Ad Widget

ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರ ಕಚೇರಿ ಉದ್ಘಾಟನೆ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾ ಅಧ್ಯಕ್ಷರಾದ ಭರತ್ ಮುಂಡೋಡಿ ರವರ ಕಚೇರಿ ಉದ್ಘಾಟನಾ ಕಾರ್ಯಕ್ರಮ ಇಂದು ನೆರವೇರಿತು. ಗುತ್ತಿಗಾರಿನ ಲೀಲಾವತಿ ಅಪ್ಪಯ್ಯ ಆಚಾರ್ಯ ರವರು ಕಛೇರಿ ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು,ಮಾಜಿ ಶಾಸಕರಾದ ಹರೀಶ್ ಕುಮಾರ್ ರವರು ದೀಪ ಪ್ರಜ್ವಲನೆ ಮಾಡಿದರು. ಈ ಸಂದರ್ಭದಲ್ಲಿ...

ಜಿಲ್ಲಾ ಗ್ಯಾರಂಟಿ ಪ್ರಾಧಿಕಾರ ಅಧ್ಯಕ್ಷ ಭರತ್ ಮುಂಡೋಡಿ ಕಚೇರಿ ಶುಭಾರಂಭ

ಮಂಗಳೂರು, ಆಗಸ್ಟ್  17: ದಕ್ಷಿಣ ಕನ್ನಡ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಭರತ್ ಮುಂಡೋಡಿ ಅವರ ಕಚೇರಿ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಆರಂಭಗೊಂಡಿತು.ಸುಳ್ಯ ಗುತ್ತಿಗಾರಿನ   ಯಶಸ್ವಿ ಕುಶಲಕರ್ಮಿ ಮಹಿಳೆ ಲೀಲಾವತಿ ಅವರು ಕಚೇರಿ ಉದ್ಘಾಟಿಸಿದರು. ಸರಕಾರದ ಮುಖ್ಯಸ್ಥರಾದ ಸಿದ್ಧರಾಮಯ್ಯ ಹಾಗೂ ಪಕ್ಷದ ಅಧ್ಯಕ್ಷರು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಯೋಜನೆ ಪ್ರಾರಂಭವಾಗಿದ್ದು...
Ad Widget

ಕುಸಿದು ಬಿದ್ದು ಆಸ್ಪತ್ರೆ ದಾಖಲಾಗಿದ್ದ  ಲಕ್ಷ್ಮಿ ಅಟೋ ಇಲೆಕ್ಟ್ರಿಕಲ್ ವರ್ಕ್ಸ್ ಮಾಲಕ ಸತ್ಯ ನಿಧನ

ಸುಳ್ಯದ ಹಳೆಗೇಟಿನಲ್ಲಿ ಕುಸಿದು ಬಿದ್ದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ   ವೆಹಿಕಲ್ ಎಲೆಕ್ಟ್ರಿಷಿಯನ್ ಸತ್ಯ  ನಿಧನರಾಗಿದ್ದಾರೆಂದು ತಿಳಿದು ಬಂದಿದೆ.ಎರಡು ದಿನಗಳ ಹಿಂದೆ ಅವರು ಕೆಲಸ ಮಾಡುತ್ತಿದ್ದ ವೇಳೆ ಹಠಾತ್ ಕುಸಿದು ಬಿದ್ದಿದ್ದರು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ, ಇವರು ಹಲವು ವರ್ಷಗಳಿಂದ ಸುಳ್ಯದಲ್ಲಿ ವಾಹನಗಳ ಇಲಕ್ಟ್ರೀಷಿಯನ್ ಆಗಿ...

ಅರೆಭಾಷೆ ಅಕಾಡೆಮಿ ಸದಸ್ಯರಾಗಿ ವಿನೋದ್ ಮೂಡಗದ್ದೆ ನೇಮಕ

ಕರ್ನಾಟಕ ರಾಜ್ಯ ಅರೆಭಾಷೆ ಅಕಾಡೆಮಿಯ ಸದಸ್ಯರಾಗಿ ವಿನೋದ್ ಮೂಡಗದ್ದೆ ಅವರು ನೇಮಕಗೊಂಡಿದ್ದಾರೆ.ಇವರು ಪತ್ರಕರ್ತರಾಗಿ, ರಂಗಭೂಮಿ ಕಲಾವಿದರಾಗಿ, ಅರೆಭಾಷೆ ನಾಟಕಗಳಲ್ಲಿ ಹಾಗೂ ಕವಿಗೋಷ್ಠಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.ಕೊಡಗು ಚಾನಲ್ ನ ಕಾರ್ಯಕ್ರಮ ನಿರ್ವಾಹಕರಾಗಿ, ಮಡಿಕೇರಿ ಆಕಾಶವಾಣಿ ಉದ್ಘೋಷಕರಾಗಿಯೂ ಕರ್ತವ್ಯ ನಿರ್ವಹಿಸುತ್ತಿರುವ ಇವರು ಕ್ರೀಡಾಪಟುವಾಗಿ, ಅತ್ಯುತ್ತಮ ಕಾರ್ಯಕ್ರಮ ನಿರೂಪಕರಾಗಿ ಗುರುತಿಸಿಕೊಂಡಿದ್ದಾರೆ. (ವರದಿ : ಉಲ್ಲಾಸ್ ಕಜ್ಜೋಡಿ)

ಎಡಮಂಗಲ : ಮಾಲೆಂಗಿರಿ ಸೇತುವೆ ಬದಿ ಕುಸಿತ

ಎಡಮಂಗಲ ಸಂಪರ್ಕ ರಸ್ತೆ ಮಾಲೆಂಗಿರಿ ಸೇತುವೆ ಬದಿ ಮಣ್ಣು ಕುಸಿದು ಬಿದ್ದಿದ್ದು ಅಪಾಯದಲ್ಲಿದೆ.ಇನ್ನಷ್ಟು ಮಣ್ಣು ಕುಸಿದ್ದು ಬಿದ್ದರೆ ಎಡಮಂಗಲ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ. ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತಿದ್ದು ಸೇತುವೆ ಹಾನಿಯಾದರೆ ಸಮಸ್ಯೆ ಎದುರಾಗಲಿದ್ದು ಜನಪ್ರತಿನಿಧಿಗಳು,ಅಧಿಕಾರಿಗಳು ಗಮನಹರಿಸಬೇಕಾಗಿ ಸಾರ್ವಜನಿಕರು ತಿಳಿಸಿದ್ದಾರೆ.

ಗುರುಂಪುವಿನಲ್ಲಿ ಬೈಕ್ ಜೀಪ್ ಅಪಘಾತದಲ್ಲಿ ಗಂಭೀರ ಗಾಯಗೊಂಡ ಬೈಕ್ ಸವಾರ ಚಿಕಿತ್ಸೆ ಫಲಿಸದೇ ಮೃತ್ಯು

ಆಲೆಟ್ಟಿ ರಸ್ತೆಯ ಮೂಲಕ ಸುಳ್ಯಕ್ಕೆ ಬರುತ್ತಿದ್ದ ಜೀಪಿಗೆ ಗುರುಂಪು ಎಂಬಲ್ಲಿ ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡ ಬೈಕ್ ಸವಾರ ಶಶಿಧರನ್ ಆಲೆಟ್ಟಿ ಯವರು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ‌ ಆ.10 ರಂದು ಬೆಳಗ್ಗೆಆಲೆಟ್ಟಿಯಿಂದ ಸುಳ್ಯಕ್ಕೆ ತಮ್ಮ ಬೈಕಿನಲ್ಲಿ ಸುಳ್ಯಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದ್ದು ಗಾಯಗೊಂಡ ಅವರನ್ನು ಸುಳ್ಯದ ಕೆ.ವಿ.ಜಿ.ಆಸ್ಪತ್ರೆಗೆ ದಾಖಲಿಸಿ...

ವಿಪತ್ತು ನಿರ್ವಹಣೆ , ಗ್ರಾಮದ ಆಗುಹೋಗುಗಳಿಗೆ ಕ್ಷಣ ಮಾತ್ರದಲ್ಲಿ ಸ್ಪಂದಿಸುವ ಮಾದರಿ ಪಂಚಾಯತ್

ಗಾಂಧಿ ಗ್ರಾಮ ಪುರಸ್ಕೃತ ಪಂಚಾಯತ್ ಕುರಿತ ಮಾಹಿತಿ ಇಲ್ಲಿದೆ ಸಂಪಾಜೆ : ಸುಳ್ಯ ತಾಲೂಕಿನ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲುಗುಂಡಿ ಪೇಟೆಯ ಪಕ್ಕದಲ್ಲಿಯೇ ಹೊಳೆಯು ಹರಿಯುತ್ತಿದ್ದು ಕೆಲ ವರ್ಷಗಳ ಹಿಂದೆ ಹೊಳೆಯ ನೀರು ನುಗ್ಗಿ ಭಾರಿ ಅವಾಂತರವೇ ಸೃಷ್ಟಿಯಾಗಿತ್ತು. ಇದಾದ ಬಳಿಕ ಸಂಘಟನ ಚತುರ ಈ ಹಿಂದಿನ ಸಾಲಿನ ಅಧ್ಯಕ್ಷರಾಗಿದ್ದ ಜಿ ಕೆ ಹಮೀದ್...

ಭಾರತ್ ಸ್ಕೌಟ್ ಮತ್ತು ಗೈಡ್ಸ್ ಗೀತಗಾಯನ ಸ್ಪರ್ಧೆ – ಬಾಳಿಲ ಪ್ರಾಥಮಿಕ ಶಾಲಾ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪಂಜ ಸ್ಥಳೀಯ ಸಂಸ್ಥೆ ಆಯೋಜಿಸಿದ ಗೀತಗಾಯನ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಬಾಳಿಲದ ಸ್ಕೌಟ್ ವಿದ್ಯಾರ್ಥಿಗಳು ಪ್ರಥಮ ಸ್ಥಾನ, ಗೈಡ್ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ತಂಡವನ್ನು ಶಾಲಾ ಸ್ಕೌಟ್ಸ್ ಗೈಡ್ಸ್ ಶಿಕ್ಷಕರು ತರಬೇತುಗೊಳಿಸಿದ್ದರು ಎಂದು ಶಾಲಾ ಪ್ರಕಟಣೆ ತಿಳಿಸಿದೆ.

ಕೊಲ್ಲಮೊಗ್ರು ಪೋಸ್ಟ್ ಮೆನ್ ಅಬ್ದುಲ್ ಜಬ್ಬಾರ್ ನಿಧನ

ಕೊಲ್ಲಮೊಗ್ರದಲ್ಲಿ ಅಂಚೆ ಪಾಲಕರಾಗಿರುವ ಜಾಲ್ಸೂರು ಮೂಲದ ಅಬ್ದುಲ್ ಜಬ್ಬಾರ್ ಅವರು ಆ.12 ರಂದು ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.ಚಾಳೆಪ್ಪಾಡಿ ಎಂಬಲ್ಲಿ ರೂಮ್ ನಲ್ಲಿ ವಾಸವಿರುವ ಅವರು ಅಲ್ಲೇ ನಿಧನರಾಗಿದ್ದು, ಅವರಿಗೆ 55 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ, ಮಕ್ಕಳು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

ದೆಹಲಿಯಲ್ಲಿ ನಡೆಯುವ 78 ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಲು ಸುಳ್ಯದ ಅಚ್ರಪ್ಪಾಡಿ ಶಾಲೆಯ ಮಾಜಿ ಶಿಕ್ಷಕಿ ಶ್ವೇತಾ ವೇಣುಗೋಪಾಲ್ ಸೇರಿ ಜಿಲ್ಲೆಯ ಮೂವರಿಗೆ ಅವಕಾಶ

ಹೊಸದಿಲ್ಲಿಯಲ್ಲಿ ನಡೆಯುವ 78ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯದ ನಾಲ್ಕು ಪಿಎಂಶ್ರೀ ಶಾಲೆಗಳ ನಾಲ್ವರು ವಿದ್ಯಾರ್ಥಿಗಳು ಹಾಗೂ ನಾಲ್ವರು ಶಿಕ್ಷಕರು ವಿಶೇಷ ಅವಕಾಶ ಪಡೆದುಕೊಂಡಿದ್ದು, ಇದರಲ್ಲಿ ಮೈಸೂರು ಶೈಕ್ಷಣಿಕ ವಿಭಾಗದಿಂದ ದ.ಕ. ಜಿಲ್ಲೆಯ ಓರ್ವ ವಿದ್ಯಾರ್ಥಿನಿ, ಶಿಕ್ಷಕಿ ಹಾಗೂ  ಗ್ರಾಮ ಪಂಚಾಯತ್ ಅಧ್ಯಕ್ಷೆಯೊಬ್ಬರಿಗೆ ಭಾಗವಹಿಸಲು ವಿಶೇಷ ಆಮಂತ್ರಣ ದೊರಕಿದೆ.ದ.ಕ. ಜಿಲ್ಲೆಯ ಮಂಗಳೂರಿನ ಶಕ್ತಿನಗರ ನಾಲ್ಯಪದವು ಕುವೆಂಪು...
Loading posts...

All posts loaded

No more posts

error: Content is protected !!