
ಮಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಕಲ್ಲಾಜೆ ಯುವಕನೋರ್ವ ಅಸೌಖ್ಯದಿಂದ ಸಾವನ್ನಪ್ಪಿದ ಘಟನೆ ಸೆ.16ರ ತಡರಾತ್ರಿ ಸಂಭವಿಸಿದೆ. ಕಲ್ಲಾಜೆ ನಿವಾಸಿ ಲಕ್ಷ್ಮಣಗೌಡರವರ ಪುತ್ರ ಲಿಖಿತ್ ಕಲ್ಲಾಜೆ(26) ಮೃತ ದುರ್ದೈವಿ.
ಕಳೆದ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಲಿಖಿತ್ ಚಿಕಿತ್ಸೆ ಫಲಿಸದೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಮೃತರು ತಂದೆ, ತಾಯಿ, ಸಹೋದರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
