Ad Widget

ಸುಳ್ಯ: ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಓಣಂ ಆಚರಣೆ

ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಓಣಂ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬವನ್ನು ಪುಟಾಣಿಗಳು, ಶಿಕ್ಷಕರು ಹಾಗೂ ಪೋಷಕರು ಸೇರಿ ಸಂಭ್ರಮದಿಂದ ಆಚರಿಸಿದರು. ಕಾರ್ಯಕ್ರಮನ್ನು ದೀಪ ಬೆಳಗುವುದರ ಮೂಲಕ ವಿದ್ಯಾರ್ಥಿಗಳು ಹಾಗೂ ಪೋಷಕರಾದ ಸವಿತಾ ಉದ್ಘಾಟಿಸಿದರು. ಪುಟಾಣಿಗಳು ಶಿಕ್ಷಕರ ಕೈಚಳಕದಿಂದ ಸುಂದರವಾದ ಪೂಕಳಂ ಮೂಡಿಬಂದಿತ್ತು. ಬಳಿಕ ಶಾಲಾ ಸಂಚಾಲಕಿಯಾದ ಗೀತಾಂಜಲಿ ಟಿ ಜಿ ವಿದ್ಯಾರ್ಥಿಗಳಿಗೆ ಓಣಂ ಆಚರಣೆಯ ಕಥೆಯನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಪುಟಾಣಿಗಳು ಹಾಗೂ ಶಿಕ್ಷಕರು ಕೇರಳದ ಸಾಂಪ್ರಾದಾಯಿಕ ಶೈಲಿಯ ಉಡುಗೆಯನ್ನು ತೊಟ್ಟು ಸಂಭ್ರಮಿಸಿದರು. ಸಭಾಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ಕಾರ್ಯಕ್ರಮದಲ್ಲಿ ಪುಟಾಣಿಗಳು ಮಹಾಬಲಿ ಹಾಗೂ ವಾಮನ ವೇಷ ಧರಿಸಿದ್ದು ಆಕರ್ಷಣಿಯವಾಗಿತ್ತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!