ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸೆ.22 ರಂದು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಬೆಳ್ಳಿಹಬ್ಬ ಸಭಾಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾದ ಜಯಪ್ರಕಾಶ್ ಕೂಜುಗೋಡು ಸಭೆಯ ಅಧ್ಯಕ್ಷತೆ ವಹಿಸಿದ್ದರು.
2023-24ನೇ ಸಾಲಿನಲ್ಲಿ ಸಂಘವು 111.28 ಕೋಟಿ ರೂ. ವ್ಯವಹರಿಸಿದ್ದು, ಪ್ರಸಕ್ತ ಸಾಲಿನಲ್ಲಿ 32.31 ಲಕ್ಷ ನಿವ್ವಳ ಲಾಭ ಗಳಿಸಿರುತ್ತದೆ.
ವಾರ್ಷಿಕ ಮಹಾಸಭೆಯ ವರದಿಯನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಕಾಶ್.ಕೆ.ಎಸ್ ಮಂಡಿಸಿದರು.
ವರದಿ ಸಾಲಿನಲ್ಲಿ ಸಂಘವು 18.87 ಕೋಟಿ ಸಾಲ ವಿತರಿಸಿ 18.02 ಕೋಟಿ ಸಾಲ ವಸೂಲಾತಿ ಮಾಡಿ ವರ್ಷಾಖೇರಿಗೆ 18.66 ಕೋಟಿ ಸಾಲ ಇದ್ದು, ಶೇಕಡಾ 93.71 ಸಾಲ ವಸೂಲಾತಿಯಾಗಿರುತ್ತದೆ.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಮಾಧವ.ಡಿ, ನಿರ್ದೇಶಕರುಗಳಾದ ರವೀಂದ್ರ ಕುಮಾರ್ ರುದ್ರಪಾದ, ಸೋಮಸುಂದರ.ಕೆ, ಮೋಹನ್ ದಾಸ್ ರೈ, ಸುರೇಶ್ ಕೋಟೆಬೈಲು, ದಾಮೋದರ್.ಕೆ, ಕಿರಣ್ ಪೈಲಾಜೆ, ಸುಬ್ರಹ್ಮಣ್ಯ ರಾವ್.ಎ, ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಕಾಶ್.ಕೆ.ಎಸ್ ಉಪಸ್ಥಿತರಿದ್ದರು.
ಅಧ್ಯಕ್ಷರಾದ ಜಯಪ್ರಕಾಶ್ ಕೂಜುಗೋಡು ಸ್ವಾಗತಿಸಿ ನಿರ್ದೇಶಕರಾದ ರವೀಂದ್ರ ಕುಮಾರ್ ರುದ್ರಪಾದ ವಂದಿಸಿದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು.(ವರದಿ : ಉಲ್ಲಾಸ್ ಕಜ್ಜೋಡಿ)
- Tuesday
- December 3rd, 2024