- Friday
- April 18th, 2025

(ವರದಿ : ಉಲ್ಲಾಸ್ ಕಜ್ಜೋಡಿ)ಕರಾವಳಿ ಜಿಲ್ಲೆಗಳಲ್ಲಿ ಅಡಿಕೆ, ತೆಂಗು ಕೃಷಿಯೊಂದಿಗೆ ಕಾಳುಮೆಣಸು ಬೆಳೆಯಲಾಗುತ್ತಿದ್ದು, ಕರಾವಳಿ ಭಾಗದ ಬಹುಮುಖ್ಯ ಬೆಳೆಗಳಲ್ಲಿ ಕಾಳುಮೆಣಸು ಕೂಡ ಒಂದಾಗಿದೆ. ಕಾಳುಮೆಣಸು ಬಳ್ಳಿಯಲ್ಲಿ ಹೂವು ಬೆಳೆದ ವಿಸ್ಮಯಕಾರಿ ಘಟನೆಯೊಂದು ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾಮದ ಕಜ್ಜೋಡಿ ಎಂಬಲ್ಲಿ ನಡೆದಿದ್ದು, ಕೃಷಿಕರಾದ ಕಿಶೋರ್ ಕುಮಾರ್ ಕಜ್ಜೋಡಿ ಎಂಬುವವರು ತಮ್ಮ ತೋಟದಲ್ಲಿ ನೆಡುವ ಸಲುವಾಗಿ...
ತೊಡಿಕಾನ ಗ್ರಾಮದ ಹರ್ಲಡ್ಕ ಎಂಬಲ್ಲಿ ವ್ಯಕ್ತಿಯೋರ್ವರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹರ್ಲಡ್ಕ ನಿವಾಸಿ ವೆಂಕಪ್ಪ ನಾಯ್ಕ್ ಎಂಬವರ ಪುತ್ರ ರುಕ್ಮಯ್ಯ ಇಂದು ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ೪೫ ವರ್ಷ ವಯಸ್ಸಾಗಿತ್ತು.ಮೃತರು ತಂದೆ, ತಾಯಿ, ಹಾಗೂ ಪತ್ನಿ ರಮ್ಯ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ.

ಸುಬ್ರಹ್ಮಣ್ಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ನಡೆದ ಅಟ್ಟಿಮಡಿಕೆ ಸ್ಪರ್ಧೆಯಲ್ಲಿ ರೆಂಜಾಳ ಶಾಸ್ತಾವು ಯುವಕ ಮಂಡಲ ತೃತೀಯ ಬಹುಮಾನ ಪಡೆದುಕೊಂಡಿದೆ.

ಆ 26: ವಿಕಾಸ ಸೌಧದಲ್ಲಿ ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಲಾಡ್ ರವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಮಂಡಳಿ ಹಾಗೂ ಖಾಸಗಿ ಕಂಪನಿ ಮತ್ತು ಕೈಗಾರಿಕೆಗಳ ಸಹಭಾಗಿತ್ವದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಮಕ್ಕಳಿಗೆ ವೃತ್ತಿ ಬುನಾದಿ ಹಾಗೂ ಉನ್ನತೀಕರಿಸಿದ ಕೌಶಲ್ಯ...

ದೇವ ಗೆಳೆಯರ ಬಳಗ, ಜ್ಯೋತಿಲಕ್ಷ್ಮಿ ಮಹಿಳಾ ಮಂಡಲಗಳ ಜಂಟಿ ಆಶ್ರಯದಲ್ಲಿ ಆ.26 ರಂದು ಶ್ರೀ ಕೃಷ್ಣಾ ಜನ್ಮಾಷ್ಠಮಿ ಪ್ರಯುಕ್ತ 34ನೇ ವರ್ಷದ ಮೊಸರು ಕುಡಿಕೆ ಮತ್ತು ಜಾರು ಕಂಬ,ಕೃಷ್ಣ ವೇಷ ಸ್ಪರ್ಧೆ ಹಾಗೂ ಇನ್ನಿತರ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಊರಿನ ಹಿರಿಯರಾದ ಚಿನ್ನಪ್ಪ ಗೌಡ ದೇವ ನೆರವೇರಿಸಿದರು. ಸಂಪಾಜೆ ಹೊರಠಾಣೆಯ ಸಹಾಯಕ ಉಪನಿರೀಕ್ಷಕರಾದ...

ಉತ್ತರ ಕನ್ನಡ ಜಿಲ್ಲೆಯ ಕುಮಟದಲ್ಲಿ ಪೋಲೀಸ್ ವೃತ್ತ ನಿರೀಕ್ಷಕರಾಗಿರುವ ತಿಮ್ಮಪ್ಪ ನಾಯ್ಕರನ್ನು ಸುಳ್ಯಕ್ಕೆ ವರ್ಗಾಯಿಸಿ ಸರಕಾರ ಆದೇಶ ಮಾಡಿದೆ.ಈ ಹಿಂದೆ ಸುಳ್ಯ ಇನ್ಸ್ ಪೆಕ್ಟರ್ ಆಗಿದ್ದ ಸತ್ಯನಾರಾಯಣ ಕೆ.ಯವರು ವರ್ಗಾವಣೆಗೊಂಡ ಬಳಿಕ ಸುಳ್ಯದ ಚಾರ್ಜ್ ಪುತ್ತೂರಿನವರಿಗೆ ಪ್ರಭಾರ ವಹಿಸಲಾಗಿತ್ತು. ಇದೀಗ ಸುಳ್ಯಕ್ಕೆ ತಿಮ್ಮಪ್ಪ ನಾಯ್ಕರನ್ನು ನೇಮಿಸಿ ಸರಕಾರ ವರ್ಗಾಯಿಸಿ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.

ಹೊಸಗದ್ದೆ ಮಿಲಿಟರಿ ಗ್ರೌಂಡ್ ನಲ್ಲಿ ಇಂದು ಶ್ರದ್ಧಾ ಭಕ್ತಿಯಿಂದ ಶ್ರೀಕೃಷ್ಣಾಷ್ಟಮಿ ಆಚರಿಸಲಾಯಿತು. ಸಾರ್ವಜನಿಕರಿಗೆ ಹಲವು ರೀತಿಯ ಆಟೋಟ ಸ್ಪರ್ಧೆ ಏರ್ಪಡಿಸಲಾಯಿತು, ಮದ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ ದ ಅಧ್ಯಕ್ಷ ಪುನೀತ್ ಕುಮಾರ್,ಉಪಾಧ್ಯಕ್ಷ ಕೌಶಿಕ್ , ಕಾರ್ಯದರ್ಶಿ, ಸಮಿತಿಯ ಪದಾಧಿಕಾರಿಗಳು,ಎಂ.ಜಿ ಬಾಯ್ಸ್ ತಂಡದವರು ಸದಸ್ಯರು ಪದಾಧಿಕಾರಿಗಳು, ಸ್ಥಳೀಯರು,ಸಾರ್ವಜನಿಕರು ಉಪಸ್ಥಿತರಿದ್ದರು.

ಸುಳ್ಯ: ಆಗಸ್ಟ್ 20 ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ, ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರತಿನಿಧಿಗಳ ಸಭೆ ಮತ್ತು ಸಮಿತಿಯ ಆಂತರಿಕ ಚುನಾವಣೆಯು ಸವಣೂರಿನ ಅಂಬೇಡ್ಕರ್ ಭವನದಲ್ಲಿ ನಡೆಯಿತು.ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಅಡ್ಡೂರು ರವರು ಪ್ರತಿನಿಧಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಸಮಿತಿ ಕಾರ್ಯದರ್ಶಿಯವರಾದ...

ಜಯನಗರ ಗಜಾನನ ಭಜನಾ ಮಂದಿರ ಇದರ ಆಶ್ರಯದಲ್ಲಿ ಅದ್ದೂರಿಯಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಸಲಾಯಿತು.ಸಾರ್ವಜನಿಕರಿಗೆ ವಿವಿದ ಆಟೋಟ ಸ್ಪರ್ಧೆ ನಡೆಸಲಾಯಿತು,ಮದ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಹಳೆಗೇಟುನಿಂದ ಜಯನಗರವರೆಗೂ ರಸ್ತೆಯ ವಿವಿದ ಕಡೆಗಳಲ್ಲಿ ಗೋಪುರ ಕುಡಿಕೆ, ಮೊಸರು ಕುಡಿಕೆ ನೆರವೇರಿಸಿದರು ಅಧ್ಯಕ್ಷರಾದ ವಿಶ್ವನಾಥ ನಾಯ್ಕ, ಕಾರ್ಯದರ್ಶಿ ಅನುರಾಧ ನಾಗರಾಜ್ ಮಹಿಳಾ ಸಮಿತಿ ಅಧ್ಯಕ್ಷ. ಹೇಮಾ...

ಯುವಶಕ್ತಿ ಮಿತ್ರ ಬಳಗ ದಾಸರಬೈಲು ಮರ್ಕಂಜ ದ ವತಿಯಿಂದ ದ್ವಿತೀಯ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಮತ್ತು ವಿವಿದ ಆಟೋಟ ಸ್ಪರ್ಧೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ರೆಂಜಾಳ ದೇವಸ್ಥಾನದ ಸಹ ಅರ್ಚಕ ರಾಜರಾಮ್ ಭಟ್ ಬಳ್ಳಕ್ಕಾನ ನೆರವೇರಿಸಿ ಮಾತನಾಡಿದರು. ಅಧ್ಯಕ್ಷತೆ ಯನ್ನು ಮರ್ಕಂಜ ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷರಾದ...

All posts loaded
No more posts