Ad Widget

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಜೇಸಿ ಸಪ್ತಾಹದ ಮೂರನೇ ದಿನ – ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಯವರಿಂದ ಶ್ಲಾಘನೆ

ಜೇಸಿಐ ಸುಳ್ಯ ಪಯಸ್ವಿನಿಯ ವತಿಯಿಂದ ಜೇಸಿ ಸಪ್ತಾಹದ ಮೂರನೇ ದಿನದ ಅಂಗವಾಗಿ ಹದಿಹರೆಯದವರ ಆರೋಗ್ಯ ಸಮಸ್ಯೆಗಳ ಮಾಹಿತಿ ಶಿಬಿರ ಮತ್ತು ಆತ್ಮಹತ್ಯೆ ತಡೆ ದಿನಾಚರಣೆಯನ್ನು ಎಲಿಮಲೆಯ ಮೆಟ್ರಿಕ್ ನಂತರದ ಬಿ.ಸಿ.ಎಂ ವಿದ್ಯಾರ್ಥಿನಿ ನಿಲಯದಲ್ಲಿ ನಡೆಸಲಾಯಿತು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಶ್ರೀಮತಿ ಬಿಂದಿಯಾ ಮುಖ್ಯ ಅಥಿತಿ ಗಳಾಗಿ ಭಾಗವಹಿಸಿ ಗ್ರಾಮಾಂತರ ಪ್ರದೇಶದಲ್ಲಿ ಹೆಣ್ಣುಮಕ್ಕಳಿಗೆ ಉಪಯುಕ್ತ ವಾಗಿರುವ ಅಗತ್ಯ ಮಾಹಿತಿ ಕಾರ್ಯಕ್ರಮವನ್ನು ನಡೆಸಿದ ಜೇಸಿಐ ಸುಳ್ಯ ಪಯಸ್ವಿನಿಯ ಕಾರ್ಯವನ್ನು ಮೆಚ್ಚಿ ಶ್ಲಾಘಿಸಿ, ಶುಭ ಹಾರೈಸಿದರು.


ಸಭಾಧ್ಯಕ್ಷತೆಯನ್ನು ಜೇಸಿಐ ಸುಳ್ಯ ಪಯಸ್ವಿನಿಯ ಘಟಕಾದ್ಯಕ್ಷರಾದ ಜೇಸಿ. ಗುರುಪ್ರಸಾದ್ ನಾಯಕ್ ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ಜೇಸಿ. ಪೂರ್ವಾಧ್ಯಕ್ಷ ಹೆಚ್. ಭೀಮರಾವ್ ವಾಸ್ಟರ್ ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಸುಳ್ಯ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮೀಳಾ ಭಾಗವಹಿಸಿ ವಿದ್ಯಾರ್ಥಿನಿಯರಿಗೆ ಹದಿ ಹರೆಯದವರ ಆರೋಗ್ಯ ಸಮಸ್ಯೆ, ಮುಟ್ಟಿನ ಸಮಸ್ಯೆಯ ಕುರಿತು ಮಾಹಿತಿ ನೀಡಿದರು.
ಸಪ್ತಾಹ ನಿರ್ದೇಶಕರಾದ ಸುರೇಶ್ ಕಾಮತ್ ವಂದಿಸಿದರು.
ಈ ಕಾರ್ಯಕ್ರಮ ದಲ್ಲಿ ನಿಲಯದ ಮೇಲ್ವಿಚಾರಕಿ ಶ್ರೀಮತಿ ದೀಪಿಕಾ, ಸಹಾಯಕಿ ಸತ್ಯಭಾಮಾ, ಅಡುಗೆ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!