- Sunday
- April 20th, 2025

ಸಧೃಡವಾಗಿ ಸುಭದ್ರವಾಗಿ ಇರುವ ಸಿದ್ದರಾಮಯ್ಯ ಸರ್ಕಾರವನ್ನು ತೆಗೆದು ಹಾಕಲು ಬಿಜೆಪಿ ಪಕ್ಷದವರು ರಾಜಭವನವನ್ನು ಬಳಸಿಕೊಂಡಿದ್ದಾರೆ ಎಂದು ಕೆಪಿಸಿಸಿ ಸಂಯೋಜಕ ಪ್ರದೀಪ್ ಕುಮಾರ್ ರೈ ಪಾಂಬಾರು ರಾಜ್ಯಪಾಲರ ನಡೆಯನ್ನು ಟೀಕಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಮೇಲೆ ಪ್ರಾಸಿಕ್ಯೂಶನ್ ನಡೆಸಲು ರಾಜ್ಯಪಾಲರು ಅನುಮತಿ ನೀಡಿದ್ದು ಸದರಿ ಅನುಮತಿ ಬಿಜೆಪಿ ಷಡ್ಯಂತ್ರ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದ್ದು ಇದು ಖಂಡನೀಯ ಎಂದು...

ಹಳೆಗೇಟಿನಿಂದ ಜಯನಗರ ರಸ್ತೆಯ ತಿರುವಿನಲ್ಲಿದ್ದ ದೊಡ್ಡ ಹೊಂಡವನ್ನು ಇಂದು ಸ್ಥಳೀಯ ಯುವಕರು ಮುಚ್ಚುವ ಮೂಲಕ ಮಾದರಿ ಕೆಲಸ ಮಾಡಿದ್ದಾರೆ. ಜಯಪ್ರಕಾಶ್ ,ಸಚಿನ್ ಚೇತನ್ ಆಟೋ ಚಾಲಕ ಗೋಪಾಲ, ಲಕ್ಷ್ಮೀ ಸ್ಟೋರ್ ಮಾಲೀಕ ಲೋಕೇಶ್ ಇತರರು ಸೇರಿ ಕಾಂಕ್ರೀಟ್ ಹಾಕಿ ಹೊಂಡವನ್ನು ಮುಚ್ಚಿ ವಾಹನ ಸಂಚಾರ ಸುಗಮ ವಾಗಿಸಲೂ ಸಹಕರಿಸಿದ್ದಾರೆ.

ಗುತ್ತಿಗಾರು ಸಮೀಪದ ಮೊಗ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 5 ವರ್ಷಗಳು ಪ್ರಭಾರ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದ ಶ್ರೀ ಪ್ರಮೋದ್ ಕೆ ಬಿ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ಘೋಷಿಸಿದೆ. ಇವರು ಮೈಸೂರಿನ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಸಾಹಿತ್ಯದಲ್ಲಿ ಎಂ. ಎ ಪದವಿಯನ್ನು ಡಿಸ್ಟಿಂಕ್ಷನ್ ನಲ್ಲಿ...

ಸುಳ್ಯ: ನಗರದ ಪ್ರತಿನಿತ್ಯ ಸಾವಿರಾರು ಜನರು ಸಂಚರಿಸುವ ಕೋರ್ಟ್ ಹಿಂಭಾಗ ರಸ್ತೆಯ ಬಳಿಯಲ್ಲಿ ಟ್ರಾನ್ಸ್ಫಮರ್ ಪೆಟ್ಟಿಗೆಯ ಮೇಲೆ ಮರದ ಗೆಲ್ಲು ಸಂಪೂರ್ಣ ಭಾಗಿ ನಿಂತಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಈ ತಂತಿಗಳ ಪಕ್ಕದಲ್ಲೇ ಸರಕಾರಿ ವಿದ್ಯಾರ್ಥಿನಿ ನಿಲಯವು ಇದ್ದು ನೂರಾರು ವಿದ್ಯಾರ್ಥಿನಿಯರು ವಾಸ್ತವ್ಯವಾಗಿದ್ದು ವಿದ್ಯುತ್ ತಂತಿ ಕಡಿತಗೊಂಡಲ್ಲಿ ಆಗುವ ಅಪಾಯವನ್ನು ಅರಿತು ಮೆಸ್ಕಾಂ ಇಲಾಖೆಯು ಮರದ...

ಸುಳ್ಯ ಲ್ಯಾಂಪ್ಸ್ ಸಹಕಾರ ಸಂಘಕ್ಕೆ ಸತತ 3ನೇ ಬಾರಿಗೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಪ್ರೋತ್ಸಾಹಕ ಪ್ರಶಸ್ತಿ ಲಭಿಸಿದೆ. ಆ. 14ರಂದು ನಡೆದ ಬ್ಯಾಂಕಿನ ಮಹಾ ಸಭೆಯಲ್ಲಿ ಪ್ರೊತ್ಸಾಹಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸೀತಾನಂದ ಎಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಡಿ ಹಾಗೂ ನಿರ್ದೇಶಕ ಮಾಧವ ಸುಬ್ರಮಣ್ಯ ಉಪಸ್ಥಿತರಿದ್ದರು.

ಹರಿಹರ ಪಲ್ಲತ್ತಡ್ಕ ಶ್ರೀ ಹರಿಹರೇಶ್ವರ ದೇವಸ್ಥಾನದ ಕಲಾಮಂದಿರದಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನ ಹಾಗೂ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಹರಿಹರ ಪಲ್ಲತ್ತಡ್ಕ ಇವುಗಳ ಸಹಭಾಗಿತ್ವದಲ್ಲಿ ಆ.16 ರಂದು ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ ನಡೆಯಿತು.ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್ ರವರು ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.ಈ ಸಂದರ್ಭದಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ...

ಸುಬ್ರಹ್ಮಣ್ಯ ಆಗಸ್ಟ್ 16 : ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಗುರುವಾರ ನಡೆದ ಸಪ್ತಾಹಿಕ ಸಭೆಯಲ್ಲಿ ಜೇನು ಕೃಷಿಯ ಬಗ್ಗೆ ಮಾಹಿತಿ ಶಿಬಿರವನ್ನು ಏರ್ಪಡಿಸಲಾಯಿತು.ಜೇನು ಕೃಷಿಯ ಬಗ್ಗೆ ಅಪಾರ ಮಾಹಿತಿ ಉಳ್ಳವರು ಹಾಗೂ ಜೇನು ಕೃಷಿ ತಜ್ಞರೂ ಆದ ಬಾಳುಗೋಡಿನ ಅಜಯ್ ಪೊಯ್ಯೆಮಜಲು ಅವರು ಜೇನು ಕೃಷಿಯ ಬಗ್ಗೆ ಅದರ ಮಹತ್ವ, ಕೃಷಿ ಮಾಡುವ ವಿಧಾನ,...

“ನಮ್ಮ ಪರಿಸರದಲ್ಲಿ ನಾವು ಪ್ರಕೃತಿ ಜೊತೆಗೆ ಬೆಳೆದರೂ ಪ್ರಕೃತಿಯ ಮಹತ್ವ ನಮಗೆ ತಿಳಿದಿಲ್ಲ. ಇಂದು ಪ್ರಕೃತಿ ವಿಕೋಪ ಆದ ಮೇಲೆ ನಮಗೆ ಪ್ರಕೃತಿಯ ಮಹತ್ವ ತಿಳಿಯುತ್ತದೆ. ನಮ್ಮ ಬೆಳವಣಿಗೆಯ ಪರಿಣಾಮದಿಂದಾಗಿ ಇಂದು ಪ್ರಕೃತಿ ವಿಕೋಪ ಉಂಟಾಗಿದೆ” ಎಂದು ಸುಬ್ರಹ್ಮಣ್ಯ ವಲಯ ಅರಣ್ಯ ಅಧಿಕಾರಿಗಳಾದ ವಿಮಲ್ ಬಾಬು ಅವರು ಹೇಳಿದರು. ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಹಾಗೂ...

ಮಂಡೆಕೋಲು ಗ್ರಾಮದ ಮೇಲ್ಮನೆ ಸುಬ್ಬಣ್ಣ ಗೌಡರು ಆ.16ರಂದು ನಿಧನರಾದರು. ಅವರಿಗೆ ಸುಮಾರು 94 ವರ್ಷ ವಯಸ್ಸಾಗಿತ್ತು.ನಾಟಿವೈದ್ಯರಾಗಿದ್ದ ಇವರು, ದೈವ ಪರಿಚಾರಕರಾಗಿಯೂ ಕೆಲಸ ನಿರ್ವಹಿಸುತ್ತಿದ್ದರು. ಮೃತರು ಪತ್ನಿ, ಮಕ್ಕಳು ಹಾಗೂ ಕುಟುಂಬ ಸ್ಥರನ್ನು ಅಗಲಿದ್ದಾರೆ.

ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ಆಟಿ 2024ಕಾರ್ಯಕ್ರಮ ಅದ್ದೂರಿಯಿಂದ ನಡೆಯಿತು. ಕಾರ್ಯಕ್ರಮವನ್ನು ಆಡಳಿತ ಮಂಡಳಿಯ ಸಲಹೆಗಾರರಾದ ಪ್ರೊ ಕೆ.ವಿ.ದಾಮೋದರ ಗೌಡ ಅವರು ದೀಪ ಬೆಳಗಿಸಿ,ಉದ್ಘಾಟನೆ ನೆರವೇರಿಸಿದರು .ಹಾಗೂ ಅತಿಥಿಯಾಗಿ ಆಗಮಿಸಿದ್ದ ಆಡಳಿತ ಮಂಡಳಿಯ ಉಪಾಧ್ಯಕ್ಷೆ ಶೋಭಾ ಚಿದಾನಂದ ಅವರು ಹಿಂಗಾರ ಅರಳಿಸಿದರು. ಅತಿಥಿಗಳು ಚೆನ್ನಮಣೆ ಆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು., ಆಡಳಿತ ಮಂಡಳಿಯ...

All posts loaded
No more posts