Ad Widget

ಬಸ್ ನಲ್ಲಿ ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ – ಯುವಕನಿಗೆ ಧರ್ಮದೇಟು – ಆಸ್ಪತ್ರೆಯಲ್ಲಿ ಚಿಕಿತ್ಸೆ

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೊಡನೆ ಅಬ್ದುಲ್ ನಿಯಾಝ್ ಎಂಬ ಯುವಕ ಅನುಚಿತವಾಗಿ ವರ್ತಿಸಿದ್ದು, ಸುಳ್ಯದಲ್ಲಿ ಆಕೆಯ ಸಹಪಾಠಿ ವಿದ್ಯಾರ್ಥಿಗಳು ಧರ್ಮದೇಟು ನೀಡಿದ ಘಟನೆ ವರದಿಯಾಗಿದೆ.

. . . . . .

ಬೆಂಗಳೂರಿನಿಂದ ಸುಬ್ರಹ್ಮಣ್ಯ ಮಾರ್ಗವಾಗಿ ಸುಳ್ಯಕ್ಕೆ ಬರುತ್ತಿದ್ದ ಸರಕಾರಿ ಬಸ್‌ಗೆ ಬಿಸಿಲೆ ಘಾಟ್ ಬಳಿ ಸುಳ್ಯದ ಕಾಲೇಜೊಂದರ ವಿದ್ಯಾರ್ಥಿನಿ ಹತ್ತಿದ್ದಳು. ಯುವಕನೊಬ್ಬ ಕುಳಿತಿದ್ದ ಸೀಟಿನ ಪಕ್ಕದ ಸೀಟು ಖಾಲಿ ಇದ್ದುದರಿಂದ ಆಕೆ ಅದರಲ್ಲಿ ಕುಳಿತಳೆನ್ನಲಾಗಿದೆ. ಸ್ವಲ್ಪ ದೂರ ಬರುವಾಗ ಪಕ್ಕದಲ್ಲಿದ್ದ ಯುವಕ ಆಕೆಯೊಡನೆ ಅನುಚಿತವಾಗಿ ವರ್ತಿಸತೊಡಗಿದನೆನ್ನಲಾಗಿದೆ. ಅದನ್ನು ಆಕೆ ವಿರೋಧಿಸಿ ಕಂಡಕ್ಟರ್ ಗೆ ತಿಳಿಸಿದಳು. ಕಂಡಕ್ಟರ್ ಮತ್ತು ಬಸ್‌ನಲ್ಲಿದ್ದ ಇತರ ಪ್ರಯಾಣಿಕರು ಯುವಕನನ್ನು ಆಕ್ಷೇಪಿಸಿ ತರಾಟೆಗೆತ್ತಿಕೊಂಡರೆಂದು ತಿಳಿದು ಬಂದಿದೆ.
ಈ ವಿಷಯವನ್ನು ವಿದ್ಯಾರ್ಥಿನಿ ತನ್ನ ಸಹಪಾಠಿಗಳಿಗೆ ಫೋನ್ ಮಾಡಿ ತಿಳಿಸಿದಳು. ಬಸ್ಸು ಸುಬ್ರಹ್ಮಣ್ಯಕ್ಕೆ ಬಂದಾಗ ಅನುಚಿತವಾಗಿ ವರ್ತಿಸಿದ್ದ ಯುವಕ ಸುಬ್ರಹ್ಮಣ್ಯದಲ್ಲಿ ಬಸ್‌ನಿಂದ ಇಳಿದ. ವಿದ್ಯಾರ್ಥಿನಿ ಬೆಂಗಳೂರು ಬಸ್‌ನಲ್ಲೇ ಸುಳ್ಯಕ್ಕೆ ಬಂದಳು. ಸುಬ್ರಹ್ಮಣ್ಯದಲ್ಲಿ ಬಸ್‌ನಿಂದ ಇಳಿದ ಆ ಯುವಕ ಮುಸ್ಲಿಂ ಯುವಕ ಎಂಬುದು ಸಹ ಪ್ರಯಾಣಿಕರಿಗೆ ಗೊತ್ತಾಗಿತ್ತೆನ್ನಲಾಗಿದೆ. ವಿದ್ಯಾರ್ಥಿನಿ ಸುಳ್ಯಕ್ಕೆ ಬರುವುದನ್ನು ಸಹಪಾಠಿ ಯುವಕರು ಸುಳ್ಯ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದರು. ಆದರೆ ಅನುಚಿತ ವರ್ತನೆಗೈದ ಯುವಕ ಬಸ್ ನಲ್ಲಿ ಇರದೇ ಇದ್ದುದರಿಂದ, ಆತ ಸುಬ್ರಹ್ಮಣ್ಯದಿಂದ ಬೇರೆ ಬಸ್ಸಲ್ಲಿ ಬರುತ್ತಿರಬೇಕೆಂದು ತಿಳಿದು ಕೆಲವು ಯುವಕರು ಕಾರಲ್ಲಿ ಪೈಚಾರಿಗೆ ಹೋಗಿ ಕಾದರು. ಆ ಯುವಕ ಕೇರಳದ ಪಲ್ಲಂಗೋಡಿಗೆ ತೆರಳುವವನಾದ ಕಾರಣ ಸುಬ್ರಹ್ಮಣ್ಯದಿಂದ ಬೇರೆ ಬಸ್ಸಲ್ಲಿ ಬಂದು ಪೈಚಾರಿನಲ್ಲಿ ಬಸ್‌ನಿಂದ ಇಳಿದರೆನ್ನಲಾಗಿದೆ. ಕಾದು ಕುಳಿತಿದ್ದ ವಿದ್ಯಾರ್ಥಿಗಳು ಆತ ಪೈಚಾರಲ್ಲಿ ಬಸ್‌ನಿಂದ ಇಳಿದ ಕೂಡಲೇ ಆತನನ್ನು ಹಿಡಿದು ಕಾರಲ್ಲಿ ಕೂರಿಸಿಕೊಂಡು ಸುಳ್ಯ ಬಸ್‌ನಿಲ್ದಾಣಕ್ಕೆ ಕರೆದೊಯ್ದರು. ಆ ವೇಳೆಗೆ ಬಸ್‌ ನಿಲ್ದಾಣದಲ್ಲಿ ತೊಂದರೆಗೊಳಗಾದ ಆ ವಿದ್ಯಾರ್ಥಿನಿ ಮತ್ತು ಇತರ ಸಹಪಾಠಿಗಳು ಕಾದು ನಿಂತಿದ್ದರು. ಬಸ್‌ಸ್ಟ್ಯಾಂಡ್‌ಗೆ ಆತನನ್ನು ಕರೆತಂದ ಕೂಡಲೇ ಎಲ್ಲರೂ ಸೇರಿ ಆತನಿಗೆ ಹೊಡೆದರೆಂದೂ, ಆ ವೇಳೆಗೆ ಅಲ್ಲಿಗೆ ಬಂದ ಪೊಲೀಸರು ಗುಂಪಿನಿಂದ ಯುವಕನನ್ನು ಬಿಡಿಸಿ ಆಸ್ಪತ್ರೆಗೆ ಕಳುಹಿಸಿದರೆಂದು ತಿಳಿದು ಬಂದಿದೆ.

ಅಬ್ದುಲ್ ನಿಯಾಝ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೆರಳಿರುವುದಾಗಿ ತಿಳಿದು ಬಂದಿದ್ದು ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆಸ್ಪತ್ರೆಗೆ ಭೇಟಿ ನೀಡಿ ತನಿಖೆ ಪ್ರಾರಂಭಿಸಿದ್ದು ಹಲ್ಲೆಗೊಳಗಾದ ವ್ಯಕ್ತಿ ಪ್ರಾಥಮಿಕ ಚಿಕಿತ್ಸೆ ಪಡೆದು ಹಿಂತಿರುಗಿರುವುದಾಗಿ ತಿಳಿದು ಬಂದಿದೆ. ಅಲ್ಲದೆ ಪೈಚಾರ್ ಬಳಿಯಲ್ಲಿ ಹಲ್ಲೆ ನಡೆಸಿದವರು ಚೊಕ್ಕಾಡಿ ಮೂಲದ ಯುವಕರು ಎಂದು ಪೋಲಿಸರು ಶಂಕೆ ವ್ಯಕ್ತಪಡಿಸಿದ್ದು ತನಿಖೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!