ಅಜ್ಜಾವರ ಮೇದಿನಡ್ಕ , ಮೇನಾಲ , ನೆಲ್ತಿಲ ಹಾಗೂ ಸುತ್ತ ಮುತ್ತಲಿನ ಪರಿಸರದಲ್ಲಿ ನಿರಂತರವಾಗಿ ಕಾಡಾನೆಗಳು ದಾಳಿಯಿಡುತ್ತಿದ್ದು ಅಪಾರ ಕೃಷಿ ನಾಶಗಳು ಸಂಭವಿಸಿದೆ.
ರೈತರ ಕೃಷಿಯು ಅತೀವ ಮಳೆಯಿಂದಾಗಿ ಅಡಿಕೆಗೆ ಕೊಳೆರೋಗ , ಕರಿಮೆಣಸು ಸೊರಗು ರೋಗದಿಂದ ಹಾಳಾಗಿದ್ದರೆ ತೆಂಗು ಸೇರಿದಂತೆ ಇತರೆ ಕೃಷಿಗಳು ಇದರಿಂದ ಹೊರತಾಗಿಲ್ಲಾ ಇವೆಲ್ಲದರ ಮಧ್ಯೆ ಅರಣ್ಯದ ಅಂಚಿನಲ್ಲಿನರುವ ಕೃಷಿಕರಿಗೆ ನಿರಂತರ ಆನೆ ದಾಳಿಯಿಂದ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇವೆಲ್ಲವನ್ನು ಗಂಭೀರವಾಗಿ ಪರಿಗಣಿಸಿ ಅರಣ್ಯ ಇಲಾಖೆ ಮತ್ತು ಸಂಬಂಧಪಟ್ಟ ಸಚಿವರು ಆದಷ್ಟು ಬೇಗವಾಗಿ ಸೋಲಾರ್ ಬೇಲಿ ನಿರ್ಮಿಸಿ ಕೃಷಿಕರ ಹಿತವನ್ನು ಕಾಪಾಡಬೇಕಿದೆ.