Ad Widget

ಆಸ್ಪತ್ರೆಗೆ ಹೇಳಿಕೆ ಪಡೆಯಲು ಆಗಮಿಸಿದ ನ್ಯಾಯಾಧೀಶರ ಜತೆ ವೈದ್ಯರ ದುರ್ವರ್ತನೆ ಆರೋಪ – ಸುಳ್ಯ ಠಾಣೆಯಲ್ಲಿ ದೂರು ನೀಡಿದ ನ್ಯಾಯಾಧೀಶರು

ಸುಳ್ಯ : ದೇಲಂಪಾಡಿ ಮೂಲದ ಮಹಿಳೆಯೋರ್ವರು ಆತ್ಮಹತ್ಯೆ ಯತ್ನ ನಡೆಸಿದ್ದಾರೆಂಬ ಬಗ್ಗೆ ಅದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.‌ ಈ ಬಗ್ಗೆ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯಿಂದ ಹೇಳಿಕೆ ಪಡೆಯುವ ಉದ್ದೇಶದಿಂದ ಸುಳ್ಯಕ್ಕೆ ಆದೂರು ಪೋಲಿಸ್ ಅಧಿಕಾರಿಗಳ ಜತೆಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಇಂಟಿಮೇಶನ್ ನೀಡಿದ ಬಳಿಕ ಬಂದಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಕಿರಿಯ ವೈದ್ಯರಾದ ವಿನ್ಯಾಸ್ ಕರ್ತವ್ಯದಲ್ಲಿದ್ದರು. ನ್ಯಾಯದೀಶರು ಬಂದು ವಿಚಾರಿಸಿದಾಗ ವಿನ್ಯಾಸ್ ರವರು ಹಿರಿಯ ಡಾಕ್ಟರ್ ಬರಬೇಕು ಅವರೇ ಮಾಹಿತಿ ನೀಡಬೇಕಿದೆ ಎಂದು ತಿಳಿಸುತ್ತಾರೆ. ಈ ವೇಳೆ ಆಗಮಿಸಿದ ಡಾ| ಸೌಮ್ಯ ರವರು ನ್ಯಾಯಾಧೀಶರು ಬಂದಿದ್ದಾರೆ ಎಂದು ತಿಳಿದಿದ್ದರೂ ಅವರಿಗೆ ಸರಿಯಾಗಿ ಮಾಹಿತಿ ಮತ್ತು ದಾಖಲೆಗಳನ್ನು ನೀಡದೇ ಉದ್ಧಟತನ ತೋರಿದ ಆರೋಪ ಕೇಳಿ ಬಂದಿದೆ. ಈ ಘಟನೆಯು ಸೆ.21 ರಂದು ರಾತ್ರಿ ನಡೆದಿದ್ದು ಇದಾದ ಬಳಿಕ ನ್ಯಾಯಾಧೀಶರಾದ ಅದ್ದುಲ್ ಭಾಷಿತ್ ಸುಳ್ಯ ಠಾಣೆಗೆ ಖುದ್ದಾಗಿ ತೆರಳಿ ಬೆಳಗ್ಗೆವರೆಗೆ ಕಾದು ದೂರು ದಾಖಲಿಸಿದ್ದರು. ಪೋಲಿಸ್ ಅಧಿಕಾರಿಗಳು ಇದೀಗ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!