Ad Widget

ಸುಳ್ಯ ಘಟಕದ ನಿವೃತ್ತ ಗೃಹರಕ್ಷಕ ಪ್ರಭಾಕರ ಪೈ ಅವರಿಗೆ ಸನ್ಮಾನ


ಜಿಲ್ಲಾ ಗೃಹರಕ್ಷಕ ದಳದ ಕಛೇರಿ ಮೇರಿಹಿಲ್ ಮಂಗಳೂರು ಇಲ್ಲಿ ದಿನಾಂಕ: 30-08-2024 ರಂದು ಇತ್ತೀಚಿಗೆ ಇಲಾಖೆಯಿಂದ ನಿವೃತ್ತರಾದ ಸುಳ್ಯ ಘಟಕದ ಗೃಹರಕ್ಷಕ ಶ್ರೀ ಪ್ರಭಾಕರ ಪೈ ಇವರಿಗೆ ಬೀಳ್ಕೊಡುಗೆ ಮತ್ತು ಸನ್ಮಾನ ಸಮಾರಂಭ ಜರಗಿತು. 1964 ಜನವರಿ 23 ರಂದು ಜನಿಸಿದ ಶ್ರೀ ಪ್ರಭಾಕರ ಪೈ, 2007 ರ ಅಕ್ಟೋಬರ್ 01 ರಂದು ಗೃಹರಕ್ಷಕ ಇಲಾಖೆಗೆ ಸೇರಿಕೊಂಡು ಸತತವಾಗಿ ಸುಮಾರು 17 ವರ್ಷಗಳ ಕಾಲ ಗೃಹರಕ್ಷಕ ಇಲಾಖೆಯಲ್ಲಿ ನಿಷ್ಕಾಮ ಸೇವೆ ಸಲ್ಲಿಸಿ ದಿನಾಂಕ 23-01-2024 ರಂದು ಸೇವಾ ನಿವೃತ್ತಿ ಪಡೆದರು.

. . . . . . . . .


ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಠರಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ಸುಳ್ಯ ಘಟಕದ ಗೃಹರಕ್ಷಕ ಶ್ರೀ ಪ್ರಭಾಕರ ಪೈ ಇವರಿಗೆ ಹೂ, ಹಾರ, ಹಣ್ಣು ಹಂಪಲು ನೀಡಿ ಶಾಲು ಹೊದಿಸಿ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಡಾ|| ಚೂಂತಾರು ಅವರು ಮಾತನಾಡುತ್ತಾ ನಿವೃತ್ತ ಗೃಹರಕ್ಷಕರ ಸೇವೆ ಬಹಳ ಸ್ಮರಣೀಯ. ಇವರು ಇತರ ಎಲ್ಲಾ ಗೃಹರಕ್ಷಕರಿಗೆ ಮಾದರಿಯಾಗಿ ಕೆಲಸ ಮಾಡಿದ್ದಾರೆ. ನಿಷ್ಕಾಮ ಸೇವೆ, ಸೇವೆಯೇ ಪರಮಗುರಿ ಎನ್ನುವ ಧ್ಯೇಯ ವಾಕ್ಯದೊಂದಿಗೆ ಸಮಾಜ ಸೇವೆ ಮಾಡುತ್ತಾ ಕನಿಷ್ಠ ಗೌರವ ಧನಕ್ಕೆ ಕೆಲಸ ಮಾಡುವ ಗೃಹರಕ್ಷಕರು ನಮ್ಮ ದೇಶದ ಆಸ್ತಿ. ನೆರೆಹಾವಳಿ, ಕೋಮುಗಲಭೆ ನಿಯಂತ್ರಣ, ಚುನಾವಣೆ ಬಂದೋಬಸ್ತ್ ಪೊಲೀಸ್ ಠಾಣಾ ಕರ್ತವ್ಯಗಳಲ್ಲಿ ಜನರ ರಕ್ಷಣೆ ಮತ್ತು ಸಮಾಜದ ಆಸ್ತಿ ಪಾಸ್ತಿ ರಕ್ಷಣೆಯಲ್ಲಿ ಗೃಹರಕ್ಷಕರ ಪಾತ್ರ ಬಹಳ ದೊಡ್ಡದು. ನೈಸರ್ಗಿಕ ಮತ್ತು ಮಾನವ ನಿರ್ಮಿತ ದುರಂತಗಳಾದಾಗ ಸಮಾಜವನ್ನು ರಕ್ಷಿಸುವಲ್ಲಿ, ಸಮಾಜದ ಆರೋಗ್ಯವನ್ನು ಕಾಪಾಡುವಲ್ಲಿ ಗೃಹರಕ್ಷಕರು ಬಹುಮುಖ್ಯ ಭೂಮಿಕೆ ವಹಿಸಿದ್ದಾರೆ. ಅವರ ನಿವೃತ್ತಿಯಿಂದ ಇಲಾಖೆಗೆ ಬಹಳ ತುಂಬಲಾರದ ನಷ್ಟ ಎಂದು ನುಡಿದರು. ಅವರ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಛೇರಿಯ ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಶ್ಯಾಮಲಾ ಎ., ಕಛೇರಿ ಸಿಬ್ಬಂದಿ ಶ್ರೀಮತಿ ಮಂಜುಳಾ, ಬೆಳ್ತಂಗಡಿ ಘಟಕದ ಘಟಕಾಧಿಕಾರಿ ಶ್ರೀ ಜಯಾನಂದ, ಕಡಬ ಘಟಕದ ಘಟಕಾಧಿಕಾರಿ ಶ್ರೀ ತೀರ್ಥೇಶ್, ಪುತ್ತೂರು ಘಟಕದ ಅಭಿಮನ್ಯು ರೈ ಬಂಟ್ವಾಳ ಘಟಕದ ಘಟಕಾಧಿಕಾರಿ ಶ್ರೀ ಐತಪ್ಪ, ಪ್ರಭಾರ ಘಟಕಾಧಿಕಾರಿಗಳಾದ ವಿಟ್ಲದ ಸಂಜೀವ, ಪಣಂಬೂರು ಘಟಕದ ಶಿವಪ್ಪ ನಾಯ್ಕ, ಸುರತ್ಕಲ್‍ನ ರಮೇಶ್, ಸುಬ್ರಹ್ಮಣ್ಯ ಘಟಕದ ಹರಿಶ್ಚಂದ್ರ, ಉಪ್ಪಿನಂಗಡಿಯ ದಿನೇಶ್ ಬಿ., ಉಳ್ಳಾಲದ ಸುನಿಲ್, ಮೂಡಬಿದ್ರಿಯ ಚಂದ್ರಶೇಖರ್, ಬೆಳ್ತಂಗಡಿಯ ಚಾಕೋ, ವಿನೋದ್ ಆಳ್ವ, ಮಂಗಳೂರಿನ ಸಾರ್ಜಂಟ್ ಶ್ರೀ ಸುನಿಲ್ ಕುಮಾರ್, ಸುಲೋಚನ, ನಿಶಾ, ಚಂಪಾಶ್ರೀ, ಸಂಜಯ್, ರಾಹುಲ್ ಮುಂತಾದವರು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading