ಸುಬ್ರಹ್ಮಣ್ಯ: ಶ್ರೀ ಕ್ಷೇತ್ರದ ಉತ್ತಾರಾದಿ ಮಠದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ 54ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಶನಿವಾರ ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.ಕಾರ್ಯಕ್ರಮಗಳು ಕಲಾಸಕ್ತರ ವಿಶೇಷ ಮನ್ನಣೆಗೆ ಪಾತ್ರವಾಯಿತು.ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನ ಸಾಂಸ್ಕೃತಿಕ ತಂಡದಿಂದ ಪ್ರದರ್ಶಿಸಲ್ಪಟ್ಟ ಜನಪದೀಯ ನೃತ್ಯ ಸಿಂಚನ ಸರ್ವ ಕಲಾಭಿಮಾನಿಗಳ ಮನಸೂರೆಗೊಂಡಿತು.
ಸುಮಾರು 1.30 ಗಂಟೆಗಳ ಕಾಲ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಕೀರ್ತನೆಗಳಿಗೆ ನೃತ್ಯ ಪ್ರದರ್ಶಿಸಿದರು.ಅಲ್ಲದೆ ತುಳುನಾಡ ಜನಪದೀಯ ನೃತ್ಯಗಳು ಪ್ರದರ್ಶನಗೊಂಡಿತು.ಅಲ್ಲದೆ ವಿದ್ಯಾರ್ಥಿ ಪ್ರತಿಭೆಗಳಿಂದ ಕೊಳಲು ಮತ್ತು ಸ್ಯಾಕ್ಸೋಪೋನ್ ವಾದನ ನಡೆಯಿತು.ಮಹಾಭಾರತ, ನವಶಕ್ತಿ ವೈಭವ ನೃತ್ಯ ರೂಪಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಕಾರ್ಯಕ್ರಮದ ಸಂಯೋಜಕ ಪ್ರಾಚಾರ್ಯ ಸೋಮಶೇಖರ ನಾಯಕ್, ನಿರ್ದೇಶಕಿ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್ ಅವರನ್ನು ಸಮಿತಿಯ ಅಧ್ಯಕ್ಷ ದಿನೇಶ್ ಮೊಗ್ರ ಶಾಲು ಹೊದಿಸಿ ಶ್ರೀ ದೇವರ ಪ್ರಸಾದ ನೀಡಿ ಗೌರವಿಸಿದರು.ಈ ಸಂದರ್ಭ ಉಪನ್ಯಾಸಕ ಜಯಪ್ರಕಾಶ್ ಆರ್ ಉಪಸ್ಥಿತರಿದ್ದರು.
ಹರಿಕಥಾ ಸತ್ಸಂಗ:
ಆರಂಭದಲ್ಲಿ ಶ್ರೀ ವಿದ್ಯಾಸಾಗರ ಭಜನಾ ಮಂಡಳಿ ಸುಬ್ರಹ್ಮಣ್ಯ ಇವರಿಂದ ಭಜನೆ ನೆರವೇರಿತು ಬಳಿಕ ಕೀರ್ತನಾಗ್ರೇಸರ ವೈ.ಅನಂತ ಪದ್ಮನಾಭ ಭಟ್ ಕಾರ್ಕಳ ಇವರಿಂದ ಹರಿಕಥಾ ಸತ್ಸಂಗ ಧಾನಶೂರ ಕರ್ಣ ನೆರವೇರಿತು.ಇವರಿಗೆ ಹಿಮ್ಮೇಳದಲ್ಲಿ ರಮೇಶ್ ಹೆಬ್ಬಾರ್(ಹಾರ್ಮೊನಿಯಂ), ಪ್ರದೀಪ್ ಉಪಾಧ್ಯಾಯ(ತಬಲ), ಸಂತೋಷ್ ಸುಬ್ರಹ್ಮಣ್ಯ(ತಾಳ) ಸಹಕಾರ ನೀಡಿದರು.ಕಾರ್ಯಕ್ರಮದ ಕೊನ್ಯಲ್ಲಿ ಸಮಿತಿಯ ಅಧ್ಯಕ್ಷರು ಕಲಾವಿದರಿಗೆ ಮತ್ತು ಕಾರ್ಯಕ್ರಮದ ಸಂಯೋಜಕ ಸಮಿತಿಯ ಪೂರ್ವಾಧ್ಯಕ್ಷ ಲೋಕೇಶ್ ಎನ್.ಎಸ್ ಅವರಿಗೆ ಶಾಲು ಹೊದಿಸಿ ಶ್ರೀ ದೇವರ ಪ್ರಸಾದ ನೀಡಿ ಗೌರವಿಸಿದರು. ಬಳಿಕ ಕೆಎಸ್‌ಎಸ್ ಕಾಲೇಜಿನ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ನೆರವೇರಿತು.ವಿದ್ಯಾರ್ಥಿಗಳ ಪ್ರತಿಭೆಯು ಕಲಾಸಕ್ತರಿಗೆ ಮನೋರಂಜನೆ ನೀಡಿತು.ಕಾರ್ಯಕ್ರಮದ ಕೊನೆಯಲ್ಲಿ ಪ್ರಾಚಾರ್ಯ ಡಾ.ದಿನೇಶ್ ಪಿ.ಟಿ, ಸಂಯೋಜಕ ಡಾ.ವಿನ್ಯಾಸ್ ಹೊಸೋಳಿಕೆ ಅವರನ್ನು ಗೌರವಿಸಲಾಯಿತು.
ಇಂದು ಕೆ.ಎಸ್ ಸುರೇಖಾರಿಂದ ಸ್ವರ ಮಾಧರ‍್ಯ:
ಇಂದು(ಸೋಮವಾರ) ಕುಕ್ಕೆಯ ಕುವರಿ ಮತ್ತು ಚಲನಚಿತ್ರ ಹಿನ್ನೆಲೆ ಗಾಯಕಿ ಕೆ.ಎಸ್.ಸುರೇಖಾ ಅವರಿಂದ ಭಕ್ತಿ,ಭಾವ ಮತ್ತು ಜನಪದಗೀತೆಗಳ ಸಂಗಮ ಸ್ವರ ಮಾಧರ‍್ಯ ಪ್ರದರ್ಶಿತವಾಗಲಿದೆ. ಬಳಿಕ ದೇವಿಕಿರಣ್ ಕಲಾನಿಕೇತನ ಉಜಿರೆಯ ವಿದುಷಿ ಸ್ವಾತಿ ಜಯರಾಂ ಮತ್ತು ವಿದುಷಿ ಪ್ರಥ್ವಿ ಸತೀಶ್ ಅವರ ಶಿಷ್ಯರಿಂದ ನೃತ್ಯಾರ್ಪಣಂ ಜರುಗಲಿದೆ.ಮಂಗಳವಾರ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರಿಂದ ಕಲ್ಜಿಗದ ಮಾಯ್ಕಾರೆ ಪಂಜುರ್ಲಿ ನಾಟಕ ಪ್ರದರ್ಶಿತವಾಗಲಿದೆ.ಬುಧವಾರ ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಪಡೆದ ಯಶಸ್ವಿ ಭಕ್ತಿ ಪ್ರದಾನ ತುಳು ನಾಟಕ ಶಿವದೂತೆ ಗುಳಿಗೆ ನಾಟಕವನ್ನು ವಿಜಯ ಕುಮಾರ್ ಕೋಡಿಯಾಲಬೈಲು ನಿರ್ದೇಶನದಲ್ಲಿ ಕಲಾಸಂಗಮ ಕಲಾವಿದರ ಅಭಿನಯಿಸಲಿದ್ದಾರೆ.
- Tuesday
- December 3rd, 2024