ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇವರಿಂದ ಗ್ರಾಮ ಪಂಚಾಯತ್ ಹರಿಹರ ಪಲ್ಲತ್ತಡ್ಕ ಇದರ ಸಹಯೋಗದೊಂದಿಗೆ ಸೆ.17 ಮಂಗಳವಾರದಂದು “ನಾಯಿಗಳಿಗೆ ಉಚಿತ ಹುಚ್ಚುನಾಯಿ ರೋಗನಿರೋಧಕ ಲಸಿಕಾ ಶಿಬಿರ” ಕಾರ್ಯಕ್ರಮ ನಡೆಯಲಿದೆ.
ಲಸಿಕಾ ಶಿಬಿರದ ವೇಳಾಪಟ್ಟಿ ಈ ಕೆಳಗಿನಂತಿದ್ದು,
ಪೂರ್ವಾಹ್ನ 10:30 ರಿಂದ 11:00 ರವರೆಗೆ ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ವಠಾರದಲ್ಲಿ.
ಪೂರ್ವಾಹ್ನ 11:05 ರಿಂದ 11:30 ರವರೆಗೆ ಹರಿಹರ ಪಲ್ಲತ್ತಡ್ಕ ಶ್ರೀರಾಮಕುಟ್ಟಿಯವರ ಮನೆಯ ಹತ್ತಿರ.
ಪೂರ್ವಾಹ್ನ 11:40 ರಿಂದ 12:00 ರವರೆಗೆ ರೇಗನ್ ಶೆಟ್ಟಿಯಡ್ಕ ರವರ ಮನೆಯ ಹತ್ತಿರ.
ಅಪರಾಹ್ನ 12:10 ರಿಂದ 12:40 ರವರೆಗೆ ಕಲ್ಲೇಮಠ ಸಾರ್ವಜನಿಕ ಗ್ರಂಥಾಲಯದ ಹತ್ತಿರ.
ಅಪರಾಹ್ನ 12:50 ರಿಂದ 1:05 ರವರೆಗೆ ಮಾನಡ್ಕ ಚಾಮುಂಡೇಶ್ವರಿ ಕಟ್ಟೆಯ ಹತ್ತಿರ.
ಅಪರಾಹ್ನ 1:10 ರಿಂದ 1:25 ರವರೆಗೆ ಪದಕ ಬಸ್ ತಂಗುದಾಣದ ಹತ್ತಿರ ಬಾಳುಗೋಡು.
ಅಪರಾಹ್ನ 1:30 ರಿಂದ 1:45 ರವರೆಗೆ ಬೆಟ್ಟುಮಕ್ಕಿ ಮೈದಾನದ ಹತ್ತಿರ ಬಾಳುಗೋಡು.
ಅಪರಾಹ್ನ 2:30 ರಿಂದ 2:45 ರವರೆಗೆ ಬಸವನಗುಡಿ ವಠಾರ ಬಾಳುಗೋಡು.
ಅಪರಾಹ್ನ 3:00 ರಿಂದ 3:15 ರವರೆಗೆ ಮಲ್ಲಾರ ಬಸ್ ತಂಗುದಾಣದ ಹತ್ತಿರ ನಾಯಿಗಳಿಗೆ ಉಚಿತ ಹುಚ್ಚುನಾಯಿ ರೋಗನಿರೋಧಕ ಲಸಿಕಾ ಶಿಬಿರ ನಡೆಯಲಿದ್ದು, ಸಾರ್ವಜನಿಕರು ತಮ್ಮ ಸಾಕುನಾಯಿಗಳನ್ನು ಲಸಿಕೆಗೆ ಕರೆತರುವ ಸಂದರ್ಭದಲ್ಲಿ ನಾಯಿಯ ಮಾಲೀಕರ ಆಧಾರ್ ಕಾರ್ಡ್ ಅನ್ನು ತರತಕ್ಕದ್ದು. ಹಾಗೂ ಮೇಲೆ ಸೂಚಿಸಿದ ಲಸಿಕಾ ಕೇಂದ್ರಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಲಸಿಕೆ ನೀಡಲಾಗುವುದಿಲ್ಲ ಎಂದು ಗ್ರಾಮ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.(ವರದಿ : ಉಲ್ಲಾಸ್ ಕಜ್ಜೋಡಿ)
- Wednesday
- November 27th, 2024