
ಗೂನಡ್ಕದ ಶಾಲಾ ಬಳಿ ಖಾಸಗಿ ಬಸ್ ಹಾಗೂ ಓಮಿನಿ ಮುಖಾಮುಖಿ ಢಿಕ್ಕಿಯಾದ ಘಟನೆ ಕಳೆದ ರಾತ್ರಿ ನಡೆದಿದೆ. ಕಾಸರಗೋಡಿನಿಂದ ಬೆಂಗಳೂರಿಗೆ ಹೊರಟ ಕೊಹಿನೂರ್ ಖಾಸಗಿ ಬಸ್ ಗೆ ಓಮಿನಿ ಢಿಕ್ಕಿಯಾಗಿದೆ. ಓಮಿನಿಯಲ್ಲಿದ್ದ ಬೆಳ್ಳಾರೆಯ ಮೂವರಿಗೆ ಗಾಯಗಳಾಗಿವೆ. ಅಪಘಾತದ ಸ್ಥಳಕ್ಕೆ ಧಾವಿಸಿದ ಆಪತ್ಬಾಂಧವ ತಾಜುದ್ದೀನ್ ಟರ್ಲಿ ಗಾಯಾಳುಗಳನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
