
ಕೆ.ವಿ.ಜಿ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಓಣಂ ಆಚರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟಣೆ ನಡೆಯಿತು. ಕಾಲೇಜಿನ ಪ್ರಾಂಶುಪಾಲೆ ಡಾ. ಮೋಕ್ಷ ನಾಯಕ್ ಕಾರ್ಯಕ್ರಮ ಉದ್ಘಾಟನೆ ನರವೇರಿಸಿ, ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲೆ ಡಾ. ಶೈಲಾ ಎಂ. ಪೈ ಹಾಗೂ.ವಿಭಾಗ ಮುಖ್ಯಸ್ಥರಾದ ಡಾ. ಜಯಪ್ರಸಾದ್ ಆನೆಕಾರ್, ಡಾ. ಸುಹಾಸ್, ಡಾ. ಪ್ರಸನ್ನ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಲ್ಲಾ ಭೋದಕ ಭೋದಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ಶ್ರೀಯಾ ಶಿಜಿ ಕುಮಾರ್ ಎಲ್ಲರನ್ನೂ ಸ್ವಾಗತಿಸಿದರು. ಡಾ. ಅಲೀನಾ ಜಾನ್ ವಂದನಾರ್ಪಣೆಗೈದರು. ಡಾ. ಆಯಿಷಾ ರೌಹಾ, ಡಾ. ಜೆರ್ಲಿನ್ ಕೆ ಜೋನ್ಸನ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಾಂಸ್ಕçತಿಕ ಕಾರ್ಯಕ್ರಮವನ್ನು ಡಾ. ಅನುಜ್ಞಾ ಬಿ.ಎಂ. ನಿರ್ವಹಿಸಿದರು.
ಓಣಂ ಆಚರಣೆಯ ವೈಶಿಷ್ಠö್ಯವಾಗಿ ಎಲ್ಲಾ ವಿದ್ಯಾರ್ಥಿಗಳು ಓಣಂ ಉಡುಗೆ ಧರಿಸಿ, ಪೂಕಳಂ ಹಾಕಿ, ಓಣಂ ಪಾಯಸವನ್ನು ನೀಡಿ ಸಂಭ್ರಮಿಸಿದರು ಹಾಗೂ ಸ್ಪರ್ಧಾಚಟುವಟಿಕೆಗಳನ್ನು ನಡೆಸಿದರು ಅಂತೆಯೇ ಸಾಂಸ್ಕçತಿಕ ಕಾರ್ಯಕ್ರಮವನ್ನು ನೀಡಿ ವಿಶಿಷ್ಠವಾಗಿ ನಡೆಸಿಕೊಟ್ಟರು.
