Ad Widget

ಹರಿಹರಪಳ್ಳತ್ತಡ್ಕ : ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ರೈತರಿಂದ ಸಭೆ –  ಇದು ಜಾರಿಯಾದರೇ ರೈತರು ಕೃಷಿ ಭೂಮಿ ಕಳೆದುಕೊಂಡು ನಿರಾಶ್ರಿತರಾಗುವ ಭೀತಿ ಇದೆ, ಇದಕ್ಕೆ ಹೋರಾಟ ಅನಿವಾರ್ಯ – ಕಿಶೋರ್ ಶಿರಾಡಿ

ಕಸ್ತೂರಿ ರಂಗನ್ ವರದಿ ಜಾರಿಯಾದರೇ ರೈತರು ಕೃಷಿಭೂಮಿ ಕಳೆದುಕೊಂಡು ನಿರಾಶ್ರಿತರಾಗುವ ಭೀತಿ ಇದೆ, ಇದಕ್ಕೆ ಹೋರಾಟ ಅನಿವಾರ್ಯ ಎಂದು ಮಲೆನಾಡು ಹಿತರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಹೇಳಿದರು.

. . . . . . . . .

ಅವರು ಹರಿಹರಲ್ಲತ್ತಡ್ಕದ ಹರಿಹರೇಶ್ವರ ಕಲಾ ಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಬ್ರಹ್ಮಣ್ಯ ವಲಯ ಇದರ ವತಿಯಿಂದ ನಡೆದ ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ಅಗಮಿಸಿ ಮಾತನಾಡಿದರು. ಸರಕಾರ ಈ ಯೋಜನೆಯನ್ನು ಬೇರೆ ಬೇರೆ ಹೆಸರುಗಳಿಂದ ಜಾರಿ ಮಾಡಲು ಹೊರಟಿದೆ. ಇದರಿಂದ ಜನರ ಕೃಷಿ ಭೂಮಿಗೆ ತೊಂದರೆ ಆಗುತ್ತದೆ. ಒಂದೆಡೆ ಪುಷ್ಪಗಿರಿ ವನ್ಯದಾಮ, ಹುಲಿಸಂರಕ್ಷಣೆ, ದಿ.ಗ್ರೇಟರ್ ತಲಕಾವೇರಿ, ಪಶ್ಚಿಮ ಘಟ್ಟ ಸಂರಕ್ಷಣೆ ಎಂಬ ಹೆಸರುಗಳನಿಟ್ಟು ಕೃಷಿ ಭೂಮಿಯನ್ನು ಅರಣ್ಯೀಕರಣ ಮಾಡಲು ಹೊರಟಿದೆ. ಇದರಿಂದ ಜನರ ಬದುಕು ಬೀದಿ ಪಾಲಾಗುವುದು ನಿಶ್ಚಿತ. ಇದಕ್ಕಾಗಿ ನಾವೆಲ್ಲರೂ ಒಟ್ಟಾಗಿ ಮುಂದೆ ಹೋರಾಡಬೇಕಾದ ಅನಿವಾರ್ಯತೆ ಇದೆ ಎಂದರು. ನಮ್ಮ ಪ್ರಮುಖ ಬೇಡಿಕೆ ಕಸ್ತೂರಿ ವರದಿ ಜಾರಿ ಬೇಡವೇ ಬೇಡ. ಇದರಿಂದ ಮೂಲಸೌಕರ್ಯಕ್ಕೆ ದಕ್ಕೆ ಇದೆ. ರೈತರು ಕೃಷಿಭೂಮಿ ಕಳೆದು ಕೊಂಡು ನಿರಾಶ್ರಿತರಾಗುವ ಭೀತಿ ಇದೆ ಎಂದರು.

. . . . . . .

ಸರಕಾರಕ್ಕೆ ಬೇಡಿಕೆ : ಪಶ್ಚಿಮ ಘಟ್ಟ ಜನವಸತಿ ಪ್ರದೇಶಗಳ ಗಡಿ ಗುರುತು, ಗ್ರಾಮಗಳನ್ನು ಜಂಟಿ ಸರ್ವೇ ಮಾಡುವುದು ಗೋಮಳ. ನಡುತೋಪ(ನಾಗಬನ ) ಕುಮ್ಕಿ ಕಾನಬಾಣೆ ಗೆ ಹಕ್ಕು ಬೇಕು. ಕಂದಾಯ ಭೂಮಿ, ಸರಕಾರಿ ಕಟ್ಟಡಗಳಿಗೋಸ್ಕರ ಜಾಗ ಕಾಯ್ದಿರಿಸಬೇಕು ಎಂದರು.

ಯೋಜನಾಧಿಕಾರಿ ಮಾಧವ ಗೌಡ ಮಾತನಾಡಿ ಈ ಬಾಗದ ಜನರ ಸಮಸ್ಯೆ ಗಳನ್ನು ವೀರೇಂದ್ರ ಹೆಗ್ಗಡೆಯವರ ಗಮನಕ್ಕೆ ತರುವ ಕೆಲಸ ಯೋಜನೆಯ ಮುಖಾಂತರ ಮಾಡುವ ಎಂದರು. ಈ ಭಾಗದಲ್ಲಿ ನೂರಾರು ಸಂಘಗಳು ಯೋಜನೆಯಿಂದ ಸಾಲ ಸೌಲಭ್ಯ ಪಡೆದು ಕೃಷಿ ಮಾಡುತ್ತಾ ಅಭಿವೃದ್ಧಿ ಹೊಂದಿದ್ದಾರೆ. ಈಗ ಕಸ್ತುರಿ ರಂಗನ್ ವರದಿ ಜನರಲ್ಲಿ ಭಯ ಮೂಡಿಸಿದೆ . ಈ ಮಾರಕ ವರದಿ ಜಾರಿ ಯಾದರೆ ಈ ತಾಲೂಕಿನ ಕೆಲವು ಗ್ರಾಮದ ಜನಗಳಿಗೆ ಬದುಕಲು ಕಷ್ಟ ವಾಗಬಹು ಎಂದರು. ವಿರೇಂದ್ರ ಹೆಗ್ಗಡೆಯವರ ಮುಖಾಂತರ ಸರಕಾರದ ಎಲ್ಲಾ ಶಾಸಕರು ಸಚಿವರು ಸಂಸದರು ರಿಗೆ ಮನವಿ ಸಲ್ಲಿಸಿ ಈ ಯೋಜನೆ ಕೈ ಬಿಡುವಂತೆ ಮನವಿ ಮಾಡಲಾಗುವುದು ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕಿಶೋರ್ ಕುಮಾರ್ ಕೂಜುಕೋಡು ಮಾತನಾಡಿ ಕಸ್ತುರಿ ರಂಗನ್ ವರದಿ ವಿರೋಧಿಸಿ ಮುಂದಿನ ದಿನಗಳಲ್ಲಿ ಹೋರಾಟ ಮಾಡುವ ಅನಿವಾರ್ಯ ರೈತರಿಗೆ ಇದೆ. ರೈತರು ಗ್ರಾಮಗಳ ಉಳಿವಿಗಾಗಿ ಹೋರಾಟ ಮಾಡುವ ಸಂದರ್ಭ ನಾವೆಲ್ಲರೂ ಒಂದಾಗಿ ಕೈ ಜೋಡಿಸುವ ಎಂದರು.

ಕಾರ್ಯಕ್ರಮ ದಲ್ಲಿ ಜನ ಜಾಗೃತಿ ವೇದಿಕೆಯ ಸುಬ್ರಹ್ಮಣ್ಯ ವಲಯದ ಅಧ್ಯಕ್ಷ ಮಾಧವ ಕೊಲ್ಲಮೊಗ್ರ, ಹರಿಹರ ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯ್ ಕುಮಾರ್, ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕ ಕೃಷ್ಣಪ್ಪ ಯುಂ, ಹರ್ಷ ಗೌಡ ಪಾಲ್ತಾಡು, ಸತೀಶ್ ಕೆರೆಕೋಡಿ ತೀರ್ಥರಾಮ ದೋಣಿಪಳ್ಳ ಉಪಸ್ಥಿತರಿದ್ದರು.
ತೀರ್ಥರಾಮ ದೋಣಿಪಳ್ಳ ಸ್ವಾಗತಿಸಿ, ಸತೀಶ್ ಕೆರೆಕೋಡಿ ವಂದಿಸಿದರು. ಗಿರೀಶ್ ಕುಮಾರ್ ಹೆರೆಕಜೆ ನಿರೂಪಿಸಿದರು. ಕಾರ್ಯಕ್ರಮ ದಲ್ಲಿ ಸುಬ್ರಹ್ಮಣ್ಯ ವಲಯದ ಎಲ್ಲ ಸಂಘಗಳ ಸದಸ್ಯರು, ಸೇವಾಪ್ರತಿನಿಧಿಗಳು ಬಾಧಿತ ಗ್ರಾಮಗಳ ಜನಪ್ರತಿನಿಧಿಗಳು,ಊರಿನ ಪ್ರಮುಖರು ಭಾಗವಹಿಸಿ ಸಲಹೆ ಸೂಚನೆ ನೀಡಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading