Ad Widget

ಸುಳ್ಯ ಪೊಲೀಸ್‌ ಠಾಣೆಗೆ ನೂತನ ಉಪ ನಿರೀಕ್ಷಕರಾಗಿ ಸಂತೋಷ್ ಅಧಿಕಾರ ಸ್ವೀಕಾರ

ಸುಳ್ಯ ಪೊಲೀಸ್‌ ಠಾಣೆಗೆ ನೂತನ ಉಪನಿರೀಕ್ಷಕರಾಗಿ ಸಂತೋಷ್ ರವರು ಸೆ. 5ರಂದು ಅಧಿಕಾರ ಸ್ವೀಕರಿಸಿದರು. ಸುಳ್ಯ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಈರಯ್ಯ ದೂಂತುರು ರವರು ಬೆಳ್ಳಾರೆ ಠಾಣೆಗೆ ವರ್ಗಾವಣೆಗೊಂಡಿದ್ದು ಬೆಳ್ಳಾರೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂತೋಷ್ ರವರು ಸುಳ್ಯಕ್ಕೆ ವರ್ಗಾವಣೆಗೊಂಡಿದ್ದರು.

ಶಿಕ್ಷಣ ಸೊರಗದಿರಲಿ, ಶಿಕ್ಷಕ ಬಲಿಷ್ಠನಾಗಲಿ

ಕಲ್ಲು ಕಲ್ಲೆಂದರೆ ಕಲ್ಲಲ್ಲಿಹುದೇ ದೈವ|ಕಲ್ಲಲ್ಲಿ ಕಲೆಯ ನಿಲ್ಲಿಸಿದ ಗುರುವಿನಸೊಲ್ಲಲ್ಲೇ ದೈವ ಸರ್ವಜ್ಞ || ಮಗದೊಮ್ಮೆ ಶಿಕ್ಷಕರ ದಿನಾಚರಣೆ ಬಂದಿದೆ. ಮತ್ತದೇ ಹಾರ, ತುರಾಯಿ, ಬಿರುದು ಬಾವಲಿಗಳು ಒಂದಷ್ಟು ಶಿಕ್ಷಕರನ್ನು ವೇದಿಕೆಗೆ ಕರೆತಂದು ಹೊಗಳಿ ಹೊನ್ನಶೂಲಕ್ಕೆ ಏರಿಸಿ ಸನ್ಮಾನ ಮಾಡುವುದು ಸಂಪ್ರದಾಯವಾಗಿ ಬಿಟ್ಟಿದೆ. ಮರುದಿನದಿಂದ ಮತ್ತದೇ ರಾಗ, ಮತ್ತದೇ ಹಾಡು. ಶಿಕ್ಷಕರನ್ನು ಕೈ ಕಾಲು ಬಾಯಿ ಕಟ್ಟಿ...
Ad Widget

ಸುಳ್ಯ ಶಾಸಕರ ಆಪ್ತ ಸಹಾಯಕ ಅವಿನಾಶ್ ಕರ್ತವ್ಯದಿಂದ ಬಿಡುಗಡೆ.

ಸುಳ್ಯ : ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯರವರ ಸರಕಾರಿ ಆಪ್ತ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಈ ಹಿಂದೆ ಆಪ್ತ ಸಹಾಯಕರಾಗುವ ಮೊದಲು ಒಳಮೊಗ್ರ ಪಂಚಾಯತ್ ನಲ್ಲಿ ಅಭಿವೃದ್ಧಿ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ್ದು ಇದೀಗ ಅವರು ತಮ್ಮ ಜವಬ್ದಾರಿಯಿಂದ ಸ್ವಾ ಇಚ್ಚೇಯಿಂದ ಬಿಡುಗಡೆ ‌ ಹೊಂದಿದ್ದು ನೂತನ ಸರಕಾರಿ ಆಪ್ತ ಸಹಾಯಕರ ನೇಮಕವಾಗಬೇಕಿದೆ.

ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನದಂದು 35 ಸಾವಿರ ಜನರಿಂದ ಮಾನವ ಸರಪಳಿ

ಕನಕಮಜಲಿನಿಂದ ಸಂಪಾಜೆ ವರೆಗೆ ಏಕ ಕಾಲದಲ್ಲಿ ಮಾನವ ಸರಪಳಿ ರಚನೆ . ಸುಳ್ಯ: ದೇಶದ ನಾಗರೀಕರಿಗೆ ವಿಶೇಷವಾಗಿ ಕರ್ನಾಟಕದ ನಾಗರೀಕರಿಗೆ ಅರಿವು ಮೂಡಿಸುವ ಸಲುವಾಗಿ 2024-25ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ದಿನಾಂಕ: 15.09.2024ರಂದು ಮಾನವ ಸರಪಳಿ ರಚನೆಯ ಕುರಿತ ಪೂರ್ವಭಾವಿ ಸಭೆಯು...

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರಿಗೆ ಶಿಕ್ಷಕರ ದಿನಾಚರಣೆ ಸಲುವಾಗಿ ನುಡಿನಮನ

ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ:5-09-2024ರಂದು ಡಾ. ಸರ್ವಪಲ್ಲಿರಾಧಾಕೃಷ್ಣನ್‌ಅವರ ಹುಟ್ಟು ಹಬ್ಬದ ಪ್ರಯುಕ್ತ ಆಚರಿಸಲಾಗುವ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕಾಲೇಜಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್&ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್‌ಯು.ಜೆ.ಯವರುಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರಿಗೆ ನುಡಿನಮನ ಸಲ್ಲಿಸಿದರು ಹಾಗೂ ಶಿಕ್ಷಕರ ದಿನಾಚರಣೆಯ ಮಹತ್ವವನ್ನು ತಿಳಿಸಿ ಸಂಸ್ಥೆಯ ಎಲ್ಲಾ ಶಿಕ್ಷಕರಿಗೆ...

ಮೇನಾಲ : ವರಮಹಾಲಕ್ಷ್ಮೀ ಪೂಜಾ ಸಮಿತಿ ರಚನೆ ;ಅಧ್ಯಕ್ಷರಾಗಿ ಬೇಬಿ ಸುಕುಮಾರ್ – ಕಾರ್ಯದರ್ಶಿಯಾಗಿ ಅನಿತಾ ಸತೀಶ್ – ಖಜಾಂಜಿಯಾಗಿ ದಿವ್ಯಾಚೇತನ್

ವರಮಹಾಲಕ್ಷ್ಮೀ ಪೂಜಾ ಸಮಿತಿ ಮೇನಾಲ ಇದರ ನೂತನ ಸಮಿತಿ ರಚನೆ ಯಾಗಿದ್ದು ಅಧ್ಯಕ್ಷರಾಗಿ ಬೇಬಿ ಸುಕುಮಾರ್ ಕಲ್ಲಗುಡ್ಡೆ ಆಯ್ಕೆಯಾಗಿದ್ದಾರೆ. ಸಮಿತಿಯ ಕಾರ್ಯದರ್ಶಿಯಾಗಿ ಅನೀತಾ ಸತೀಶ್ ಪೂಜಾರಿ ಹಾಗೂ ಖಜಾಂಜಿಯಾಗಿ ದಿವ್ಯ ಚೇತನ್ ಆಮೇಮನೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ರಾಗಿ ನಳಿನಿ ಸತ್ಯನಾರಾಯಣ ಹಾಗು ಶೋಭಾ ರಾಮಚಂದ್ರ ಜತೆ ಕಾರ್ಯದರ್ಶಿಯಾಗಿ ಗೀತಾ ಸೀತಾರಾಮ ಬೀನಡ್ಕ ಹಾಗೂ ದೇವಕಿ ಗುರುವಪ್ಪ...

ಗೂನಡ್ಕ : ಖಾಸಗಿ ಬಸ್ ಹಾಗೂ ಓಮಿನಿ ಅಪಘಾತ – ಅಪಾಯದಿಂದ ಪಾರಾದ ಪ್ರಯಾಣಿಕರು

ಗೂನಡ್ಕದ ಶಾಲಾ ಬಳಿ ಖಾಸಗಿ ಬಸ್ ಹಾಗೂ ಓಮಿನಿ ಮುಖಾಮುಖಿ ಢಿಕ್ಕಿಯಾದ ಘಟನೆ ಕಳೆದ ರಾತ್ರಿ ನಡೆದಿದೆ. ಕಾಸರಗೋಡಿನಿಂದ ಬೆಂಗಳೂರಿಗೆ ಹೊರಟ ಕೊಹಿನೂರ್ ಖಾಸಗಿ ಬಸ್ ಗೆ ಓಮಿನಿ ಢಿಕ್ಕಿಯಾಗಿದೆ. ಓಮಿನಿಯಲ್ಲಿದ್ದ ಬೆಳ್ಳಾರೆಯ ಮೂವರಿಗೆ ಗಾಯಗಳಾಗಿವೆ. ಅಪಘಾತದ ಸ್ಥಳಕ್ಕೆ ಧಾವಿಸಿದ ಆಪತ್ಬಾಂಧವ ತಾಜುದ್ದೀನ್ ಟರ್ಲಿ ಗಾಯಾಳುಗಳನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಸುಳ್ಯ : ವಿಜೃಂಭಣೆಯ ಮೊಸರು ಕುಡಿಕೆ ಉತ್ಸವಮೊಸರು ಕುಡಿಕೆ ಉತ್ಸವದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಸಿಂಹ ಘರ್ಜನೆ

https://youtu.be/S0EXVgHO9cc?si=WlvVNp64ZuBY3our ಸುಳ್ಯ : ವಿಶ್ವಹಿಂದು ಪರಿಷದ್ ಮತ್ತು ಸುಳ್ಯ ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ ವಿಜೃಂಭಣೆಯ ಮೊಸರು ಕುಡಿಕೆ ಉತ್ಸವ ನಡೆಯಿತು. ಸುಳ್ಯದ ರಸ್ತೆಯುದ್ದಕ್ಕೂ ಶೋಭಾಯಾತ್ರೆ ನಡೆದು ಚೆನ್ನಕೇಶವ ದೇವಾಲಯದ ಬಳಿಯಲ್ಲಿ ಸಭಾ ಕಾರ್ಯಕ್ರಮದೊಂದಿಗೆ ಮೊಸರು ಕುಡಿಕೆ ಉತ್ಸವ ಸಂಪನ್ನಗೊಂಡಿತು. ಮೊಸರು ಕುಡಿಕೆ ಉತ್ಸವದಲ್ಲಿ ಹಿಂದು ಯುವಕರಿಂದ ಮಾನವ ಪಿರಮಿಡ್ ನಿರ್ಮಿಸಿ ಸುಳ್ಯದ 17...

ಕವನ : ಬದುಕಿನ ವ್ಯಥೆಗಳು – ಭರವಸೆಯ ಹೆಜ್ಜೆಗಳು…

ಬರೆಯಲಿ ನಾ ಹೇಗೆ ಬದುಕಿನ ಕಥೆಯ, ನನ್ನ ಬದುಕೇ ಒಂದು ಕಾದಂಬರಿಯಂತೆ ಕಣ್ಮುಂದೆ ನಿಂತಿರುವಾಗ…ವಿವರಿಸಲಿ ನಾ ಹೇಗೆ ಜೀವನದ ಪರೀಕ್ಷೆಗಳ, ಉತ್ತರಗಳೇ ಸಿಗದ ನೂರಾರು ಪ್ರಶ್ನೆಗಳು ನನ್ನ ಮನದೊಳಗೆ ಅತ್ತಿತ್ತ ಓಡಾಡುತ್ತಿರುವಾಗ…ತಿಳಿಸಲಿ ನಾ ಹೇಗೆ ಕನಸಿನ ಅನುಭವಗಳ, ನಾ ಕಂಡ ಕನಸುಗಳೇ ನನಸಾಗದಿರುವಾಗ…ಕಲಿಸಲಿ ನಾ ಹೇಗೆ ಕಷ್ಟ-ನೋವುಗಳಿಂದ ಹೊರಬರುವ ಪಾಠಗಳ, ನನ್ನ ಬದುಕಿನ ತುಂಬಾ ಕಷ್ಟ-ನೋವುಗಳೇ...
error: Content is protected !!