Ad Widget

ಎನ್ನೆಂಸಿ ನೂತನ ವಿದ್ಯಾರ್ಥಿ ಸಂಘದ ರಚನೆ – ನಾಯಕನಾಗಿ ಆದಿತ್ಯ ಡಿ.ಕೆ. ಉಪನಾಯಕಿಯಾಗಿ ಗಾನ ಬಿ.ಡಿ., ಕಾರ್ಯದರ್ಶಿಯಾಗಿ ಸೂರ್ಯದರ್ಶನ್ ಪಿ.ಎ., ಜತೆ ಕಾರ್ಯದರ್ಶಿಯಾಗಿ ಉಜಾನ ಕೆ

ಎನ್ನೆಂಸಿ, ನೆಹರು ಮೆಮೋರಿಯಲ್ ಕಾಲೇಜಿನ 2024-25ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು ಮಾರ್ಗದರ್ಶನದಲ್ಲಿ ಸರ್ವಾನುಮತದಿಂದ ಆರಿಸಲಾಯಿತು.ತರಗತಿ ಪ್ರತಿನಿಧಿಗಳು ಸೂಚಿಸಿದ ಅಂತಿಮ ಬಿ.ಕಾಂ ಪದವಿಯ ಆದಿತ್ಯ ಡಿ.ಕೆ ನಾಯಕನಾಗಿ, ಅಂತಿಮ ಬಿ.ಎ ಪದವಿಯ ಗಾನ ಬಿ.ಡಿ ಉಪನಾಯಕಿಯಾಗಿ, ಅಂತಿಮ ಬಿ.ಬಿ.ಎ ಪದವಿಯ ಸೂರ್ಯದರ್ಶನ್ ಪಿ.ಎ ಕಾರ್ಯದರ್ಶಿಯಾಗಿ ಮತ್ತು ಅಂತಿಮ ಬಿ.ಎಸ್ಸಿ ಪದವಿಯ ಉಜಾನ ಕೆ ಜೊತೆ ಕಾರ್ಯದರ್ಶಿಯಾಗಿ ಆಯ್ಕೆಯಾದರು.

. . . . . . . . .

. . . . . . .

ಕಾಲೇಜಿನ ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಅಂತಿಮ ಬಿ.ಎಸ್.ಡಬ್ಲು ದಕ್ಷಯ್ ಡಿ.ಎಸ್ ಮತ್ತು ಅಂತಿಮ ಬಿಬಿಎಯ ಅಂಬಿಕಾ.ಎ ಹಾಗೂ ಕ್ರೀಡಾ ಕಾರ್ಯದರ್ಶಿಗಳಾಗಿ ಅಂತಿಮ ಬಿಎ ಶಶಾಂಕ್.ಪಿ.ವಿ ಮತ್ತು ಅಂತಿಮ ಬಿ.ಕಾಂನ ತೃಪ್ತಿ.ಪಿ ಆಯ್ಕೆಗೊಂಡರು.ಕಾಲೇಜಿನ ಸಭಾಂಗಣದಲ್ಲಿ ನಡೆದ ಈ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ ಎಂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ, ನ್ಯಾಕ್ ಸಂಯೋಜಕಿ ಡಾ. ಮಮತಾ ಕೆ ಎಲ್ಲಾ ವಿಭಾಗಗಳ ಮುಖ್ಯಸ್ಥರು ಮತ್ತು ತರಗತಿ ಪ್ರತಿನಿಧಿಗಳು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading