
ಮೇನಾಲ ಇರಂತಮಜಲು ಸಮೀಪ ಶಾಲಾ ಬಸ್ಸಿನ ಹಿಂಭಾಗಕ್ಕೆ ಬೈಕೊಂದು ಡಿಕ್ಕಿ ಹೊಡೆದ ಘಟನೆ ಇದೀಗ ವರದಿಯಾಗಿದೆ
ಸುಳ್ಯದ ರೋಟರಿ ಶಿಕ್ಷಣ ಸಂಸ್ಥೆಗೆ ಸೇರಿದ ಶಾಲೆಯ ಬಸ್ಸು ಮೇನಾಲ ಮಾರ್ಗವಾಗಿ ವಿದ್ಯಾರ್ಥಿಗಳನ್ನು ಕರೆದೊಯ್ಯತ್ತಿದ್ದ ವೇಳೆಯಲ್ಲಿ ವಿದ್ಯಾರ್ಥಿಗಳನ್ನು ಇಳಿಸಲು ಬಸ್ಸು ರಸ್ತೆಯಲ್ಲೆ ನಿಲ್ಲಿಸುತ್ತಿದ್ದಂತೆ ಬಸ್ಸಿನ ಹಿಂಬದಿಯಿಂದ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದ್ದು ಘಟನೆಯಿಂದ ಸವಾರನಿಗೆ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
