ಪ್ರತಿಯೊಬ್ಬ ಸಾಧಕನ ಜೀವನದ ಗುರಿ ಗುರು ಹಾಕಿಕೊಟ್ಟ ಮಾರ್ಗದ ಮೇಲೆಯೇ ನಡೆಯುತ್ತದೆ. ಗುರುವಿನ ಸಹಾಯವಿಲ್ಲದೆ ಗುರಿ ತಲುಪಲು ಸಾಧ್ಯವಿಲ್ಲ ಎಂದು ಬೆಳ್ಳಾರೆ ಅಜಪಿಲ ಶ್ರೀ ಸದಾಶಿವ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ಬಿ ಸುಬ್ರಹ್ಮಣ್ಯ ಜೋಶಿ ಹೇಳಿದರು. ಅವರು ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ವತಿಯಿಂದ ಅಜಪಿಲ ಶ್ರೀ ಸದಾಶಿವ ಚಾರಿಟೇಬಲ್ ಸೊಸೈಟಿ ಆಡಳಿತದಲ್ಲಿ ನಡೆಸಲ್ಪಡುತ್ತಿರುವ ಶ್ರೀ ಸದಾಶಿವ ಶಿಶು ಮಂದಿರದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಮತ್ತು ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕರ ದಿನಾಚರಣೆಯ ಸಂದರ್ಭ ಶಿಶು ಮಂದಿರದ ಮಾತಾಜಿ ತೇಜೇಶ್ವರಿ ಅವರನ್ನು ಜ್ಞಾನದೀಪ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಜ್ಞಾನದೀಪ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಪ್ರಾಸ್ತವಿಸಿ, ಸ್ವಾಗತಿಸಿದರು. ಶಿಕ್ಷಕಿ ಗೀತಾ ಬಾಲಚಂದ್ರ ವಂದಿಸಿದರು. ಉಪನ್ಯಾಸಕ ಯೋಗೀಶ್ ತಳೂರು ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ಶಿಕ್ಷಕಿಯರುಗಳಾದ ಅಂಜಲಿ ಮತ್ತು ಸುನೀತಾ ಸಹಕರಿಸಿದರು. ಜ್ಞಾನದೀಪದ ಮೊಂಟೆಸ್ಸರಿ ವಿದ್ಯಾರ್ಥಿ ಶಿಕ್ಷಕಿಯರು ಸೇರಿದಂತೆ ವೇದಪಾಠಶಾಲೆಯ ಮಕ್ಕಳು ಹಾಗೂ ಪೋಷಕರು ಉಪಸ್ಥಿತರಿದ್ದರು.
- Tuesday
- December 3rd, 2024