Ad Widget

ಕನ್ನಡ ಭಾಷೆ ಕಲಿಸುವುದರಲ್ಲಿ ನಾವು ಶೇ 50 ರಷ್ಟು ಹಿಂದಿದ್ದೇವೆ – ಬಿಳಿಮಲೆ

ಸುಳ್ಯಕ್ಕೆ ಆಗಮಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆಯವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಜತೆ ಪತ್ರಕರ್ತರ ಜತೆ ಸಂವಾದ ನಡೆಸಿದರು. ಸಂವಾದ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯ ಕುರಿತಾಗಿ ಮಾತನಾಡಿದರು. ಕನ್ನಡವನ್ನು ಕಲಿಸುವ ಮಾದರಿಯಲ್ಲಿ ನಾವು ಶೇ.50ರಷ್ಟು ಹಿಂದಿದ್ದೇವೆ ಎಂದು ಹೇಳಿದರು.‌ ಅಲ್ಲದೇ ರಾಜ್ಯ ಸರಕಾರಗಳು ಅಂದಿನಿಂದ ಇಂದಿನವರೆಗೆ ಕನ್ನಡದ ಅಭಿವೃದ್ಧಿಗೆ ಬೇಕಾಗಿ ಅನೇಕ ಆದೇಶಗಳನ್ನು ಹೊರಡಿಸಿದೆ ಎಂದರು. ಜನರಿಗೆ ಆಸಕ್ತಿ ಇಲ್ಲದಿದ್ದರೇ ಕನ್ನಡ ಅಭಿವೃದ್ಧಿ ಯಾವುದೇ ಆದೇಶಗಳಿಂದ ಸಾಧ್ಯವಿಲ್ಲ. ಕನ್ನಡ ಅನುಷ್ಠಾನಕ್ಕಾಗಿ ನಾಮಫಲಕಗಳ ಅಳವಡಿಕೆಯ ಕುರಿತಾಗಿ ಈಗಾಗಲೇ ಪರಿಶೀಲನೆ ನಡೆಸಲಾಗಿದ್ದು, ನಾಮಫಲಕದಲ್ಲಿ ಶೇ 60 ರಷ್ಟು ಕನ್ನಡ ಬಳಕೆ ಕಡ್ಡಾಯಗೊಳಿಸಿದ್ದಾರೆ.‌ ಇದನ್ನು ಅಧಿಕಾರಿಗಳು ಪಾಲನೆ ಮಾಡಬೇಕು ಎಂದು ಹೇಳಿದರು. ನಿಯಮ ಪಾಲನೆ ಮಾಡಿದವರಿಗೆ ಮಾತ್ರ ಲೈಸನ್ಸ್ ರಿನೀವಲ್ ಮಾಡುವಂತಾಗಬೇಕು. ಕೆಪಿಎಸ್ಸಿ ಪರೀಕ್ಷೆಯ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆಯಲ್ಲಿ ತಪ್ಪುಗಳು ಆಗಿರುವುದು ನಿಜ. ಅವುಗಳನ್ನು ಸರಿ ಪಡಿಸುವ ನಿಟ್ಟಿನಲ್ಲಿ ಪ್ರಾಧಿಕಾರವು ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ನೀಡಿದ್ದು, ಇದೀಗ ಮುಖ್ಯಮಂತ್ರಿಗಳು ಪುನರ್ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಆದೇಶ ಮಾಡಿದೆ ಎಂದು ಹೇಳಿದರು . ಅಂತರ್ ರಾಜ್ಯ ಗಡಿ ಪ್ರದೇಶಗಳಲ್ಲಿ ಭಾಷೆಯ ಕಲಿಕೆಗೆ ಶಿಕ್ಷಕರ ನೇಮಕ ಕುರಿತಾಗಿ ಸಮಸ್ಯೆಗಳು ಬಂದಾಗ ಅದು ದೇಶದಯಾಗುತ್ತದೆ. ಇಂತಹ ಸಂದರ್ಭ ಮುಖ್ಯಮಂತ್ರಿಗಳು ರಾಷ್ಟ್ರಪತಿಗಳ ಮಧ್ಯೆ ಪ್ರವೇಶಕ್ಕೆ ಆಗ್ರಹಿಸಿದಾಗ ಆರ್ಟಿಕಲ್ 350 ಬಿ ಪ್ರಕಾರ ಓರ್ವ ಭಾಷ ತಜ್ಙರನ್ನು ನೇಮಿಸಿ ವರದಿ ಪಡೆದು ಅದನ್ನು ರಾಜ್ಯಸರಕಾರಗಳಿಗೆ , ಲೋಕಸಭೆ ಮತ್ತು ರಾಜ್ಯಸಭೆಗಳಿಗೆ ಕಳುಹಿಸಿದಾಗ ಅವುಗಳನ್ನು ಇತ್ಯರ್ಥ ಪಡಿಸುವ ಕೆಲಸ ಸುಲಭ ಆಗುತ್ತದೆ. ಅದಕ್ಕಾಗಿ ಯಾವುದೇ ಕಾರಣಕ್ಕೂ ಹೊರಗೆ ನಿಂತುಕೊಂಡು ಬೊಬ್ಬೆ ಹೊಡೆಯುವ ಮೂಲಕ ಏನು ಸಾಧ್ಯವಿಲ್ಲಾ ಎಂದು ಹೇಳಿದರು . ಅಲ್ಲದೇ ಸರೋಜಿನಿ ಮಹಿಷಿ ವರದಿಯು ಸಲ್ಲಿಕೆ ಆಗಿದೆ ಹೊರತು ಅದು ಕಾನೂನು ಆಗಿ ಬಂದಿಲ್ಲ. ಅದು ಕೇವಲ ವರದಿಯಷ್ಟೆ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ, ಕಸಾಪ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು , ಪ್ರೆಸ್ ಕ್ಲಬ್ ಅಧ್ಯಕ್ಷರಾದ ಹರೀಶ್ ಬಂಟ್ವಾಳ , ಕಾರ್ಯದರ್ಶಿ ಜಯಪ್ರಕಾಶ್ ಕುಕ್ಕೇಟಿ , ಪೂವಪ್ಪ ಕಣಿಯೂರು ಉಪಸ್ಥಿತಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!