ಗ್ರಾಮೀಣ ಬಡ ಕುಟುಂಬಕ್ಕೆ ಅನುಕೂಲವಾಗಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಈ ಹಿಂದಿದ್ದ ಮಾನದಂಡ ದಲ್ಲಿ ಕೇಂದ್ರ ಸರ್ಕಾರ ಸಡಿಲಿಕೆ ಮಾಡಿದ್ದು ಈ ಹಿನ್ನೆಲೆಯಲ್ಲಿ ಅನೇಕ ಬಡ ಕುಟುಂಬಗಳಿಗೆ ಪ್ರಯೋಜನವಾಗಲಿದ್ದು ಕೇಂದ್ರ ಸರ್ಕಾರದ ಕ್ರಮ ಸ್ವಾಗತಾರ್ಹ.
ದ್ವಿಚಕ್ರ ವಾಹನ,ರೆಫ್ರಿಜರೇಟರ್, ಮತ್ತು ತಿಂಗಳಿಗೆ 15 ಸಾವಿರ ಆದಾಯ ಗಳಿಸುವ ಕುಟುಂಬಗಳು ಇನ್ನು ಈ ಯೋಜನೆಯನ್ನು ಪಡೆಯಬಹುದು. ಇನ್ನು ಅನೇಕ ಷರತ್ತುಗಳನ್ನು ಸಡಿಲ ಮಾಡುವುದರ ಮೂಲಕ ಗ್ರಾಮೀಣ ಬಡ ಜನರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಯಲ್ಲಿ ಮನೆ ನಿರ್ಮಿಸಲು ಸಹಕಾರಿ ಯಾಗಲಿದೆಯೆಂದು ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ
- Wednesday
- November 27th, 2024