Ad Widget

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ನಾಳೆ (ಸೆ.25) ಸುಳ್ಯದಲ್ಲಿ ಬಿಜೆಪಿ ಪ್ರತಿಭಟನೆ

ಭಾರತೀಯ ಜನತಾ ಪಾರ್ಟಿ ಮಹಾಶಕ್ತಿ ಕೇಂದ್ರ ಸುಳ್ಯ ನಗರ ಇದರ ವತಿಯಿಂದ ಮುಡಾ ಹಗರಣ ಕುರಿತು ತನಿಖೆ ನಡೆಸಲು ಹೈಕೋರ್ಟ್ ಅನುಮತಿ ನೀಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ನಾಳೆ ( ಸೆ.25 ರಂದು) ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.ಸೆ.25 ರಂದು ಬೆಳಿಗ್ಗೆ 10 ಗಂಟೆಗೆ ಸುಳ್ಯದ ಖಾಸಗಿ ಬಸ್ ನಿಲ್ದಾಣ ಬಳಿ...

ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡಿನಲ್ಲಿ ಎನ್ಎಸ್ಎಸ್ ದಿನಾಚರಣೆ

ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಎನ್ಎಸ್ಎಸ್ ದಿನಾಚರಣೆ ಆಚರಿಸಲಾಯಿತು.ಕಾಲೇಜಿನ ಪ್ರಭಾರ ಪ್ರಾಂಶುಪಾಲ ಸುರೇಶ್ ವಾಗ್ಲೆ ಗಿಡಕ್ಕೆ ನೀರು ಎರೆಯುವ ಮೂಲಕ ರಾಷ್ಟ್ರೀಯ ಸೇವಾ ಯೋಜನೆಯ ದಿನಾಚರಣೆ ಚಾಲನೆ ನೀಡಿ, ಎನ್ಎಸ್ಎಸ್ ಸ್ಥಾಪನೆಯ ಗುರಿ ಉದ್ದೇಶಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಇತಿಹಾಸ ಉಪನ್ಯಾಸಕ ಮೋಹನ್ ಚಂದ್ರ...
Ad Widget

ಸುಳ್ಯ : ಅಬ್ದುಲ್ ನಿಯಾಜ್ ಗೆ ಹಲ್ಲೆ ಪ್ರಕರಣ : ಅತ್ಯಾಚಾರ ಯತ್ನದ ಬಗ್ಗೆ ವಿದ್ಯಾರ್ಥಿನಿಯಿಂದ ದೂರು – ಹಲ್ಲೆಗೊಳಗಾದ ನಿಯಾಜ್ ನಿಂದ ನಾಲ್ವರ ವಿರುದ್ಧ ಹಲ್ಲೆ ಹಾಗೂ ಕೊಲೆಯತ್ನದ ದೂರು

ಸುಳ್ಯದಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ತನ್ನ ಮನೆ ಸಕಲೇಶಪುರದಿಂದ ಬಿಸಿಲೆ, ಸುಬ್ರಹ್ಮಣ್ಯ ಮಾರ್ಗವಾಗಿ ಸುಳ್ಯಕ್ಕೆ ಬರುತ್ತಿರುವ ವೇಳೆ ತಾನು ಕುಳಿತ ಸೀಟಿನ ಇನ್ನೊಂದು ಬದಿಯಲ್ಲಿ ಕುಳಿತಿದ್ದ ಅಬ್ದುಲ್ ನಿಯಾಜ್ ಕಿರುಕುಳ ನೀಡಿ ಕೊನೆಗೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ವಿಷಯವನ್ನು ಬಸ್ ಚಾಲಕನಿಗೆ ಹಾಗೂ ತನ್ನ ಸುಳ್ಯದ ಸಹಪಾಠಿಗಳಿಗೆ ತಿಳಿಸಿದ್ದಳು. ವಿದ್ಯಾರ್ಥಿನಿ ಚಾಲಕನಿಗೆ ದೂರು ನೀಡಿದ್ದರಿಂದ...

ಆಲೆಟ್ಟಿ : ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು

ಸುಳ್ಯ : ಆಲೆಟ್ಟಿ ಗ್ರಾಮದ ಶಂಕರ ಪಾಟಾಳಿ ಎಂಬುವವರು ತೋಟಕ್ಕೆ ತೆರಳಿದ ಸಂದರ್ಭದಲ್ಲಿ ಕಾಲು ಜಾರಿ ಕೆರೆಗೆ ಬಿದ್ದು ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದ್ದು ಸದ್ಯ ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸುತ್ತಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ

ಮುಡಾ ಹಗರಣದಲ್ಲಿ ಹೈಕೋರ್ಟ್‌ ತೀರ್ಪು ಬಿಜೆಪಿ ಹೋರಾಟಕ್ಕೆ ಸಂದ ಜಯ

ಸಿದ್ದರಾಮಯ್ಯನವರು ತಕ್ಷಣ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಸಂಸದ ಕ್ಯಾ. ಚೌಟ ಮಂಗಳೂರು: ಮೈಸೂರು ಮುಡಾ ಭೂಹಗರಣದ ಬಗ್ಗೆ ರಾಜ್ಯಪಾಲರು ಪ್ರಾಷಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿರುವ ಹಿನ್ನಲೆ ಸಿಎಂ ಸಿದ್ದರಾಮಯ್ಯನವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಒತ್ತಾಯಿಸಿದ್ದಾರೆ. ಸಿದ್ದರಾಮಯ್ಯನವರ...

ಹಿಂದು ಕಾರ್ಯಕರ್ತರ ಬಂಧನ ಖಂಡಿಸಿ ನಗರದಲ್ಲಿ ಪರಿವಾರ ಸಂಘಟನೆಗಳಿಂದ ಮೆರವಣಿಗೆ – ದೈವಸ್ಥಾನದಲ್ಲಿ ಪ್ರಾರ್ಥನೆ – ಠಾಣೆಯ ಗೇಟಿನ ಬಳಿ ಪ್ರತಿಭಟನೆ

ಅನ್ಯ ಕೋಮಿನ ಯುವಕ ಮೇಲೆ ಹಲ್ಲೆ ಪ್ರಕರಣ ಸಂಬಂಧಿಸಿದಂತೆ ಸೆ.23 ರಂದು ಸುಳ್ಯ ನಗರ ಭಜರಂಗದಳ ಮುಖಂಡ ವರ್ಷಿತ್ ಮತ್ತು ಮಿಥುನ್ ಎಂಬ ಇಬ್ಬರು ಕಾರ್ಯಕರ್ತರನ್ನು ಹಲ್ಲೆ ಪ್ರಕರಣದ ಸೆಕ್ಷನ್ ಅಳವಡಿಸದೆ ಕೊಲೆಯತ್ನ ಪ್ರಕರಣ ದಾಖಲಿಸಿ ಬಂಧನ ಮಾಡಲಾಗಿದೆ ಎಂದು ಆರೋಪಿಸಿ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮುಂಜಾನೆ 9 ಗಂಟೆಯ ಎಬಿವಿಪಿ...

ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಗೆ ನೂತನ ಪದಾಧಿಕಾರಿಗಳ ಆಯ್ಕೆ – ಅಧ್ಯಕ್ಷ ಅಚ್ಚುತ ಗುತ್ತಿಗಾರು – ಕಾರ್ಯದರ್ಶಿ ಅಜಿತ್ ಬಾಕಿಲ –  ಕೋಶಾಧಿಕಾರಿ ಕಾರ್ತಿಕ್ ಪೈಕ

ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ (ರಿ.) ಗುತ್ತಿಗಾರು ಇದರ ಮಹಾಸಭೆ ಸೆ. 20 ರಂದು ನಡೆಯಿತು. ಈ ಸಭೆಯಲ್ಲಿ 2024 - 25 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಮಾಧವ ಎರ್ದಡ್ಕ, ನೂತನ ಅಧ್ಯಕ್ಷರಾಗಿ ಅಚ್ಚುತ ಗುತ್ತಿಗಾರು, ಪ್ರಧಾನ ಕಾರ್ಯದರ್ಶಿಯಾಗಿ ಅಜಿತ್ ಬಾಕಿಲ ಹಾಗೂ ಕೋಶಾಧಿಕಾರಿಯಾಗಿ ಕಾರ್ತಿಕ್ ಪೈಕ  ಮತ್ತು ವಿವಿಧ ಪದಾಧಿಕಾರಿಗಳನ್ನು...

ಮಂಗಳೂರಿನಲ್ಲಿ ಅಪಘಾತ – ಆಲೆಟ್ಟಿಯ ಯುವಕ ಮೃತ್ಯು

ಮಂಗಳೂರಿನ ಮಾರಿಪಳ್ಳದಲ್ಲಿ ತಡರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ನಡೆದ ಅಪಘಾತದಲ್ಲಿ ಆಲೆಟ್ಟಿ ಗ್ರಾಮದ ನೆಡ್ಚಿಲು ವಾಸುದೇವ ಗೌಡ ರವರ ಪುತ್ರ ಇಂಜಿನಿಯರಿಂಗ್ ವಿದ್ಯಾರ್ಥಿ ಸೇವಂತ್ ನೆಡ್ಚಿಲು ದುರ್ಮರಣವನ್ನಪ್ಪಿದ ಘಟನೆ ವರದಿಯಾಗಿದೆ. ಪುತ್ತೂರಿನಿಂದ ಮಂಗಳೂರು ಕಡೆಗೆ ಗೆಳೆಯರೊಂದಿಗೆ ಬೈಕಿನಲ್ಲಿ ಹೋಗುತ್ತಿರುವಾಗ ಮಾರಿಪಳ್ಳ ಎಂಬಲ್ಲಿ ಟಿಪ್ಪರ್ ಗೆ ಡಿಕ್ಕಿ ಹೊಡೆಯಿತು. ಪರಿಣಾಮವಾಗಿ ಸೇವಂತ್ ರವರು ರಸ್ತೆ ಮೇಲೆ ಬಿದ್ದು...

ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ- ಕಾನೂನು ಅರಿವು ಕಾರ್ಯಕ್ರಮ

ಕಾನೂನು ಸೇವೆಗಳ ಸಮಿತಿ ಸುಳ್ಯ , ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜು ಆಲೆಟ್ಟಿ ಮಿತ್ತಡ್ಕ ಸುಳ್ಯಹಾಗೂ ವಕೀಲರ ಸಂಘ, ಸುಳ್ಯ ಇದರ ಸಂಯುಕ್ತ ಆಶ್ರಯದಲ್ಲಿ ಸಪ್ಟೆಂಬರ್ 23 ರಂದು ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮೋಟಾರು ವಾಹನ ಕಾಯ್ದೆ ಮತ್ತು ಮಾದಕ ವ್ಯಸನದ ದುಷ್ಪರಿಣಾಮದ ಕುರಿತು ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಹಿರಿಯ ಸಿವಿಲ್...

ಶಿಕ್ಷಕರಿಂದ ಮಾತ್ರ ಉತ್ತಮ ನಾಯಕನ ಸೃಷ್ಟಿ ಸಾಧ್ಯ : ಸವಿತಾರ ಮುಡೂರು

ಬೆಳ್ಳಾರೆ ಜ್ಞಾನದೀಪದಲ್ಲಿ ಪರಿಣಾಮಕಾರಿ ನಾಯಕತ್ವ ತರಬೇತಿ ಪ್ರತಿಯೊಬ್ಬರಲ್ಲೂ ನಾಯಕತ್ವದ ಗುಣವಿರುತ್ತದೆ. ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವದ ಗುಣಗಳನ್ನು ಕಲಿಸಿಕೊಟ್ಟು ಸಮಾಜದ ಉತ್ತಮ ನಾಯಕರನ್ನಾಗಿ ರೂಪಿಸುವ ಕೆಲಸ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ಜೇಸಿಐ ವಲಯ ತರಬೇತುದಾರ ಸವಿತಾರ ಮುಡೂರು ಹೇಳಿದರು. ಅವರು ಬೆಳ್ಳಾರೆ ಜೇಸಿಐ ಆಶ್ರಯದಲ್ಲಿ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ನಡೆದ ಪರಿಣಾಮಕಾರಿ ನಾಯಕತ್ವ...
Loading posts...

All posts loaded

No more posts

error: Content is protected !!