Ad Widget

ಮಂಡೆಕೋಲು : ಮಕ್ಕಳಿಂದ ಸುದರ್ಶನ ವಿಜಯ ಭಾರ್ಗವ ವಿಜಯ ಯಕ್ಷಗಾನ ಕಾರ್ಯಕ್ರಮ

ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯದ ಮಕ್ಕಳಿಂದ ಸುದರ್ಶನ ವಿಜಯ ಭಾರ್ಗವ ವಿಜಯ ಯಕ್ಷಗಾನ ಕಾರ್ಯಕ್ರಮ ನಡೆಯಿತು. ಗ್ರಾಮದ ಮಕ್ಕಳು ಪುಟ್ಟಪುಟ್ಟ ಹೆಜ್ಜೆಯನ್ನು ಹಾಕಿ ಕುಣಿದು ತಮ್ಮದೇ ರೀತಿಯಲ್ಲಿ ಅವರವರ ಪಾತ್ರವನ್ನು ಅದ್ಭುತವಾಗಿ ಪ್ರಸಂಗಿಸಿ ಪ್ರೇಕ್ಷಕರ ಮನತಣಿಸಿದರು. ಗ್ರಾಮದ ಎಲ್ಲಾ ಮಕ್ಕಳ ಬಗ್ಗೆ ಸಾರ್ವಜನಿಕರು ಅಭಿಮಾನ ವ್ಯಕ್ತಪಡಿಸಿದರು. ಯೋಗೀಶ್ ಶರ್ಮಾ ರವರ ಭಾಗವತಿಕೆಯಲ್ಲಿ ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕರವರ ಮುತುವರ್ಜಿಯಲ್ಲಿ ಮಕ್ಕಳ ಪ್ರತಿಭೆ ವೇದಿಕೆಯಲ್ಲಿ ಅನಾವರಣ ಗೊಂಡಿತು. ಕಾರ್ಯಕ್ರಮದ ಕೊನೆಯಲ್ಲಿ ಯಕ್ಷಗಾನ ಗುರುಗಳನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಉದಯ ಆಚಾರ್, ಕಾರ್ಯದರ್ಶಿ ವಿನುತಾ ಪಾತಿಕಲ್ಲು, ಪ್ರಕಾಶ್ ಕಣೆಮರಡ್ಕ,ಗಣೇಶ್ ಮಾವಂಜಿ ಸುರೇಶ್ ಕಣೆಮರಡ್ಕ ಶಿವಣ್ಣ ಕನ್ಯಾನ, ಗುರುಪ್ರಸಾದ್ ರೈ,ರವಿ ಕಣೆಮರಡ್ಕ , ಸಂಧ್ಯಾ ಮಾವಂಜಿ, ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading