
ಶ್ರೀ ರಾಮ ಭಜನಾ ಸೇವಾ ಸಂಘ ಜಟ್ಟಿಪಳ್ಳ ಇದರ ವತಿಯಿಂದ ನಡೆದ 31ನೇ ವರ್ಷದ ಗಣೇಶೋತ್ಸವವು ಬೆಳಿಗ್ಗೆ ಮೂರ್ತಿ ಪ್ರತಿಷ್ಠೆ ಯೊಂದಿಗೆ ಆರಂಭಗೊಂಡು, ವಿವಿಧ ದಾರ್ಮಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು. ವಿಜೃಂಭಣೆಯ ಶೋಭಾಯಾತ್ರೆಯು ಸುಳ್ಯದ ಮುಖ್ಯರಸ್ತೆಯಲ್ಲಿ ಸಾಗಿತು. ನಾಸಿಕ್ ಬ್ಯಾಂಡ್ ಮತ್ತು ಮಕ್ಕಳ ತಂಡದ ಆಕರ್ಷಣೀಯ ಕುಣಿತ ಭಜನೆಯು ಗಮನ ಸೆಳೆಯಿತು.
