ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯ, ಆಂತರಿಕ ಗುಣಮಟ್ಟ ಭರವಸಾ ಕೋಶದ ಸಹಯೋಗದೊಂದಿಗೆ ಇತಿಹಾಸ ವಿಭಾಗದಿಂದ ಸೆ. 20ರಂದು ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮವನ್ನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ ಪಿ ಟಿ ತಾಳೆಯ ಹಿಂಗಾರವನ್ನು ಬಿಡಿಸುವುದರ ಮೂಲಕ ಉದ್ಘಾಟಿಸಿದರು.ಮುಖ್ಯ ಅತಿಥಿಯಾದ ನಿವೃತ್ತ ಪ್ರಾಂಶುಪಾಲ ಡಾ. ನಾರಾಯಣ ಶೇಡಿಕಜೆ ಅವರು ಇತಿಹಾಸ ಎಂಬುದು ಅಳಿದು ಹೋಗುವಂತದ್ದಲ್ಲ, ನಿತ್ಯ ನೂತನವಾದುದು ಹಿಂದಿರುವ ಶಾಸನಗಳು,ದಾಖಲೆಗಳೇ ಇತಿಹಾಸವಾಗಿದೆ ಎಂದು ತಿಳಿಸಿದರು. ಐತಿಹಾಸಿಕ ಪರಂಪರೆಯ ಬಗ್ಗೆ ಪುಣ್ಯಶ್ರೀ ಮತ್ತು ಅಪರ್ಣ ಪ್ರಬಂಧವನ್ನು ಮಂಡಿಸಿದರು.
ಈ ಕಾರ್ಯಕ್ರಮದಲ್ಲಿ ತರಗತಿ ವಾರು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು . ಸ್ಪರ್ಧೆಯ ತೀರ್ಪುಗಾರರಾಗಿ ಎಸ್ ಎಸ್ ಪಿ ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕಿ ಶ್ರೀಮತಿ ಸವಿತಾ ಕೈಲಾಸ್ ಮತ್ತು ಏನೆಕಲ್ ಕಲಾ ಮಾಯೆ ಸಂಘದ ಅಧ್ಯಕ್ಷ ಶ್ರೀ ಸುಧೀರ್ ಎನೆಕಲ್ ಸಹಕರಿಸಿದರು. ಕಾರ್ಯಕ್ರಮದಲ್ಲಿ ಐ.ಕ್ಯೂ. ಎ.ಸಿ ಸಂಯೋಜಕಿ ಲತಾ ಬಿ. ಟಿ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸಾದ ಎನ್ ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ದ್ವಿತೀಯ ಬಿ.ಎ ಹಾಗೂ ದ್ವಿತೀಯ ಬಹುಮಾನವನ್ನು ಪ್ರಥಮ ಬಿಕಾಂ ಬಿ ತರಗತಿ ಪಡೆದುಕೊಂಡಿತು. ಕಲ್ಪನಾ ನಿರೂಪಿಸಿದರು. ಡಾ.ಪ್ರಸಾದ ಎನ್ ಸ್ವಾಗತಿಸಿ, ಇತಿಹಾಸ ವಿಭಾಗದ ಉಪನ್ಯಾಸಕಿ ನಮಿತಾ ಎಂ ಎ ವಂದಿಸಿದರು.