ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗಿರಥಿ ಮುರುಳ್ಯ ಭೇಟಿ ಸೆ.10ರಂದು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಪುನರ್ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ನೇಮಿರಾಜ್ ಪಲ್ಲೋಡಿ ದೇಗುಲದ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ಒದಗಿಸಿ ಕೊಡಬೇಕೆಂದು ಮನವಿ ಪತ್ರವನ್ನು ನೀಡಿ ವಿನಂತಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಚಂದ್ರಪ್ರಕಾಶ್ ಕಂಬಳ, ಊರ ಪ್ರಮುಖರಾದ ಚಂದ್ರಶೇಖರ ಶಾಸ್ತ್ರಿ, ಲಿಗೋಧರ ಆಚಾರ್ಯ, ಲೋಕೇಶ್ ಬರೆಮೇಲು, ಅಶೋಕ್ ಮೇಲ್ಪಾಡಿ, ಕುಶಾಲಪ್ಪ ಮೇಲ್ಪಾಡಿ , ಜಗದೀಶ್ ಪುರಿಯ, ತೇಜಸ್ ಜಾಕೆ, ಪ್ರಶಾಂತ್ ಅಲೆಂಗಾರ, ಅಚ೯ಕರಾದ ಶಿವಾನಂದ ಮಯ್ಯ, ಪುನರ್ ನಿರ್ಮಾಣ ಸಮಿತಿ ಕಾರ್ಯದರ್ಶಿ ಕುಸುಮಾಧರ ಕರಿಮಜಲು, , ಕೇಶವ ಆಚಾರ್ಯ ಉಪಸ್ಥಿತರಿದ್ದರು.