ಭಾರತೀಯ ತೀಯ ಸಮಾಜ ಸುಳ್ಯ ವಲಯ ಸಮಿತಿ, ನಗರ ಹಾಗೂ ವಿವಿಧ ಗ್ರಾಮ ಸಮಿತಿಗಳ ಆಶ್ರಯದಲ್ಲಿ ಅದ್ದೂರಿಯಾಗಿ ಮೂರನೇ ವರ್ಷದ ಓಣಂ ಆಚರಣೆಯು ಸೆಪ್ಟೆಂಬರ್ 16 ರಂದು ಗಿರಿದರ್ಶಿನಿ ಮರಾಠಿ ಸಮಾಜ ಮಂದಿರ ಅಂಬೆಟಡ್ಕ ದಲ್ಲಿ ನಡೆಯಿತು.
ಓಣಂ ಸಂಭ್ರಮಾಚರಣೆಯ ಕಾರ್ಯಕ್ರಮವನ್ನು ಕುಂಞ್ಞರಾಮನ್ ಉದ್ಘಾಟಿಸಿದರು ಬಳಿಕ ಮಕ್ಕಳು, ಪುರುಷ, ಮಹಿಳೆಯರಿಗೆ ಪ್ರತ್ಯೇಕವಾಗಿ ಆಟೋಟ ಸ್ಪರ್ಧೆಗಳು ನಡೆಯಿತು ಬಳಿಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಿತು.
ಸಮರೋಪ ಸಮಾರಂಭದ ಅಧ್ಯಕ್ಷತೆಯನ್ನು ಪವಿತ್ರನ್ ಗುಂಡ್ಯ ವಹಿಸಿದ್ದರು. ವೇದಿಕೆಯಲ್ಲಿ ಪ್ರಸಿದ್ಧ ತುಳುರಂಗ ಭೂಮಿ ಕಲಾವಿದ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಮಾತನಾಡಿ ಮಹಿಳೆಯರು ಮತ್ತು ಯುವಕರು ನಮ್ಮ ಸಮುದಾಯದ ಸಂಸ್ಕೃತಿಗಳನ್ನು ಉಳಿಸುವ ನಿಟ್ಟಿನಲ್ಲಿ ಸಂಸ್ಕೃತಿಯ ಪ್ರತೀಕವಾಗಿ ಇರಬೇಕು. ಅಲ್ಲದೇ ಹೆಣ್ಣು ಮಕ್ಕಳು ಹಣೆಗೆ ಕುಂಕುಮ, ಲಕ್ಷಣವಾಗಿ ತಲೆಬಾಚಿ ಸೀರೆಯುಟ್ಟು ಮನೆಯಿಂದ ಹೊರ ಬರಬೇಕು ಎಂದು ಹೇಳಿದರು. ಸಭಾ ವೇದಿಕೆಯಲ್ಲಿ ಭಾರತೀಯ ತೀಯ ಸಮಾಜ ಕೇಂದ್ರ ಸಮಿತಿ ಅಧ್ಯಕ್ಷರಾದ ಪ್ರಸ್ತುತ ಮಂಗಳೂರು ನಗರಾ ಭಿವೃದ್ದಿ ಪ್ರಾಧಿಕಾರ (ಮೂಡಾ)ದ ಅಧ್ಯಕ್ಷರಾದ ಸದಾಶಿವ ಉಳ್ಳಾಲ್ , ಪ್ರೇಮಚಂದ್ , ರಾಕೇಶ್ ಕುತ್ತಮೊಟ್ಟೆ , ಸುನಿಲ್ ಕೆ ಸಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅರವಿಂದ ಬೋಳಾರ್ ಹಾಗೂ ಸದಾಶಿವ ಉಳ್ಳಾಲ್ ರವರನ್ನು ಸನ್ಮಾನಿಸಲಾಯಿತು. ನಿವೃತ್ತ ಎಎಸ್ಐ ಬಾಸ್ಕರ ಹಾಗೂ ವಿಜಯ ಕಾರ್ಯಕ್ರಮ ನಿರೂಪಿಸಿದರು.