Ad Widget

ಚೌತಿ ಪ್ರಯುಕ್ತ ಜಿ.ಎಲ್.ಆಚಾರ್ಯ ಜ್ಯುವೆಲರ್ಸ್ ನಲ್ಲಿ ಫುಲ್ ರಶ್ – ಶುಭ ದಿನದಂದು ಚಿನ್ನ ಖರೀದಿಗೆ ಆಗಮಿಸಿದ ಗ್ರಾಹಕರು

ಸುಳ್ಯದ ಪ್ರಸಿದ್ಧ ಜಿ.ಎಲ್.ಆಚಾರ್ಯ ಜ್ಯುವೆಲರ್ಸ್ ನಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ಪುಲ್ ರಶ್ ಕಂಡು ಬಂದಿದೆ.ಶುಭ ದಿನದ ಪ್ರಯುಕ್ತದ ಖರೀದಿಗಾಗಿ ಬೆಳಗ್ಗಿನಿಂದಲೇ ಗ್ರಾಹಕರು ಚಿನ್ನ, ಬೆಳ್ಳಿ ಖರೀದಿಗಾಗಿ ಧಾವಿಸಿದರು. ಮಕ್ಕಳಿಗೆ ಕಿವಿ ಚುಚ್ಚುಲು ಶುಭ ದಿನವಾದುದರಿಂದಲೂ ಮಳಿಗೆ ಜನಸಂದಣಿ ಕಂಡು ಬಂತು. ಗ್ರಾಹಕರು ವೈವಿಧ್ಯಮಯ ಚಿನ್ನಾಭರಣಗಳನ್ನು ಖರೀದಿಸಿದರು.

ಹರಿಹರ ಪಲ್ಲತ್ತಡ್ಕ – 15 ನೇ ವರ್ಷದ ಗಣೇಶೋತ್ಸವ ಆಚರಣೆ

ಸಾರ್ವಜನಿಕ ಶ್ರೀ ಗಣೆಶೋತ್ಸವ ಸಮಿತಿ ಆಶ್ರಯದಲ್ಲಿ 15 ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.‌
Ad Widget

ಕುಕ್ಕುಜಡ್ಕ : 32 ನೇ ವರ್ಷದ ಗಣೇಶೋತ್ಸವು ಗಣಪತಿ ಪ್ರತಿಷ್ಠೆಯೊಂದಿಗೆ ಆರಂಭ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುಕ್ಕುಜಡ್ಕ ಇದರ ವತಿಯಿಂದ ನಡೆಯುವ 32 ನೇ ವರ್ಷದ ಗಣೇಶೋತ್ಸವಕ್ಕೆ ಚಾಲನೆ ನೀಡಲಾಯಿತು. ಸೆ.08 ರಂದು ಅದ್ದೂರಿ ಶೋಭಾಯಾತ್ರೆಯೊಂದಿಗೆ ಶ್ರೀ ಗಣೇಶನ ವಿಸರ್ಜನೆ ನಡೆಯಲಿದೆ.

ಕಲ್ಮಡ್ಕ : ನವೋದಯ ಸಂಘದ ಆಶ್ರಯದಲ್ಲಿ 46 ವರ್ಷದ ಗಣೇಶೋತ್ಸವ ಆಚರಣೆ

ಕಲ್ಮಡ್ಕ ನವೋದಯ ಸಂಘ ಆಶ್ರಯದಲ್ಲಿ 46 ವರ್ಷದ ಗಣೇಶೋತ್ಸವು ಗಣಪತಿ ಪ್ರತಿಷ್ಠೆಯೊಂದಿಗೆ ಆರಂಭಗೊಂಡಿತು. ವೇದಮೂರ್ತಿ ಶಿವರಂಜನ್ ವೈದಿಕ ಕಾರ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಊರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.ಇಂದು ಸಂಜೆ ಶೋಭಾಯಾತ್ರೆಯೊಂದಿಗೆ ಶ್ರೀ ಗಣೇಶನ ವಿಸರ್ಜನೆ ನಡೆಯಲಿದೆ.

ಪೇರಾಲು – ಮೈತಡ್ಕ ಗಣೇಶೋತ್ಸವ ಆಚರಣೆ

ಪಯಸ್ವಿನಿ ಕ್ರೀಡಾ ಮತ್ತು ಕಲಾ ಸಂಘ ಹಾಗೂ ಪಯಸ್ವಿನಿ ಯುವತಿ ಸಂಘ ಪೇರಾಲು ಮೈತಡ್ಕ ಇದರ ಆಶ್ರಯದಲ್ಲಿ 31 ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬೆಳಿಗ್ಗೆ ಗಣಪತಿ ಪ್ರತಿಷ್ಠೆ ನಡೆಯಿತು. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ಇಂದು ಸಂಜೆ ಶೋಭಾಯಾತ್ರೆ ನಡೆಯಲಿದೆ.

ವಳಲಂಬೆ : ಗಣಪತಿ ಪ್ರತಿಷ್ಠೆಯೊಂದಿಗೆ ಗಣೇಶೋತ್ಸವ ಆರಂಭ – ನಾಳೆ ಶೋಭಾಯಾತ್ರೆ

ವಳಲಂಬೆಯ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವು ಇಂದು ಬೆಳಿಗ್ಗೆ ಗಣಪತಿ ಮೂರ್ತಿಯ ಪ್ರತಿಷ್ಠಾಪನೆಯೊಂದಿಗೆ ಆರಂಭಗೊಂಡಿದೆ. ಎರಡು ದಿನಗಳ ಕಾಲ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ ಹಾಗೂ ವಿವಿಧ ಸ್ಪರ್ಧಾ ಕಾರ್ಯಕ್ರಮಗಳೊಂದಿಗೆ ನಡೆದು ಸೆ.08 ರಂದು ಭವ್ಯ ಶೊಇಭಾಯಾತ್ರೆಯಲ್ಲಿ ತೆರಳಿ ಶ್ರೀ ಗಣೇಶನ ವಿಸರ್ಜನೆ...

ಗಣೇಶೋತ್ಸವದ ಉದ್ದೇಶ ಇಡೇರಿಸಲು ಮುಂದಾದ ಸಮಿತಿ – ಪುಟಾಣಿ ಮಕ್ಕಳ ಪ್ರತಿಭೆ ಬೆಳಗಲು ಪ್ರಥಮ ಪ್ರಾಶಸ್ತ್ಯ – ಅಂಗನವಾಡಿ ಮಕ್ಕಳ ಜತೆ ಕುಣಿದ ಮಗು.

ವರದಿ:ಮಿಥುನ್ ಕರ್ಲಪ್ಪಾಡಿ ಸುಳ್ಯ. ಮಂಡೆಕೋಲು : ಗಣೇಶೋತ್ಸವದ ಉದ್ದೇಶ ಇಡೇರಿಸಲು ಮುಂದಾದ ಸಮಿತಿ - ಪುಟಾಣಿ ಮಕ್ಕಳ ಪ್ರತಿಭೆ ಬೆಳಗಲು ಪ್ರಥಮ ಪ್ರಾಶಸ್ತ್ಯ - ಅಂಗನವಾಡಿ ಮಕ್ಕಳ ಜತೆ ಕುಣಿದ ಮಗು ಕರ್ನಾಟಕ ಮತ್ತು ಕೇರಳ ರಾಜ್ಯದ ಗಡಿ ಗ್ರಾಮವಾಗಿದ್ದು ಈ ಹಿಂದೆ ಈ ಗ್ರಾಮವು ಕುಗ್ರಾಮ ಎಂದೆ ಹಣೆಪಟ್ಟಿ ಕಟ್ಟಿಕೊಂಡಿದ್ದು ಇದೀಗ ಅಭಿವೃದ್ಧಿಯ ಶಕೆಯನ್ನೆ...

ಕೆವಿಜಿ ಮೆಡಿಕಲ್ ಕಾಲೇಜಿಗೆ ನಿರಂತರ ವಿದ್ಯುತ್ ಪೂರೈಕೆಗಾಗಿ ನೂತನ 11ಕೆವಿ ಫೀಡರ್ ಉದ್ಘಾಟನೆ

ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಕ್ಯಾಂಪಸ್ ಗೆ ಯಾವುದೇ ಅಡೆತಡೆ ಇಲ್ಲದೆ ನಿರಂತರ ವಿದ್ಯುತ್ ಪೂರೈಕೆಗಾಗಿ ಸುಳ್ಯದ 33 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಭೂಗತ ಕೇಬಲ್ ಮುಖಾಂತರ ನೂತನ ಫೀಡರ್ ನಿರ್ಮಾಣ ಮಾಡಲಾಗಿದೆ. 33/11KV ಸುಳ್ಯದ ಮೆಸ್ಕಾಂ ವಿದ್ಯುತ್ ಕೇಂದ್ರದಿಂದ 11KV HT ಡೆಡಿಕೇಟೆಡ್‌ ಎಕ್ಸ್‌ ಪ್ರೆಸ್ ಫೀಡರ್ ಭೂಗತ ಕೇಬಲ್ ಮೂಲಕ ಕೆವಿಜಿ...
error: Content is protected !!