- Friday
- April 4th, 2025

ಅಜ್ಜಾವರ ಗ್ರಾಮದ ಕಾಂತಮಂಗಲ ಸೇತುವೆಯಿಂದ ನಿನ್ನೆ ನದಿಗೆ ಹಾರಿದ ಯುವಕನ ಮೃತದೇಹ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಅಡ್ಕ ನಿವಾಸಿ ಸುಮಾರು 23 ವರ್ಷದ ಸಿನಾನ್ ನಿನ್ನೆ ಹೊಳೆಗೆ ಹಾರಿದ್ದರು. ಇಂದು ಬೆಳಗ್ಗೆ ಉಪ್ಪಿನಂಗಡಿ ಮುಳುಗು ತಜ್ಞರ ತಂಡ ಮತ್ತು ಆರೋಗ್ಯ ರಕ್ಷಾ ಸಮಿತಿ ಸದಸ್ಯ ಅಚ್ಚು ಪ್ರಗತಿ ಸಹಿತ ಮತ್ತಿತರರ ಸಹಾಯದಿಂದ ಮೃತದೇಹವನ್ನು ಪತ್ತೆ ಮಾಡಿರುವುದಾಗಿ ತಿಳಿದುಬಂದಿದೆ.