ಮಳೆಹನಿಗಳು ನಾ ಮೇಲು-ತಾ ಮೇಲು ಎನ್ನುತ್ತಾ ಪುಟಿದು
ಒಂದಾಗಿ ಹರಿಯುವುದು ನೀ ಕಂಡಿಯಾ?
ಇನ್ನೇಕೆ ನಮ್ಮೊಳಗಿನ ಜಗಳ
ನಾವೆಲ್ಲರೂ ಒಂದೇ ಎಂದು ನೀ ಮರೆತೆಯಾ?
ಮಳೆಗೆ ಬಾಗಿದ ಗಿಡಗಳು ಖುಷಿಯಾಗಿ ನಿಲ್ಲುವುದು
ತಾ ಬಾಗಿದರೂ, ಬಾಯಾರಿದ ಬೇರು ತನಿಯಿತೆಂದು..
ಬಂದ ಕಷ್ಟವ ಎದುರಿಸಿ ನೀ ಧೈರ್ಯದಿ ನಿಲ್ಲು..
ಅನುಭವಗಳಿಂದ ಗಟ್ಟಿಯಾದೆನೆಂದು..
ಗಾಳಿಯಾಡಲು ಖುಷಿಯಾದ ಮರಗಳು
ಭೂಮಿಯ ಮುಟ್ಟುವ ಯತ್ನದಲ್ಲಿ..
ತಾನು ನಿಲ್ಲಲು ಭೂಮಿಯೇ ಕಾರಣವೆಂಬ
ಹೆಮ್ಮೆ ಅವುಗಳಲ್ಲಿ..
ಖುಷಿಯಾಡೊಡನೆ ಭೂಮಿಯ ಬಿಟ್ಟು
ಹಾರಲು ನೋಡುವ ನೀನು!
ಈ ಮಣ್ಣಿನಲ್ಲಿ ಬೆಳೆದ..
ನಿನ್ನ ಜೀವನವೇ ರತ್ನ ಎಂಬುದ ಮರೆತೆಯಾ?
ಮರೆಯದಿರು ನಿನ್ನ ಅಡಿಪಾಯವ
ನೆನಪಿನಲ್ಲಿಡು ಸೋಲಿನಲಿ ನೀ ಕಲಿತ ಪಾಠವ
ರಚನೆ:-ದೀಪ್ತಿ ಎಂ,ಎ.ಚೆಂಬು
ಎನ್ನೆಂಸಿ, ಸುಳ್ಯ