
ಸುಳ್ಯ ಯುವಜನಾ ಸoಯುಕ್ತ ಮಂಡಳಿ ವತಿಯಿಂದ ಸುಳ್ಯ ಯುವ ಸದನ ದಲ್ಲಿ ನಡೆದ 2023-2024 ನೇ ಸಾಲಿನ ಸುಳ್ಯ ತಾಲೂಕಿನ ಅತ್ಯುತ್ತಮ ಯುವಕ ಯುವತಿ ಮಂಡಲ ಪ್ರಶಸ್ತಿ ಪ್ರಧಾನ ಸಮಾರಂಭವು ಸೆ. 14 ರಂದು ನಡೆಯಿತು. ಚೈತ್ರ ಯುವತಿ ಮಂಡಲ ಅಜ್ಜಾವರ ಸತತವಾಗಿ ಎರಡನೇ ವರ್ಷವೂ ಸುಳ್ಯ ತಾಲೂಕಿನ ಗಮನಾರ್ಹ ಸಾಧನೆಗೈದ ಪ್ರಶಸ್ತಿಗೆ
ಭಾಜನವಾಯಿತು.ಈ ಸಂದರ್ಭದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರು ಶಾಲುಹೊದೆಸಿ ಅಭಿನಂದಿಸುವುದರ ಜೊತೆಗೆ ತಮ್ಮ ವೈಯಕ್ತಿಕ ನಿಧಿ ಯಿಂದ ಕ್ರೀಡಾ ಸಲಕರಣೆಗಳನ್ನು ಒದಗಿಸಿದರು.
