ಅವಧಿಗೆ ಪುನರ್ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಶ್ರೀಮತಿ ಮಾಲತಿ ಸೂರ್ಯ,ಶ್ರೀಮತಿ ಗೀತಾoಜಲಿ ಗುರುರಾಜ್,ಕಾರ್ಯದರ್ಶಿಯಾಗಿ ಕು. ಹರ್ಷಿತಾ ಅಜ್ಜಾವರ, ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ಉಷಾ ನವೀನ್, ಖಜಾಂಜಿಯಾಗಿ ಕು.ಲಕ್ಷ್ಮೀ ಪಲ್ಲತಡ್ಕ,ಗೌರವ ಸಲಹೆಗಾರರಾಗಿ ಶ್ರೀಮತಿ ಜಯಲಕ್ಷ್ಮೀ...
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಸೆ 28 ರಂದು ಬೃಹತ್ ಸ್ವಚ್ಛತಾ ಅಭಿಯಾನವನ್ನು ಸ್ವಚ್ಛತಾ ಸೇವಾ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ ಪಿ.ಟಿ, ಐ ಕ್ಯೂ ಎ ಸಿ ಸಂಯೋಜಕಿ ಶ್ರೀಮತಿ ಲತಾ ಬಿ.ಟಿ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಆರತಿ ಕೆ ಹಾಗೂ ಸುಮಿತ್ರಕುಮಾರಿ...
ಶ್ರೀ ಶಂಖಚೂಡ ಕ್ಷೇತ್ರ ಪುರಾಳಬದಿ ಮಣಿಯಾನ ಪೈಕ- ವಳಲಂಬೆ ಇದರ ಜೀರ್ಣೋದ್ದಾರ ಸಮಿತಿ ರಚನೆಗೊಂಡಿದ್ದು ಅಧ್ಯಕ್ಷರಾಗಿ ಮಣಿಯಾನ ಸುಬ್ಬಣ್ಣ ಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಆರ್ ಲೋಕೇಶ್ವರ ಹಾಗೂ ಕೋಶಾಧಿಕಾರಿಯಾಗಿ ಮಾಧವ ಮಾಸ್ತರ್ ಮೂಕಮಲೆ ಇವರುಗಳನ್ನು ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ವೆಂಕಟ್ ದಂಬೆಕೋಡಿ ಹಾಗೂ ವೆಂಕಟ್ ವಳಲಂಬೆ, ಜತೆ ಕಾರ್ಯದರ್ಶಿ ಚಿನ್ನಪ್ಪ ಗೌಡ ಮುಚ್ಚಾರ ಹಾಗೂ...
ಮೆಟ್ಟಿನಡ್ಕ, ಕಂದ್ರಪ್ಪಾಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಅಕ್ಟೋಬರ್ 2 ರಿಂದ ನಡೆಯಲಿರುವುದರಿಂದ ರಸ್ತೆ ಬಂದ್ ಆಗುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಬದಲಿ ರಸ್ತೆಯನ್ನು ಬಳಸಿ ಸಹಕರಿಸುವಂತೆ ಲೋಕೋಪಯೋಗಿ ಇಲಾಖೆ ಪ್ರಕಟಣೆ ತಿಳಿಸಿದೆ.
ಮನ್ ಕೀ ಬಾತ್ ಕಾರ್ಯಕ್ರಮ ಕೊಡಿಯಾಲ ಗ್ರಾಮದ ಕಲ್ಪತ್ತಬೈಲು ಬೂತ್ (ಬೂತ್ ಸಂಖ್ಯೆ 80) ಸದಸ್ಯರಾದ ಹಿರಿಯ ಕಾರ್ಯಕರ್ತ ಬೀಯಲು ಮನೆಯಲ್ಲಿ ಇಂದು ನಡೆಯಿತು. ನಂತರ ಗಿಡ ನಾಟಿ ಕಾರ್ಯ ನಡೆಯಿತು. ಕಾರ್ಯಕ್ರಮದಲ್ಲಿ ಲೋಹಿತ್ ಪೆರಿಯಾಣ, ಶಕ್ತಿಕೇಂದ್ರ ಪ್ರಮುಖ್ ಚೇತನ್ ಕೊಡಿಯಾಲ, ಬೂತ್ ಸದಸ್ಯರಾದ ತಾರಾನಾಥ್ ಬೆರ್ಯ , ಗೋಪಾಲ ಎಂ ಮತ್ತು ಮನೆಯವರು ಉಪಸ್ಥಿತರಿದ್ದರು.
ಬರಹ : ಡಾ| ಮುರಲೀ ಮೋಹನ್ ಚೂಂತಾರ್ ಪ್ರತಿ ವರ್ಷ ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನ ಎಂದು ಆಚರಿಸಿ ಹೃದಯ ಸಂಬಂಧಿ ರೋಗಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. 2000ನೇ ಇಸವಿಯಲ್ಲಿ ಈ ಆಚರಣೆ “ದೈಹಿಕ ಚಟುವಟಿಕೆ ಮತ್ತು ಹೃದಯದ ಆರೋಗ್ಯ” ಎಂಬ ಧ್ಯೇಯ ವಾಕ್ಯದೊಂದಿಗೆ ಈ ಆಚರಣೆ ಆರಂಭವಾಗಿತ್ತು. 2021ರಲ್ಲಿ ‘ಹೃದಯವನ್ನು ಜೋಡಿಸಿ’...
ಸುಳ್ಯ ಕೋರ್ಟ್ ಹಿಂಭಾಗದಲ್ಲಿರುವ ವಿದ್ಯಾರ್ಥಿನಿ ನಿಲಯದಿಂದ ಕೊಳಚೆ ನೀರನ್ನು ರಸ್ತೆ ಪಕ್ಕದ ತೆರೆದ ಚರಂಡಿಗೆ ಬಿಡುತ್ತಿದ್ದಾರೆ. ಚರಂಡಿಯಲ್ಲಿ ನೀರು ಹರಿದು ಹೋಗದೇ ಸೊಳ್ಳೆ ಉತ್ಪತ್ತಿಯ ತಾಣವಾಗಿದೆ. ವಿದ್ಯಾರ್ಥಿನಿಯರಿಗೆ ಸ್ವಚ್ಛತೆಯ ಪಾಠ ಹೇಳಿಕೊಡಬೇಕಾದ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕರಿಗೆ ಕೊಳಚೆ ನೀರನ್ನು ರಸ್ತೆಯ ಬದಿಗೆ ಬಿಡಬಾರದು ಎಂಬ ಸಾಮಾನ್ಯ ಜ್ಞಾನವಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ. ಚರಂಡಿಯಲ್ಲಿ ನೀರು ಶೇಖರಣೆಯಾಗಿ...
Loading posts...
All posts loaded
No more posts