Ad Widget

ಕುಮಾರಧಾರ ನದಿ ಬದಿ ಹಾಗೂ ಕುಲ್ಕುಂದ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯ

ಸುಬ್ರಹ್ಮಣ್ಯ, ಸೆ. 7 : ಸುಬ್ರಹ್ಮಣ್ಯ ರೋಟರಿ ಕ್ಲಬ್, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಹಾಗೂ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಜಂಟಿಯಾಗಿ ಇಂದು ರವಿವಾರ ಕುಮಾರಧಾರ ಹಾಗೂ ಕುಲ್ಕುಂದ ರಸ್ತೆ ಬದಿಗಳಲ್ಲಿ ಇದ್ದ ತ್ಯಾಜ್ಯ ವಸ್ತುಗಳು, ಕಸ-ಕಡ್ಡಿಗಳು, ಪ್ಲಾಸ್ಟಿಕ್ ಇತ್ಯಾದಿಗಳನ್ನು ಶೇಖರಿಸಿ ಸ್ವಚ್ಛಗೊಳಿಸಲಾಯಿತು.ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್, ಸೀನಿಯರ್...

ನಾಲ್ಕೂರು : ಅನಾರೋಗ್ಯದಿಂದ ಮಹಿಳೆ ಮೃತ್ಯು

ನಾಲ್ಕೂರು ಗ್ರಾಮದ ಬಳ್ಳಡ್ಕ ಪ್ರಶಾಂತ್ ಎಂಬವರ ಪತ್ನಿ ಸಂಧ್ಯಾ(29) ಅಲ್ಪ ಕಾಲದ ಅಸೌಖ್ಯದಿಂದ ಸೆ.7ರಂದು ನಿಧನರಾದರು. ಮೃತರು ಪತಿ, ಪುತ್ರ ಹಾಗೂ ಬಂಧುಗಳನ್ನು ಅಗಲಿದ್ದಾರೆ.
Ad Widget

ಕುಕ್ಕೆ: ಮನಸೂರೆಗೊಂಡ ಜನಪದೀಯ ಸಾಂಸ್ಕೃತಿಕ ಸಂಭ್ರಮ

ಸುಬ್ರಹ್ಮಣ್ಯ: ಶ್ರೀ ಕ್ಷೇತ್ರದ ಉತ್ತಾರಾದಿ ಮಠದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ 54ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಶನಿವಾರ ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.ಕಾರ್ಯಕ್ರಮಗಳು ಕಲಾಸಕ್ತರ ವಿಶೇಷ ಮನ್ನಣೆಗೆ ಪಾತ್ರವಾಯಿತು.ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನ ಸಾಂಸ್ಕೃತಿಕ ತಂಡದಿಂದ ಪ್ರದರ್ಶಿಸಲ್ಪಟ್ಟ ಜನಪದೀಯ ನೃತ್ಯ ಸಿಂಚನ ಸರ್ವ ಕಲಾಭಿಮಾನಿಗಳ ಮನಸೂರೆಗೊಂಡಿತು.ಸುಮಾರು 1.30 ಗಂಟೆಗಳ ಕಾಲ ನಡೆದ...

ಕುಕ್ಕೆ: 54 ನೇ ಸಾರ್ವಜನಿಕ ಗಣೇಶೋತ್ಸವ – ರಜತ ಮುಕುಟ ಸಮರ್ಪಣೆ

ಸುಬ್ರಹ್ಮಣ್ಯ:ಶ್ರೀ ಕ್ಷೇತ್ರದ ಉತ್ತಾರಾದಿ ಮಠದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ 54ನೇ ವರ್ಷದ ಗಣೇಶೋತ್ಸವವು ಭಕ್ತಿ ಸಡಗರದಿಂದ ಆರಂಭವಾಯಿತು. ಚೌತಿಯ ದಿನ ಶ್ರೀ ಮಹಾಗಣಪತಿಗೆ ರಜತ ಕಿರೀಟ ಮತ್ತು ಬೆಳ್ಳಿಯ ಪಾಶಾಂಕುಶ ಸಮರ್ಪಣೆ ನೆರವೇರಿತು.ಪುರೋಹಿತ ರಮಾನಂದ ಭಟ್ ವಿವಿಧ ವೈದಿಕ ವಿದಿ ವಿಧಾನಗಳೊಂದಿಗೆ ಶ್ರೀ ದೇವರಿಗೆ ಬೆಳ್ಳಿಯ ಆಭರಣಗಳನ್ನು ತೊಡಿಸಿದರು.1 ಕೆಜಿ 474...

ಕುಕ್ಕೆ: ಸೆ.12 ರಂದು ಶ್ರೀ ದೇವಳದಲ್ಲಿ ನವಾನ್ನ ಪ್ರಸಾದ, ಕದಿರು ವಿತರಣೆ

ಸುಬ್ರಹ್ಮಣ್ಯ: ನಾಗಾರಾಧನೆಯ ಪುಣ್ಯ ತಾಣ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೆ.12ರಂದು ಗುರುವಾರ ಹೊಸ್ತಾರೋಗಣೆ(ನವಾನ್ನ ಪ್ರಸಾದ) ನೆರವೇರಲಿದೆ. ಈ ನಿಮಿತ್ತ ಪ್ರಾತ:ಕಾಲ 5.15 ಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಭಿಷೇಕ, 7.30 ಕ್ಕೆ ತೆನೆ ತರುವುದು ಹಾಗೂ ಕದಿರು ಪೂಜೆ ನಡೆಯಲಿರುವುದು. ಬೆಳಗ್ಗೆ 8 ರ ಬಳಿಕ ದೇವಳದ ನೌಕರರಿಗೆ ಮತ್ತು ಸ್ಥಳೀಯ...

ಮಂಡೆಕೋಲು : ಮಕ್ಕಳಿಂದ ಸುದರ್ಶನ ವಿಜಯ ಭಾರ್ಗವ ವಿಜಯ ಯಕ್ಷಗಾನ ಕಾರ್ಯಕ್ರಮ

ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯದ ಮಕ್ಕಳಿಂದ ಸುದರ್ಶನ ವಿಜಯ ಭಾರ್ಗವ ವಿಜಯ ಯಕ್ಷಗಾನ ಕಾರ್ಯಕ್ರಮ ನಡೆಯಿತು. ಗ್ರಾಮದ ಮಕ್ಕಳು ಪುಟ್ಟಪುಟ್ಟ ಹೆಜ್ಜೆಯನ್ನು ಹಾಕಿ ಕುಣಿದು ತಮ್ಮದೇ ರೀತಿಯಲ್ಲಿ ಅವರವರ ಪಾತ್ರವನ್ನು ಅದ್ಭುತವಾಗಿ ಪ್ರಸಂಗಿಸಿ ಪ್ರೇಕ್ಷಕರ ಮನತಣಿಸಿದರು. ಗ್ರಾಮದ ಎಲ್ಲಾ ಮಕ್ಕಳ ಬಗ್ಗೆ ಸಾರ್ವಜನಿಕರು ಅಭಿಮಾನ ವ್ಯಕ್ತಪಡಿಸಿದರು. ಯೋಗೀಶ್ ಶರ್ಮಾ ರವರ ಭಾಗವತಿಕೆಯಲ್ಲಿ...

ರಾಷ್ಟ್ರ ಪತಿ ಪ್ರಶಸ್ತಿ ಪುರಸ್ಕೃತರ ಗೃಹರಕ್ಷಕ ಸಮಾಧೇಷ್ಟ ಡಾ. ಮುರಲೀಮೋಹನ್ ಚೂಂತಾರುರವರಿಗೆ ಬೆಳ್ಳಾರೆ ಗೃಹರಕ್ಷಕರಿಂದ ಸನ್ಮಾನ

ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರ ಗೃಹರಕ್ಷಕ ಸಮಾಧೇಷ್ಟ ಡಾ. ಮುರಲೀಮೋಹನ್ ಚೂಂತಾರುರವರಿಗೆ ಬೆಳ್ಳಾರೆ ಗೃಹರಕ್ಷಕರಿಂದ ಸನ್ಮಾನ ಸೆ. 8ರಂದು ಬೆಳ್ಳಾರೆಯ ಅಂಬೇಡ್ಕರ್ ಭವನದಲ್ಲಿ ನಡೆಯಿತು.ಸನ್ಮಾನ ನೆರವೇರಿಸಿ ಮಾತನಾಡಿದ ಬೆಳ್ಳಾರೆ ಪೊಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು ಹುಟ್ಟೂರಿನಲ್ಲಿ ಪಡೆದ ಸನ್ಮಾನ ರಾಷ್ಟ್ರ ಪ್ರಶಸ್ತಿ ಪಡೆದದ್ದಕೆ ಸಮಾನ ವೈದ್ಯಕೀಯ ವೃತ್ತಿಯ ಜೊತೆಜೊತೆಗೆ ನಿರಂತರ ಬರಹಗಳನ್ನು ಬರೆಯುತ್ತಾ ಸಮಾಜಕ್ಕೆ ಉತ್ತಮ...

ಹಿಂದೂ ಧರ್ಮದ ರಕ್ಷಣೆಗಾಗಿ ಮತ್ತೆ ಮೇಲು ಕೀಳು ಭೇದ ತೊರೆದು ಜಾಗೃತ ಸಮಾಜ ನಿರ್ಮಿಸಬೇಕಿದೆ – ಶಿವಪ್ರಸಾದ್ ಮಲೆಬೆಟ್ಟು

ಬ್ರಿಟಿಷರ ಒಡೆದು ಆಳುವ ನೀತಿಯ ವಿರುದ್ಧ ಹಿಂದೂ ಸಮಾಜ ಸಂಘಟಿತವಾಗಲೂ ಗಣೇಶೋತ್ಸವ ಆಚರಣೆಯನ್ನು ತಿಲಕ್ ರವರು ಆರಂಭಿಸಿದಂತೆ ಇಂದು ನಾವೆಲ್ಲರೂ ಒಗ್ಗಟ್ಟಾಗಿ ಹಿಂದೂ ಧರ್ಮದ ರಕ್ಷಣೆಗಾಗಿ ಜಾಗೃತ ಸಮಾಜ ನಿರ್ಮಿಸಬೇಕಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗದ ಸಾಮರಸ್ಯ ಸಹ ಸಂಯೋಜಕರಾದ ಶಿವಪ್ರಸಾದ್ ಮಲೆಬೆಟ್ಟು ಹೇಳಿದರು. ಅವರು ವಳಲಂಬೆಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ...
error: Content is protected !!