- Thursday
- November 21st, 2024
ಕರ್ನಾಟಕದಲ್ಲಿ ಪಶ್ಚಿಮ ಘಟ್ಟಗಳ ಸಂರಕ್ಷಿಸುವ ನಿಟ್ಟಿನಲ್ಲಿ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಲು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಆದರೆ ಭಾರಿ ವಿರೋಧ ಮಧ್ಯೆ ಇಂದಿನ ಸಂಪುಟ ಸಭೆಯಲ್ಲಿ ವರದಿಯನ್ನು ತಿರಸ್ಕಾರ ಮಾಡಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ. ಸಾಕಷ್ಟು ವಿರೋಧ ವ್ಯಕ್ತವಾಗಿದ್ದ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಲು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ವಿಧಾನಸೌಧದಲ್ಲಿ...
ಶ್ರೀಮತಿ ಪರಿಮಳ ಐವರ್ನಾಡು ಇವರು ಜನಸಿರಿ ಫೌಂಡೇಶನ್(ರಿ )ರವರು ಕೊಡಮಾಡಲ್ಪಡುವ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇವರ ಶಿಕ್ಷಣ ಕ್ಷೇತ್ರದಲ್ಲಿನ ಪ್ರಾಮಾಣಿಕ ಸೇವೆಗೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ತರಬೇತಿ ಹಾಗೂ ಪ್ರೋತ್ಸಾಹಕ್ಕೆ ಸಂದ ಗೌರವವಾಗಿದೆ. ದಿನಾಂಕ 28-9-2024 ಶನಿವಾರದಂದು ಬೆಂಗಳೂರಿನ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಜರುಗುವ ಅದ್ದೂರಿ ಸಮಾರಂಭ ಶಿಕ್ಷಕರ ಹಬ್ಬದಲ್ಲಿ ಗೌರವ ಪ್ರಶಸ್ತಿಯನ್ನು...
https://youtu.be/75eEWhmWPdI?si=pMJbcBGqZZQiYAw8 ಕೊಲ್ಲಮೊಗ್ರ ಗ್ರಾಮದ ಚಾಳೆಪ್ಪಾಡಿ(ತಂಬಿನಡ್ಕ) ಎಂಬಲ್ಲಿ ನೆಲೆಸಿದ್ದ ಅಂಚೆಯಣ್ಣ ಅಬ್ದುಲ್ ಜಬ್ಬಾರ್ ರವರು ಸೆ.13.ರಂದು ನಿಧನರಾಗಿದ್ದರು. ಅಕಾಲಿಕ ನಿಧನದಿಂದ ಆರ್ಥಿಕವಾಗಿ ಬಹಳಷ್ಟು ಸಂಕಷ್ಟದಲ್ಲಿದ್ದ ಜಬ್ಬಾರ್ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿತ್ತು. ತಾನು ಬದುಕಿದ್ಸಾಗ ಜಾತಿ ಧರ್ಮ ನೋಡದೇ ಇತರರ ನೋವಿಗೆ ಸ್ಪಂದಿಸುತ್ತಾ ಬಂದಿದ್ದರಿಂದ ಜಬ್ಬಾರ್ ಒಬ್ಬ ಅಜಾತಶತ್ರುವಾಗಿದ್ದರು. ಈ ಹಿನ್ನೆಯಲ್ಲಿ ಕೆಲ ಆತ್ಮೀಯರು ಸೇರಿ ಅವರ ಕುಟುಂಬದ...
ಶ್ರೀ ವಿಷ್ಣು ಸೇವಾ ಸಮಿತಿ ಉದಯಗಿರಿ ಮಾವಿನಕಟ್ಟೆ ಇದರ ಆಶ್ರಯದಲ್ಲಿ ಸೆ.22 ರಂದು ಓಣಂ ಆಚರಣೆಯು ಶ್ರೀ ವಿಷ್ಣು ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸಮಿತಿಯ ಗೌರವ ಸಲಹೆಗಾರರಾದ ಗಂಗಾಧರ ಕೇಪಳಕಜೆ ನೆರವೇರಿಸಿದರು.ಸಮುದಾಯದ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಸಮುದಾಯದ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಓಣಂ...
ಚೊಕ್ಕಾಡಿ ಹೈಸ್ಕೂಲ್ ಕುಕ್ಕುಜಡ್ಕದಲ್ಲಿ ಸೆ. 23 ರಂದು ನಡೆದ ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ನಲ್ಲಿ ಚೊಕ್ಕಾಡಿ ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಪ್ರಾಥಮಿಕ ವಿಭಾಗದಲ್ಲಿ ಬಾಲಕಿಯರ ತಂಡ ಪ್ರಥಮ, ಬಾಲಕರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.ಪ್ರೌಢಶಾಲಾ ವಿಭಾಗದಲ್ಲಿ ಬಾಲಕ, ಬಾಲಕಿಯರು ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಬಿಜೆಪಿ ಸದಸ್ಯತನದ ಅಂಗವಾಗಿ ದ. ಕ. ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ ಸುಳ್ಯಕ್ಕೆ ಭೇಟಿ ನೀಡಿದರು. ಸುಳ್ಯ ನಗರದ ಶಾಂತಿನಗರ ಬೂತಿನ ಐತಪ್ಪ ನಾಯ್ಕ ಮತ್ತು ಗೋಪಾಲಕೃಷ್ಣ ಭಟ್ ಇವರ ಮನೆಗೆ ಭೇಟಿ ನೀಡಿ ಬಿಜೆಪಿ ಸದಸ್ಯರನ್ನಾಗಿ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ, ರಾಕೇಶ್...
ಸುಳ್ಯ ತಾಲೂಕು ನೂತನ ತಹಶೀಲ್ದಾರ್ ಆಗಿ ಕೆ ಎ ಎಸ್ ಅಧಿಕಾರಿ ಅರವಿಂದ್ ಕೆ ಎಂ ಆಗಮಿಸಿದ್ದಾರೆ . ಇವರು ಸುಳ್ಯ ತಹಶೀಲ್ದಾರ್ ಆಗಿ ಪ್ರಭಾರ ಕರ್ತವ್ಯ ನಿರ್ವಹಿಸಲಿದ್ದು, ಈ ಹಿಂದೆ ಮಂಗಳೂರು ಎ ಸಿ ಕಛೇರಿಯಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದರು ಮೂಲತಃ ಚಿತ್ರದುರ್ಗದವರಾಗಿದ್ದಾರೆ.
ಲಯನ್ಸ್ ಕ್ಲಬ್ ಗುತ್ತಿಗಾರು ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವುಗಳ ಸಹಯೋಗದಲ್ಲಿ ಸೆ.28 ಶನಿವಾರದಂದು ಪೂರ್ವಾಹ್ನ 9:00 ಗಂಟೆಯಿಂದ ಅಪರಾಹ್ನ 4:00 ಗಂಟೆಯವರೆಗೆ ಗುತ್ತಿಗಾರಿನ ಲಯನ್ಸ್ ಸಭಾಭವನದಲ್ಲಿ ಬೃಹತ್ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಹಾಗೂ ಅಂಚೆ ಜನಸಂಪರ್ಕ ಅಭಿಯಾನ ನಡೆಯಲಿದ್ದು, ಆಧಾರ್ ನೋಂದಣಿ ಹಾಗೂ ತಿದ್ದುಪಡಿಗೆ ಬೇಕಾಗುವ ಎಲ್ಲಾ ದಾಖಲೆಗಳ ಮೂಲ...
(ವರದಿ : ಉಲ್ಲಾಸ್ ಕಜ್ಜೋಡಿ)ಹರಿಹರ ಪಳ್ಳತ್ತಡ್ಕ ಗ್ರಾಮದ ಕಿರಿಭಾಗದ ಯೋಗೀಶ್ ಕಿರಿಭಾಗ ಎಂಬುವವರ ಗದ್ದೆಯಲ್ಲಿ ಇತ್ತೀಚೆಗೆ ಧ್ವನಿ, ಬೆಳಕು ಮತ್ತು ಶಾಮಿಯಾನ ಸಂಘದವರು ಹಾಗೂ ಬಾಳುಗೋಡು ವಿಶ್ವ ಯುವಕ ಮಂಡಲದವರು ಪ್ರತ್ಯೇಕವಾಗಿ ಕೆಸರುಗದ್ದೆ ಕ್ರೀಡಾಕೂಟಗಳನ್ನು ನಡೆಸಿದ್ದರು.ಇದೀಗ ಕೆಸರುಗದ್ದೆ ಕ್ರೀಡಾಕೂಟ ನಡೆದ ಗದ್ದೆಯಲ್ಲಿ ಸ್ಥಳೀಯರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ನೇಜಿ ನೆಡಲಾಗಿದ್ದು, ಈ ಮಾದರಿ ಕಾರ್ಯಕ್ಕೆ ವ್ಯಾಪಕ...
ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ವರ್ಷಕ್ಕೊಮ್ಮೆ ಆಯೋಜಿಸುವ ಸಾಂಸ್ಕೃತಿಕ ಹಾಗೂ ಪ್ರತಿಭಾ ಅನ್ವೇಷಣಾ ಸ್ಫರ್ಧಾ ಕಾರ್ಯಕ್ರಮವಾಗಿದೆ ಸಾಹಿತ್ಯೋತ್ಸವ.ಈ ವರ್ಷದ ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಾಹಿತ್ಯೋತ್ಸವ ಸಮಿತಿ ರಚಿಸಲಾಯಿತು.ಡಿವಿಷನ್ ಅಧ್ಯಕ್ಷ ಸಿದ್ದೀಕ್ ಹಿಮಮಿ ಪೈಂಬಚ್ಚಾಲ್, ಪ್ರ.ಕಾರ್ಯದರ್ಶಿ ಕಬೀರ್ ಜಟ್ಟಿಪ್ಪಳ್ಳ, ಕೋಶಾಧಿಕಾರಿ ಶರೀಫ್ ಜಯನಗರ ಒಳಗೊಂಡ ಸಮಿತಿಯ ಚೇರ್ಮೇನ್ ಆಗಿ ರಿಹಾನ್ ಸಅದಿ ಬೆಳ್ಳಾರೆ, ಜನರಲ್ ಕನ್ವೀನರ್ ಆಗಿ ನಿಯಾಝ್...
Loading posts...
All posts loaded
No more posts