ಭಾರತೀಯ ತೀಯ ಸಮಾಜ ಸುಳ್ಯ ವಲಯ ಸಮಿತಿ, ನಗರ ಸಮಿತಿ ಮತ್ತು ವಿವಿಧ ಗ್ರಾಮ ಸಮಿತಿಗಳ ಸಂಯುಕ್ತ ಆಶ್ರಯ ದಲ್ಲಿ ಮೂರನೇ ವರ್ಷದ ಓಣಂ ಆಚರಣೆಯು ಸೆಪ್ಟೆಂಬರ್ 16 ರಂದು ಗಿರಿದರ್ಶಿನಿ ಮರಾಠಿ ಸಮಾಜ ಮಂದಿರ ಅಂಬೆಟಡ್ಕ ದಲ್ಲಿ ನಡೆಯಲಿದೆ ಈ ದಿನ ಮಕ್ಕಳಿಗೆ, ಪುರುಷ ರಿಗೆ, ಮಹಿಳೆಯರಿಗೆ ಪ್ರತ್ಯೇಕ ವಾಗಿ ಆಟೋಟ ಸ್ಪರ್ಧೆಗಳು ನಡೆಯಲಿದ್ದು ನಂತರ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ ಈ ಸಮಾರಂಭ ದಲ್ಲಿ ಮುಖ್ಯ ಅತಿಥಿ ಗಳಾಗಿ ಭಾಗವಹಿಸಲಿರುವ ಪ್ರಸಿದ್ಧ ತುಳುರಂಗ ಭೂಮಿ ಕಲಾವಿದ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಮತ್ತು ಭಾರತೀಯ ತೀಯ ಸಮಾಜ ಕೇಂದ್ರ ಸಮಿತಿ ಅಧ್ಯಕ್ಷರಾದ ಪ್ರಸ್ತುತ ಮಂಗಳೂರು ನಗರಾ ಭಿವೃದ್ದಿ ಪ್ರಾಧಿಕಾರ (ಮೂಡಾ )ದ ಅಧ್ಯಕ್ಷರಾಗಿ ರಾಜ್ಯ ಸರಕಾರ ದಿಂದ ನೇಮಕ ಗೊಂಡಿರುವ ಶ್ರೀ ಸದಾಶಿವ ಉಳ್ಳಾಲ್ ರವರಿಗೆ ಸನ್ಮಾನ ಕಾರ್ಯಕ್ರಮ ವು ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
- Wednesday
- November 27th, 2024