ಹಳಗೇಟು: ಸಾಂಸ್ಕೃತಿಕ ಸಂಘದ ವತಿಯಿಂದ ನಡೆದ ಗಣೇಶೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ಹಾಗೂ ಸನ್ಮಾನ ಕಾರ್ಯಕ್ರಮ ಹಳೆಗೇಟು ಸಾಂಸ್ಕೃತಿಕ ಸಂಘದ ವೇದಿಕೆಯಲ್ಲಿ ಸೆ. 7 ರಂದು ನಡೆಯಿತು.
ಸಂಘದ ಅಧ್ಯಕ್ಷ ಬಿ. ಶ್ರೀನಿವಾಸ್ ರಾವ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಗರ ಪಂಚಾಯತ್ ಉಪಾಧ್ಯಕ್ಷ ಬುದ್ಧ ನಾಯ್ಕ ಹಾಗೂ ಸಂಗೀತ ಕಲಾವಿದ ವಿಜಯ್ ಕುಮಾರ್ ರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಬಾಲಗೋಪಾಲ ಸೇರ್ಕಜೆ, ಕಾರ್ಯದರ್ಶಿ ಶಿವನಾಥ್ ರಾವ್ ಹಳೆಗೇಟು,ಉಪ ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಕೋಶಾಧಿಕಾರಿ ಚಿತ್ತರಂಜನ್, ಕಾರ್ಯಕ್ರಮದ ಸಂಚಾಲಕರು ಜ್ಞಾನೇಶ್ವರ್ ಶೇಟ್,ದಿವಾಕರ ತಿಮ್ಪನ್, ರಾಮಕೃಷ್ಣ ಆಲಂಕಳ್ಯ,ಗೌತಮ್ ಭಟ್, ಸಚಿನ್ ರಾವ್,ಧನಂಜಯ ಪಂಡಿತ್,ಕಿಶನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.