
ಭಾರತೀಯ ಜನತಾ ಪಾರ್ಟಿಯ ಸದಸ್ಯತನ ಅಭಿಯಾನ ರಾಷ್ಟ್ರವ್ಯಾಪ್ತಿಯಲ್ಲಿ ನಡೆಯುತಿದ್ದು ಈ ಹಿನ್ನೆಲೆಯಲ್ಲಿ ಇಂದು ಪೆರುವಾಜೆಯ ಬೂತ್ ಸಂಖ್ಯೆ 76 ರಲ್ಲಿ ಮಹಾ ಸದಸ್ಯತನ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಬೂತ್ ಅಧ್ಯಕ್ಷ ರಮೇಶ್ ಮಠತಡ್ಕ, ಮಂಡಲ ಸಮಿತಿ ಸದಸ್ಯ ಪದ್ಮನಾಭ ಶೆಟ್ಟಿ, ಯುವಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಹರ್ಷಿತ್ ಪೆರುವಾಜೆ, ಜಯಪ್ರಕಾಶ್ ರೈ, ವಾಸುದೇವ ಪೆರುವಾಜೆ, ಶಿವಪ್ರಸಾದ್, ವಿಜಯ ಪೆರುವಾಜೆ ಈ ಅಭಿಯಾನದಲ್ಲಿ ಭಾಗವಹಿಸಿದರು.
