ಕಾಯರ್ತೋಡಿ: ಪಡ್ಪು-ಕಾಯರ್ತೋಡಿ-ಸೂರ್ತಿಲದ ಶ್ರೀನಿಧಿ ಮಹಿಳಾ ಮಂಡಲ (ರಿ.) ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು 24ನೇ ವರ್ಷದ ಶ್ರೀ ಗಣೇಶೋತ್ಸವದ ಪ್ರಯುಕ್ತ ವಿವಿಧ ಸ್ಪರ್ಧಾ ಕಾರ್ಯಕ್ರಮ ಆದಿತ್ಯವಾರ ಶ್ರೀನಿಧಿ ಮಹಿಳಾ ಮಂಡಲ ಸಭಾಂಗಣದ ವಠಾರದಲ್ಲಿ ನಡೆಯಿತು. ಶ್ರುತಿ ಮಂಜುನಾಥ್ ಸ್ವಾಗತಿಸಿದರು . ಶ್ರೀನಿಧಿ ಮಹಿಳಾ ಮಂಡಲ (ರಿ.) ಇದರ ಅಧ್ಯಕ್ಷೆ ಲೀಲಾವತಿ ಮೇದಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಮಧುಮತಿ ಬೊಳ್ಳೂರು ಪದಗ್ರಹಣ ನೆರವೇರಿಸಿದರು. ಸೂರ್ತಿಲ ಶ್ರೀ ರಕ್ತೇಶ್ವರಿ ಸೇವಾ ಸಮಿತಿಯ ಅಧ್ಯಕ್ಷ ಶಶಿಧರ ಶೆಟ್ಟಿ ಪಡ್ಪು ಸ್ಪರ್ಧಾ ಕಾರ್ಯಕ್ರಮಗಳ ಉದ್ಘಾಟಸಿದರು . ಪ್ರಾರ್ಥನೆಯನ್ನು ರಶ್ಮಿ ಉಪೇಂದ್ರ ರತ್ನ ವೆಂಕಟೇಶ್ ಮಾಡಿ, ಕಾರ್ಯಕ್ರಮದ ನಿರ್ವಹಣೆಯನ್ನು ಹೇಮಾ ವೇಣುಗೋಪಾಲ್ ಮತ್ತು ಲತಾ ರಾಧಾಕೃಷ್ಣ ನಿರ್ವಹಿಸಿದರು. ಸೌಮ್ಯ .ಎನ್ ರವರು ಧನ್ಯವಾದಗೈದರು.
ಸಂಜೆ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ನಡೆಯಿತು. ಜ್ಯೋತಿ ಹರೀಶ್ ಸ್ವಾಗತಿಸಿದರು.ಕಾಯರ್ತೋಡಿ ಶ್ರೀನಿಧಿ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ತೀರ್ಥರಾಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಯತೋಡಿ ವಾರ್ಡಿನ ನಗರಪಂಚಾಯತ್ ಸುಳ್ಯ ಇದರ ಸದಸ್ಯೆ ಪ್ರವಿತ ಪ್ರಶಾಂತ್ ಆಚಾರ್ಯ, ಸುಳ್ಯ ನಗರ ಪಂಚಾಯತ್ ಸದಸ್ಯರು, ವಕೀಲರಾದ ವೆಂಕಪ್ಪ ಗೌಡ ಮಾತನಾಡಿ” ಶ್ರೀನಿಧಿ ಮಹಿಳಾ ಮಂಡಲ ಪ್ರಾರಂಭ ಆದಾಗಿನಿಂದ ಯಾವ ರೀತಿ ನಡೆದು ಬಂದಿದೆ ಮಾತುಗಳಿಂದ ಎಲ್ಲರ ಮನಸ್ಸು ಗೆದ್ದರು”. ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ಧ ಸಹಕಾರಿ ಸಂಘ ನಿ. ಪುತ್ತೂರು ಶಾಖೆಯ ಸೀನಿಯರ್ ಮ್ಯಾನೇಜರ್ ದೇವಿಪ್ರಸಾದ್ ಎ., ಇನ್ನರ್ ವೀಲ್ ಕ್ಲಬ್ ಸುಳ್ಯದ ಅಧ್ಯಕ್ಷೆ ಚಿಂತನ ಡಾ. ಸುಬ್ರಹ್ಮಣ್ಯ ಮಾಣಿಬೆಟ್ಟು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಹಿತನುಡಿಗಳನ್ನು ಆಡಿದರು. ವೇದಿಕೆಯಲ್ಲಿ ಗೌರವಾಧ್ಯಕ್ಷರಾದ ಲೀಲಾವತಿ ಮೇದಪ್ಪರು ಉಪಸ್ಥಿತರಿದ್ದರು. ಹೇಮ ವೇಣುಗೋಪಾಲ್ ಮತ್ತು ಲತಾ ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿ, ಖಜಾಂಚಿ ಪ್ರಿಯಾ ಬಳ್ಳಡ್ಕ ವಂದನಾರ್ಪಣೆಗೈದರು. ಕಾರ್ಯಕ್ರಮದಲ್ಲಿ ಶ್ರೀನಿಧಿ ಮಹಿಳಾ ಮಂಡಲದ ಪದಾಧಿಕಾರಿಗಳು ಸರ್ವ ಸದಸ್ಯರು ಹಾಗೂ ಊರ ಪರ ಊರ ಗಣ್ಯರು ,ಮಹನೀಯರು ನೆರೆದಿದ್ದರು.
- Thursday
- November 21st, 2024