- Friday
- April 4th, 2025

ತೊಡಿಕಾನ ಗ್ರಾಮದ ಚಾಂಬಾಡು ತಿರುವಿನಲ್ಲಿ ಇಂದು ಮರ ಬಿದ್ದು ಎರಡು ವಿದ್ಯುತ್ ಕಂಬಗಳು ಧರೆಗುರುಳಿದೆ. ರಸ್ತೆ ಸಂಚಾರ ಬಂದ್ ಆಗಿದ್ದನ್ನು ಮೆಸ್ಕಾಂ ಸಿಬ್ಬಂದಿ ಶರತ್ ರವರು ತೆರವುಗೊಳಿಸಿದ್ದಾರೆ.

ಸುಬ್ರಹ್ಮಣ್ಯ ಜುಲೈ 01: ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ನಡೆದ ವಾರದ ಸಪ್ತಾಹಿಕ ಸಭೆಯಲ್ಲಿ ಅರಣ್ಯ ಸದ್ಬಳಕೆ, ಅರಣ್ಯದ ಉಪಯೋಗಗಳು, ಅರಣ್ಯ ಸಂರಕ್ಷಿಸುವ ಬಗ್ಗೆ ವಿವರವಾದ ಮಾಹಿತಿಗಳನ್ನು ಸುಬ್ರಹ್ಮಣ್ಯ ವಲಯ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಮನೋಜ್ ಅವರು ವಿವರವಾದ ಮಾಹಿತಿಗಳನ್ನು ನೀಡಿದರು. ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ಚಂದ್ರಶೇಖರ್ ನಾಯರ್ ಕಾರ್ಯಕ್ರಮದ ಅಧ್ಯಕ್ಷತೆ...

ಕಂದಡ್ಕದ ಉಬರಡ್ಕ ರಸ್ತೆಯಲ್ಲಿರುವ ಜಾನ್ ಡಿ'ಸೋಜ ಎಂಬವರು ಗೂಡಂಗಡಿಗೆ ಮರ ಬಿದ್ದು ಹಾನಿಗೊಂಡಿದೆ. ಇಂದು ಮಂಜಾಜೆ 7 ಗಂಟೆ ಸುಮಾರಿಗೆ ಮರ ಬಿದ್ದಿದೆ. ಮರ ಬೀಳುವಾಗ ಹೆಚ್.ಟಿ. ವಿದ್ಯುತ್ ಲೈನ್ ಗೂ ಹಾನಿಯಾಗಿದೆ. ಗೂಡಂಗಡಿ ತೆರೆಯದೇ ಇದ್ದುದರಿಂದ ಅಪಾಯದಿಂದ ಪಾರಾಗಿದ್ದಾರೆ.

ಮಡಪ್ಪಾಡಿ ಗ್ರಾಮ ಪಂಚಾಯತ್ 2023-24ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹಾಗೂ 15ನೇ ಹಣಕಾಸು ಯೋಜನೆಯ ಪ್ರಥಮ ಹಂತದ ಹಾಗೂ ದ್ವಿತೀಯ ಹಂತದ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆಯು ಆ.01ರಂದು ಮಡಪ್ಪಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಶ್ರೀಮತಿ ಸುಹನಾ (ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕರು ತೋಟಗಾರಿಕೆ ಇಲಾಖೆ ಸುಳ್ಯ)...

“ಕಲ್ಲು ಹೃದಯವನ್ನೂ ಕರಗಿಸುವಂತಿದೆ ಶಿರೂರು-ವಯನಾಡಿನ ಭೂಕುಸಿತದ ಭೀಕರತೆ”ಭೂಕುಸಿತದ ಘಟನೆಗಳನ್ನು ನೋಡಿದಾಗ ನೆನಪಾಗುತ್ತಿದೆ ಹರಿಹರ ಪಲ್ಲತ್ತಡ್ಕ ದಲ್ಲಿ 2 ವರ್ಷಗಳ ಹಿಂದೆ ನಡೆದ ಜಲಸ್ಪೋಟಮತ್ತೆಂದೂ ಎಲ್ಲಿಯೂ ಮರುಕಳಿಸದಿರಲಿ ಈ ರೀತಿಯ ಘಟನೆಗಳು...✍️ಉಲ್ಲಾಸ್ ಕಜ್ಜೋಡಿಹಿಂದೆಲ್ಲಾ ಮಳೆಗಾಲ ಬಂತೆಂದರೆ ಸಾಕು ಮನಸ್ಸಿನಲ್ಲಿ ಅದೇನೋ ಖುಷಿ-ಸಂತೋಷದ ವಾತಾವರಣವಿರುತ್ತಿತ್ತು. ವರ್ಷದ ಮೊದಲ ಮಳೆ ಭೂಮಿಗೆ ಬಿದ್ದಾಗ ನೆನೆಯುವ ಖುಷಿ ಇವೆಲ್ಲವೂ ಪ್ರತಿಯೊಬ್ಬರ ಬಾಲ್ಯದ...

ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ವತಿಯಿಂದ ನಾಳೆ (ಆ.2 ) ಸುಬ್ರಹ್ಮಣ್ಯದಲ್ಲಿ ನಡೆಯಲಿದ್ದ ಪತ್ರಿಕಾ ದಿನಾಚರಣೆ ಕಾರ್ಯಾಕ್ರಮ ಮುಂದೂಡಲಾಗಿದ್ದು, ಮಳೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ ಹಿನ್ನೆಲೆಯಲ್ಲಿ ಎಸ್.ಎಸ್.ಪಿ.ಯು ಕಾಲೇಜಿ ನಲ್ಲಿ ನಡೆಯಬೇಕಾಗಿದ್ದ ಪತ್ರಿಕಾ ದಿನಾಚರಣೆ, ತರಬೇತಿ, ಸಂವಾದ ಕಾರ್ಯಕ್ರಮ ಮುಂದೂಡಿಕೆ ಮಾಡಲಾಗಿದೆ ಎಂದು ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಪ್ರಕಟಣೆಯಲ್ಲಿ ತಿಳಿಸಿದೆ.

ಆಗಸ್ಟ್ 1 ರಂದು ಸಂಜೆ ಸುರಿದ ಭಾರೀ ಮಳೆಗೆ ದೊಡ್ಡತೋಟ ಮರ್ಕಂಜ ರಸ್ತೆಯ ಹೈದಂಗೂರು ಬಳಿ ಮರವೊಂದು ರಸ್ತೆಗೆ ಬಿದ್ದು ಕೆಲಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಶಾಸ್ತಾವು ಯುವಕ ಮಂಡಲ ರೆಂಜಾಳ ಇದರ ಸದಸ್ಯರು ಬಂದು ಮರ ತೆರವುಗೊಳಿಸಿ ರಸ್ತೆಸಂಚಾರ ಸುಗಮಗೊಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ನಾಳೆ ಆಗಸ್ಟ್ 02ರಂದು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ, ಪ್ರಾಥಮಿಕ & ಪ್ರೌಢಶಾಲೆ, ಪದವಿಪೂರ್ವ ಕಾಲೇಜು(12ನೇ ತರಗತಿಯವರೆಗೆ) ಗಳಿಗೆ ದ.ಕ ಜಿಲ್ಲಾಧಿಕಾರಿಗಳು ರಜೆ ಘೋಷಿಸಿ ಆದೇಶಿಸಿದ್ದಾರೆ.

ಕಳೆದ ವಾರ ಗಾಂಧಿನಗರದಲ್ಲಿ ಸ್ಕೂಟಿ ಮತ್ತು ರಿಕ್ಷಾ ಅಪಘಾತವಾದಾಗ ಸುಳ್ಯದ ಶಾಂತಿಭವನ ಹೋಟೆಲ್ ಮಾಲಕ ಪ್ರಕಾಶ್ ಅವರ ಉಂಗುರ ಕಾಣೆಯಾಗಿತ್ತು. ಈ ಸಂದರ್ಭದಲ್ಲಿ ಎಷ್ಟೇ ಹುಡುಕಿದರೂ ಸಿಕ್ಕಿರಲಿಲ್ಲ. ಇಂದು ಸುಳ್ಯದ ಗಾಂಧಿನಗರದಲ್ಲಿ ರಾಕೇಶ್ ಮದುವೆಗದ್ದೆಯವರಿಗೆ ಚಿನ್ನದ ಉಂಗುರ ಬಿದ್ದು ಸಿಕ್ಕಿದ್ದು ಅದನ್ನು ನ.ಪಂ.ಸದಸ್ಯ ಶರೀಫ್ ಕಂಠಿಯವರ ಮುಖಾಂತರ ಶಾಂತಿಭವನ ಹೋಟೆಲ್ ನ ಪ್ರಕಾಶ್ ಅವರಿಗೆ ಹಿಂತಿರುಗಿಸಿದ್ದಾರೆ.

All posts loaded
No more posts