Ad Widget

ವಳಲಂಬೆ : ಚಲನಚಿತ್ರ ನಟಿ ಹೇಮಾ ಗೌಡರಿಂದ ಅಂಗನವಾಡಿ ಮಕ್ಕಳಿಗೆ ಬ್ಯಾಗ್ ಕೊಡುಗೆ

ವಳಲಂಬೆ ಅಂಗನವಾಡಿ ಕೇಂದ್ರದ ಪುಟಾಣಿಗಳಿಗೆ ಬ್ಯಾಗ್,  ಅಂಗನವಾಡಿ ಸಿಬ್ಬಂದಿಗಳಿಗೆ ಸಾರಿ ಹಾಗೂ ಸಿಹಿತಿಂಡಿಯನ್ನು ಅಂಗನವಾಡಿ ಕೇಂದ್ರದ ಹಳೆ ವಿದ್ಯಾರ್ಥಿನಿಯಾದ ಚಲನಚಿತ್ರ ನಟಿ ಹೇಮಾ ಗೌಡ ಮೊಟ್ನೂರು ಮತ್ತು ಮನೆಯವರು ನೀಡಿ ಸಹಕರಿಸಿದ್ದಾರೆ.ಈ ಸಂದರ್ಭದಲ್ಲಿ ಬಾಲ ವಿಕಾಸ ಸಮಿತಿಯ ಅಧ್ಯಕ್ಷರಾದ ಸ್ವಾತಿ ಹೂವನ, ಅಂಗನವಾಡಿ ಮಕ್ಕಳು, ಕಾರ್ಯಕರ್ತೆ, ಸಹಾಯಕಿ ಹಾಗೂ ಪೋಷಕರು ಉಪಸ್ಥಿತರಿದ್ದರು. 

ಸ.ಹಿ.ಪ್ರಾ.ಶಾಲೆ ಬಂಗ್ಲೆಗುಡ್ಡೆ, ಕೊಲ್ಲಮೊಗ್ರುವಿನಲ್ಲಿ ಹಳೆ ವಿದ್ಯಾರ್ಥಿ ಸಂಘ ರಚನೆ

ಸ.ಹಿ.ಪ್ರಾ.ಶಾಲೆ ಬಂಗ್ಲೆಗುಡ್ಡೆ, ಕೊಲ್ಲಮೊಗ್ರುವಿನಲ್ಲಿ ಹಳೆ ವಿದ್ಯಾರ್ಥಿ ಸಂಘ ರಚನೆ ಮಾಡಲಾಗಿದೆ. ಅಧ್ಯಕ್ಷರಾಗಿ ಚಂದ್ರಶೇಖರ ಕೋನಡ್ಕ, ಕಾರ್ಯದರ್ಶಿಯಾಗಿ  ಮೋಹನ ಅಂಬೆಕಲ್ಲು,  ಮೋನಪ್ಪ ಕೊಳಗೆ ಖಜಾಂಜಿಯಾಗಿ ಆಯ್ಕೆಗೊಂಡಿದ್ದು, ನಿರ್ದೇಶಕರಾಗಿ ಲಕ್ಷ್ಮೀಶ ಶಿರೂರು, ಅಭಿಲಾಷ್ ಗೌಡ ಮಣಿಯಾನ, ಸವಿನ್ ಚಾಂತಾಳ, ಸಚಿನ್ ನಿಡುಬೆ, ನಮಿತಾ ಗೋಳ್ಯಾಡಿ, ಅರ್ಪಿತಾ ಮಿತ್ತೋಡಿ, ಗೌರವ ಸಲಹೆಗಾರರಾಗಿ, ಬಾಲಸುಬ್ರಹ್ಮಣ್ಯ ಎನ್.ಜಿ,ಕಮಲ.ಎ ಮುಖ್ಯೋಪಾಧ್ಯಾಯರು ಆಯ್ಕೆಗೊಂಡರು.
Ad Widget

ಕಾಂಗ್ರೇಸ್ ಪಕ್ಷದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದೆ – ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಶನ್ ಅನುಮತಿ ನೀಡಿದ ನಂತರ ಕಾಂಗ್ರೇಸ್ ಪಕ್ಷದ ನಾಯಕರು ರಾಜ್ಯದಲ್ಲಿ ಅರಾಜಕತೆ ಯನ್ನು ಸೃಷ್ಟಿಸಲು ಯತ್ನಿಸುತ್ತಿದೆಯೆಂದು ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿ'ಸೋಜಾ ಬೇಜವಾಬ್ದಾರಿ ಯುತವಾಗಿ ನಡೆದುಕೊಂಡಿದ್ದಾರೆ. ರಾಜ್ಯಪಾಲರ ಬಗ್ಗೆ ಹಗುರವಾಗಿ ಮಾತನಾಡಿ...

ಐವರ್ನಾಡು ಸ.ಹಿ.ಪ್ರಾ.ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ – ಪ್ರತಿಭಾ ಪುರಸ್ಕಾರ

ಐವರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆ.15 ರಂದು ನಡೆಯಿತು. ದಿವಂಗತ ಐತಪ್ಪ ಗೌಡ ನಿವೃತ್ತ ಅಧ್ಯಾಪಕರು ಮತ್ತು ಶ್ರೀಮತಿ ದಿವಂಗತ ಶಿವಮ್ಮನವರು ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ದತ್ತಿ ನಿಧಿ ರೂಪಾಯಿ 240, ದಿವಂಗತ ಐತಪ್ಪ ಗೌಡ ನಿವೃತ್ತ ಅಧ್ಯಾಪಕರು ತಮ್ಮ ಮಾತಾಪಿತರಾದ ಪಲ್ಲತಡ್ಕ...

ಸುಳ್ಯ ಮುಖ್ಯಪೇಟೆ ಟ್ರಾಫಿಕ್ ಜಾಮ್, ಇನ್ನಾದರೂ ಸ್ಥಾಪಿಸಲಿ ಸಂಚಾರಿ ಠಾಣೆ !

ಸುಳ್ಯ: ಸುಳ್ಯ ನಗರದಲ್ಲಿ ನಗರ ಪಂಚಾಯತ್ ನೇತೃತ್ವದಲ್ಲಿ ವಾಹನ ಚಾಲಕರಿಗೆ ಕಟ್ಟುನಿಟ್ಟಿನ ನಿಯಮ ಪಾಲಿಸುವಂತೆ ಸುಳ್ಯ ಪೋಲೀಸ್ ಠಾಣೆಗೆ ಮನವಿ ಈ ಹಿಂದೆ ಮಾಡಲಾಗಿತ್ತು. ಅದರಂತೆ ಪೋಲೀಸ್ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಪ್ರತಿ ನಿತ್ಯ ಟ್ರಾಫಿಕ್ ಸಮಸ್ಯೆ ಉದ್ಭವಿಸಿದ್ದು ಇನ್ನಾದರು ಸರಕಾರ ಸುಳ್ಯಕ್ಕೆ ಸಂಚಾರಿ ನಿಯಂತ್ರಣ ಪೋಲೀಸ್ ಠಾಣೆಯನ್ನು ಸ್ಥಾಪಿಸಿ ವಾಹನ ಸವಾರರಿಗೆ ಆಗುತ್ತಿರುವ ಸಮಸ್ಯೆಗಳನ್ನು...

ಜಾಗೃತಿ ಸುಳ್ಯ ತಂಡದಿಂದ ಐವರ್ನಾಡು ಪ್ರೌಢಶಾಲೆಯಲ್ಲಿ ಸೈಬರ್ ಕ್ರೈಮ್ ಬಗ್ಗೆ ಮಾಹಿತಿ ಕಾರ್ಯಗಾರ

ಜಾಗೃತಿ ಸುಳ್ಯ ವಿದ್ಯಾರ್ಥಿ ತಂಡದ ವತಿಯಿಂದ ಸರ್ಕಾರಿ ಪ್ರೌಢಶಾಲೆ ಐವರ್ನಾಡು ಇಲ್ಲಿ ಆ.18ರಂದು ವಿವಿಧ ರೀತಿಯ ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸಲು ಮಾಹಿತಿ ಕಾರ್ಯಾಗಾರ ನಡೆಯಿತು. ಶ್ರಾವಣ್ ಶೇಡಿಕಜೆ, ಅಮರ್ ಕೆ.ಪಿ ಮತ್ತು ಭುವನಶ್ರೀ ಸೈಬರ್ ಅಪರಾಧಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಜಾಗೃತಿ ತಂಡದ ಸದಸ್ಯೆ ಗಗನ ಎಂ ಆರ್ ತಂಡದ...

ಮರ  ಉಳಿಸಿ  ಬೆಳೆಸಿ ಪೋಷಿಸಿ…. ಡಾ.ಚೂಂತಾರು

ಭಾರಿ ಗಾಳಿ ಮಳೆಗೆ ಧಾರಾಶಾಹಿಯಾದ ಮರವನ್ನು ಮತ್ತೆ ಅದೇ ಸ್ಥಾನದಲ್ಲಿ ಮರುಸ್ಥಾಪಿಸಲು ಮುತುವರ್ಜಿ ತೋರಿಸುವ ಮೂಲಕ ದ.ಕ.ಜಿಲ್ಲಾ ಹೋಂಗಾರ್ಡ್ಸ್‌ ಕಮಾಂಡೆಂಟ್‌ ಅವರು ಮಾದರಿ ವೃಕ್ಷಪ್ರೇಮ ತೋರಿಸಿಕೊಟ್ಟಿದ್ದಾರೆ. ನಗರದ ಬಾಳೆಬೈಲ್‌ನ ಗ್ರೀನ್‌ ಎಕರೇಸ್‌ ಲೇಔಟ್‌ನಲ್ಲಿ ಕಳೆದ 20 ದಿನಗಳ ಹಿಂದೆ ಭಾರಿ ಗಾಳಿ ಮಳೆಗೆ ಮಂದಾರ ಹಾಗೂ ದೇವದಾರು ಮರ ಧಾರಾಶಾಹಿಯಾಗಿತ್ತು. ರಸ್ತೆಬದಿ ಬಿದ್ದ ಮರವನ್ನು ಸಾಮಾನ್ಯವಾಗಿ...

ರಕ್ಷಾ ಬಂಧನ…ಸಹೋದರತ್ವದ ಬಂಧನ

ರಕ್ಷಣೆಯ ಭಾರವನ್ನು ಪ್ರೀತಿ ಕಾಳಜಿಯಿಂದ ಹೆಗಲು ನೀಡಲು ತಯಾರಾಗಿರುವಂತಹ ಮನಸ್ಸು ಉಳ್ಳವರು ಯಾರೇ ಆಗಲಿ ಆ ಬಂಧನವೇ ಸಹೋದರತ್ವ.ಮಾಧವನ ಕೈಗೆ ಗಾಯವಾಗಿ ರಕ್ತ ಸೋರುತ್ತಿರಲು ದ್ರೌಪದಿಯು ತನ್ನ ಬಟ್ಟೆಯ ಹರಿದು ಮಾಧವನ ಕೈಗೆ ಕಟ್ಟುತ್ತಾಳೆ. ರಕ್ತ ಹರಿಯುವುದು ನಿಂತ ಮೇಲೆ ಮಾಧವನು ವಚನ ನೀಡಿದ ನಿನ್ನನ್ನು ಕಾಪಾಡುವ ಹೊಣೆ ನನ್ನದೆಂದು. ಅಂದಿನಿಂದ ಅದೇ ಬಟ್ಟೆ ಸಹೋದರತ್ವದ...

ಕೇನ್ಯ : ವ್ಯಕ್ತಿಯ ಮೃತದೇಹ ಶಾಲಾ ಬಾವಿಯಲ್ಲಿ ಪತ್ತೆ

ಕೇನ್ಯ ಶಾಲೆಯ ಬಳಿಯ ನಿವಾಸಿ ಬಾಬು ಪೂಜಾರಿ ಎಂಬವರು ಇಂದು‌ ಮುಂಜಾನೆ 3.30ರ ವೇಳೆಗೆ ಮನೆಯಿಂದ ನಾಪತ್ತೆಯಾಗಿದ್ದರೆನ್ನಲಾಗಿದೆ. ಮನೆಯವರು ಹುಡುಕಾಟ ನಡೆಸಿದಾಗ ಕೇನ್ಯ ಸ.ಕಿ.ಪ್ರಾ. ಶಾಲಾ ಬಾವಿ ಕಟ್ಟೆಯಲ್ಲಿ ಬಾಬು ಪೂಜಾರಿಯವರ ಲುಂಗಿ, ಟಾರ್ಚ್ ಮತ್ತು ಚಪ್ಪಲಿ ಪತ್ತೆಯಾಯಿತು. ಬಾವಿ ಹಾರಿರಬಹುದೆಂಬ ಶಂಕೆಯಿಂದ ಸ್ಥಳೀಯರು ಬಾವಿಗೆ ದೋಟಿ ಇಳಿಸಿ ಶೋಧ ನಡೆಸಿದಾಗ ಶವ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ರಕ್ಷಾ ಬಂಧನ… ಸಹೋದರತ್ವದ ಬಂಧನ

ರಕ್ಷಣೆಯ ಭಾರವನ್ನು ಪ್ರೀತಿ ಕಾಳಜಿಯಿಂದ ಹೆಗಲು ನೀಡಲು ತಯಾರಾಗಿರುವಂತಹ ಮನಸ್ಸು ಉಳ್ಳವರು ಯಾರೇ ಆಗಲಿ ಆ ಬಂಧನವೇ ಸಹೋದರತ್ವ.ಮಾಧವನ ಕೈಗೆ ಗಾಯವಾಗಿ ರಕ್ತ ಸೋರುತ್ತಿರಲು ದ್ರೌಪದಿಯು ತನ್ನ ಬಟ್ಟೆಯ ಹರಿದು ಮಾಧವನ ಕೈಗೆ ಕಟ್ಟುತ್ತಾಳೆ. ರಕ್ತ ಹರಿಯುವುದು ನಿಂತ ಮೇಲೆ ಮಾಧವನು ವಚನ ನೀಡಿದ ನಿನ್ನನ್ನು ಕಾಪಾಡುವ ಹೊಣೆ ನನ್ನದೆಂದು. ಅಂದಿನಿಂದ ಅದೇ ಬಟ್ಟೆ ಸಹೋದರತ್ವದ...
Loading posts...

All posts loaded

No more posts

error: Content is protected !!