
ಮಂಜೇಶ್ವರ: ಹೊಸಂಗಡಿಯ ಹೈಲ್ಯಾಂಡ್ಸ್ ಕಾಂಪ್ಲೆಕ್ಸ್ ನಲ್ಲಿರುವ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಶನಿವಾರ ವಿಶೇಷವಾಗಿ ಓಣಂ ಹಬ್ಬ ಆಚರಿಸಲಾಯಿತು. ಸಂಸ್ಥೆಯ ಮುಖ್ಯಸ್ಥ ಡಾ. ಮುರಲೀಮೋಹನ ಚೂಂತಾರು ಶುಭಹಾರೈಸಿದರು. ವೈದ್ಯೆ ಡಾ.ರಾಜಶ್ರೀ ಮೋಹನ್, ಪರಿಚಾರಕಿಯರಾದ ರಮ್ಯಾ, ಚೈತ್ರ, ಸುಶ್ಮಿತಾ ಹಾಗೂ ಜಯಶ್ರೀ ಉಪಸ್ಥಿತರಿದ್ದರು.
ಸಂಸ್ಥೆಯು 28 ವರ್ಷಗಳಿಂದ ಹೊಸಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜನಮನ್ನಣೆಗೆ ಪಾತ್ರವಾಗಿದೆ.
