ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಅಧ್ಯಕ್ಷರಾಗಿ ಸುಳ್ಯದ ಶ್ರೀಮತಿ ಕಮಲಾ ಗೌಡ ಗೂನಡ್ಕ ಉಪಾಧ್ಯಕ್ಷರಾಗಿ ಪತ್ರಕರ್ತ ಹಸೈನಾರ್ ಜಯನಗರ ಆಯ್ಕೆಯಾಗಿದ್ದಾರೆ.
ಮಂಗಳೂರು ಪಡಿ ಕಚೇರಿಯಲ್ಲಿ ಆ 31 ರಂದು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ನಯನಾ ರೈ ಪುತ್ತೂರು ರವರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆದು ಕಳೆದ ಸಾಲಿನ ವರದಿ ಮತ್ತು ಲೆಕ್ಕ ಪತ್ರವನ್ನು ಕಾರ್ಯದರ್ಶಿ ಕಮಲಾ ಗೌಡ ಮಂಡಿಸಿದರು.
ಸಭೆಯಲ್ಲಿ ಮುಂದಿನ ದಿನಗಳಲ್ಲಿ ಒಕ್ಕೂಟದ ವತಿಯಿಂದ ತಾಲೂಕು, ಜಿಲ್ಲಾ ಮಟ್ಟದಲ್ಲಿ ಮಕ್ಕಳ ರಕ್ಷಣೆಗಾಗಿ ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಕ್ಲಬ್, ಮಕ್ಕಳ ಸಂಸತ್ತು, ಮಕ್ಕಳ ವಿಶೇಷ ಗ್ರಾಮ ಸಭೆ, ಮಕ್ಕಳ ರಕ್ಷಣೆಗಾಗಿ ಇರುವ ಮಕ್ಕಳ ರಕ್ಷಣಾ ವ್ಯವಸ್ಥೆಗಳ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಬಳಿಕ ನೂತನ ಸಾಲಿನ ಸಮಿತಿ ರಚಿಸಿ ನೂತನ ಸಾಲಿನ ಅಧ್ಯಕ್ಷರಾಗಿ ಕಮಲಾ ಗೌಡ ಗೂನಡ್ಕ, ಉಪಾಧ್ಯಕ್ಷರಾಗಿ ಹಸೈನಾರ್ ಜಯನಗರ,ಕಾರ್ಯದರ್ಶಿ ನಯನಾ ರೈ ಪುತ್ತೂರು, ಜೊತೆ ಕಾರ್ಯದರ್ಶಿ ಉಷಾ ನ್ಯಾಕ್ ಮಂಗಳೂರು, ಕೋಶಾಧಿಕಾರಿ ಸುಮಂಗಲ ಶೆಣೈ, ಸಂಘಟನಾ ಕಾರ್ಯದರ್ಶಿ ರೋಹಿಣಿ ರಾಘವ ಪುತ್ತೂರು, ಸದಸ್ಯರುಗಳಾಗಿ ಮಹಮ್ಮದ್ ರಫೀಕ್ ಪುತ್ತೂರು, ಕಸ್ತೂರಿ ಆರ್ ಪುತ್ತೂರು, ಆಶಾಲತಾ ಸುವರ್ಣ ಮಂಗಳೂರು, ಪ್ರೇಮಿ ಫೆರ್ನಾಂಡಿಸ್ ಮಂಗಳೂರು, ನಾರಾಯಣ ಕಿಲಂಗೋಡಿ ಸುಳ್ಯ, ನಂದಾ ಪಾಯಸ್ ಮಂಗಳೂರು, ದಾಕ್ಷಾಯಿನಿ ಮಂಗಳೂರು ರವನ್ನು ಆಯ್ಕೆ ಮಾಡಲಾಯಿತು.
ನಯನಾ ರೈ ಸ್ವಾಗತಿಸಿ ವಂದಿಸಿದರು.
ಮಂಗಳೂರು ಪಡಿ ಸಂಸ್ಥೆಯ ಕಾರ್ಯನಿರ್ವಾಹಣಾಧಿಕಾರಿ ರೆನ್ನಿ ಡಿಸೋಜ, ಸುಳ್ಯ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರ ಸಮಿತಿ ಅಧ್ಯಕ್ಷ ಶಂಕರ್ ಪೆರಾಜೆ ಮೊದಲಾದವರು ಉಪಸ್ಥಿತರಿದ್ದರು.