ಸಂಪಾಜೆ ಗ್ರಾಮ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಇದರ ಆಶ್ರಯದಲ್ಲಿ ಪೌಷ್ಟಿಕ ಆಹಾರ ಸಪ್ತಾಹ 2024 ಮತ್ತು ಪೋಷನ್ ಮಾಸಾಚರಣೆ 2024 ಸಂಪಾಜೆ ಗ್ರಾಮ ಪಂಚಾಯತ್ ಸಬಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಮತಿ ಸುಮತಿ ಶಕ್ತಿವೇಲು ಅಧ್ಯಕ್ಷತೆ ವಹಿಸಿದ್ದರು ಕಾರ್ಯಕ್ರಮದ ಉದ್ಘಾಟನೆಯನ್ನು ಡಾ ಜಯಶ್ರೀ ಬೆಳ್ಳಾರೆ ದೀಪ ಬೆಳಗಿಸುವ ಮೂಲಕ ನೆರವೇರಿಸಿ ಮಾತನಾಡಿ ಮಕ್ಕಳ ಅರೋಗ್ಯ,ಮಕ್ಕಳ ಬೆಳವಣಿಗೆ ಮಾತನಾಡಿ.ಒಂದು ಮರ ಬೆಳವಣಿಗೆ ಆಗಬೇಕಾದರೆ ಸಸಿ ಇರುವಾಗ ಅದಕ್ಕೆ ಬೇಕಾದ ಪೌಷ್ಟಿಕ ಗೊಬ್ಬರ ಹಾಕಿ ಅದರ ಲಾಲನೆ ಪಾಲನೆ ಮಾಡಬೇಕು ಅದೇ ರೀತಿ ಮಕ್ಕಳ ಬೆಳವಣಿಗೆಗೆ ಬೇಕಾದ ಪೌಷ್ಟಿಕ ಆಹಾರ, ಮಗುವಿನ ಬೆಳವಣಿಗೆಯಲ್ಲಿ ಯಾವ ರೀತಿ ತಾಯಿ ಪಾತ್ರ ವಹಿಸಬೇಕು.ಕೊಬ್ಬಿನ ಅಂಶದ ಬಗ್ಗೆ ಮಾಹಿತಿಯನ್ನು ನೀಡಿದರು.ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಅದಿಕಾರಿ ಶ್ರೀಮತಿ ಶೈಲಜಾ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್.ಕೆ.ಹನೀಫ್,ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜ,ಮಾಜಿ ಅಧ್ಯಕ್ಷರು ಹಾಲಿ ಸದಸ್ಯರುಗಳಾದ ಜಿ.ಕೆ.ಹಮೀದ್ ಗೂನಡ್ಕ,ಶ್ರೀ ಮತಿ ಸುಂದರಿ.ಮುಂಡಡ್ಕ ಸದಸ್ಯರುಗಳಾದ ಅಬೂಸಾಲಿ ಗೂನಡ್ಕ ಲಿಸ್ಸಿ ಮೊನಾಲಿಸಾ ವಿಮಲಾ ಪ್ರಸಾದ್, ಅನುಪಮಾ,ರಜನಿ ಶರತ್,ಸುಶೀಲ ಕೈಪಡ್ಕ,ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ಪಾರ್ವತಿ, ಶ್ರೀಮತಿ ಇಂದಿರಾ ದೇವಿಪ್ರಸಾದ್,ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷರಾದ ರಾಜೀವಿ ಕೆ.ಬೈಲೆ, ಕಲ್ಲುಗುಂಡಿ ಅರೋಗ್ಯ ಸಹಾಯಕಿ ಬಾಗಿರಥಿ ಮಾಜಿ ಪಂಚಾಯತ್ ಅಧ್ಯಕ್ಷರಾದ ಶ್ರೀ ಮತಿ ಯಮುನಾ ಬಿ.ಎಸ್.ಲಯನ್ಸ್ ಕ್ಲಬ್ ಸದಸ್ಯರುಗಳಾದ ನಳಿನಿ ಕಿಶೋರ್,ಶುಭ,ಧನು ನವೀನ್,ಸುರೇಶ, ಕಮ್ಯುನಿಟಿ ಹೆಲ್ತ್ ಆಫೀಸರ್ ಚಿತ್ರ ಹಾಗೂ ಹರ್ಷಿತ ಅಂಗನವಾಡಿ ಕಾರ್ಯಕರ್ತರುಗಳಾದ ಶೀಲಾವತಿ,,ಹರ್ಷಿತ,ಶಾರದಾ ಪುಷ್ಪ,ಜಯಲಕ್ಷ್ಮಿ ಆಶಾ ಕಾರ್ಯಕರ್ತರುಗಳಾದ ಸವಿತಾ ರೈ,ಪ್ರೇಮಲತಾ, ಸೌಮ್ಯ,ಆಶಾ ವಿನಯಕುಮಾರ್,ಕ್ರಷಿ ಸಖಿ ಮೋಹಿನಿ ವಿಶ್ವನಾಥ್,ಸಂಜೀವಿನಿ ಎಂ.ಬಿ.ಕೆ.ಕಾಂತಿ ಬಿ.ಎಸ್.ಪಂಚಾಯತ್ ಸಿಬ್ಬಂದಿಗಳು ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು ಅಂಗನವಾಡಿ ಕಾರ್ಯಕರ್ತರಾದ ಜಯಂತಿ ದೊಡ್ಡಡ್ಕ ಸ್ವಾಗತಿಸಿ, ಅಂಗನವಾಡಿ ಮೇಲ್ವಿಚಾರಕರಾದ ದೀಪಿಕಾ ಪ್ರಾಸ್ತವಿಕ ಭಾಷಣ ಮಾಡಿದರು ,ಅಂಗನವಾಡಿ ಕಾರ್ಯಕರ್ತರಾದ ಧರ್ಮಕಲಾ ಕಾರ್ಯಕ್ರಮ ನಿರೂಪಿಸಿದರು.