Ad Widget

ವಳಲಂಬೆ ಅಂಗನವಾಡಿಯಲ್ಲಿ ಹಿರಿಯ ವಿದ್ಯಾರ್ಥಿ ಸಂಘ ರಚನೆ – ಅಧ್ಯಕ್ಷರಾಗಿ ಜಯಂತ ಕಾಜಿಮಡ್ಕ, ಉಪಾಧ್ಯಕ್ಷರಾಗಿ ಶುಭಕರ ಅಂಜೇರಿ, ಕಾರ್ಯದರ್ಶಿಯಾಗಿ ಚೈತನ್ಯ ವಳಲಂಬೆ, ಖಜಾಂಜಿಯಾಗಿ ಹಸೈನಾರ್ ವಳಲಂಬೆ

ವಳಲಂಬೆ ಅಂಗನವಾಡಿ ಕೇಂದ್ರದಲ್ಲಿ ನೂತನವಾಗಿ ಹಿರಿಯ ವಿದ್ಯಾರ್ಥಿ ಸಂಘ ರಚನೆ ಹಾಗೂ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಸೆ.13 ರಂದು ನಡೆಯಿತು. ಗ್ರಾಮ ಪಂಚಾಯತ್ ಸದಸ್ಯರಾದ ವೆಂಕಟ್ ವಳಲಂಬೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಇಲಾಖಾ ಮೇಲ್ವಿಚಾರಕರಾದ ಶ್ರೀಮತಿ ವಿಜಯ ಜೆ ಡಿ ಇವರು ಉಪಸ್ಥಿತರಿದ್ದರು.   

ನೂತನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಜಯಂತ ಕಾಜಿಮಡ್ಕ, ಉಪಾಧ್ಯಕ್ಷರಾಗಿ ಶುಭಕರ ಅಂಜೇರಿ, ಕಾರ್ಯದರ್ಶಿಯಾಗಿ ಚೈತನ್ಯ ವಳಲಂಬೆ, ಖಜಾಂಜಿಯಾಗಿ ಹಸೈನಾರ್ ವಳಲಂಬೆ ಹಾಗೂ ಜೊತೆ ಕಾರ್ಯದರ್ಶಿಯಾಗಿ ನವ್ಯ ವಳಲಂಬೆ ಇವರನ್ನು ಆಯ್ಕೆ ಮಾಡಲಾಯಿತು. ಹಾಗೂ ಕಾರ್ಯಕಾರಿಣಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಪೋಷಣ್ ಮಾಸಾಚರಣೆ ಕಾರ್ಯಕ್ರಮದ ಪ್ರಯುಕ್ತ ಇಲಾಖಾ ಮೇಲ್ವಿಚಾರಕಿಯವರು ರಕ್ತಹೀನತೆಯ ಬಗ್ಗೆ ಮಾಹಿತಿ ನೀಡಿದರು.  ಅಂಗನವಾಡಿ ಕಾರ್ಯಕರ್ತೆ ಚಂದ್ರಾವತಿಯವರು ಸ್ವಾಗತಿಸಿ, ಕುಮಾರಿ ಚೈತನ್ಯ ವಂದಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!